ಕುಮಾರಸ್ವಾಮಿ ಕಾಮರಾಜ್ (೧೫ ಜುಲೈ ೧೯೦೩–೨ ಅಕ್ಟೋಬರ್ ೧೯೭೫) ತಮಿಳು ನಾಡಿನ ಮಾಜಿ ಮುಖ್ಯ ಮಂತ್ರಿ,ಸ್ವಾತಂತ್ರ್ಯ ಹೋರಾಟಗಾರ,ಮುತ್ಸದ್ಧಿಯಾಗಿದ್ದರು.ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.. ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನಲ್ಲಿ ಮುಂಚೂಣಿ ಸ್ಥಾನದಲ್ಲಿದ್ದು , ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಇಂದಿರಾ ಗಾಂಧಿಯವರನ್ನು ಪ್ರಧಾನಮಂತ್ರಿಗಳನ್ನಾಗಿಸುವಲ್ಲಿ ಪ್ರಧಾನ ಭೂಮಿಕೆಯನ್ನು ನಿರ್ವಹಿಸಿದವರು. ತಮಿಳು ಬಾಡಿನಲ್ಲಿ ಮುಖ್ಯಮಂತ್ರಿಯಾಗಿ ಮಕ್ಕಳಿಗೆ ಮದ್ಯಾಹ್ನನ ಊಟವನ್ನು ನೀಡಿ ಗ್ರಾಮೀಣ ಭಾಗದ ಲಕ್ಷಾಂತರ ಮಕ್ಕಳು ವಿದ್ಯೆ ಕಲಿಯುವಂತೆ ಮಾಡಿದರು. ಇವರಿಗೆ ಮರಣೋತ್ತರವಾಗಿ ೧೯೭೬ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು,. === ಆಧಾರ ===