ಕೆ.ಟಿ.ವೇಣುಗೋಪಾಲ್ (೧೯೪೭-೨೦೦೯) ಖ್ಯಾತ ಪತ್ರಕರ್ತ ಮತ್ತು ಕಥೆಗಾರ. === ಜನನ === ಇವರು ಕಾಸರಗೋಡಿನಲ್ಲಿ ೧೯೪೭ರಲ್ಲಿ ಜನಿಸಿದರು.ಕಾಸರಗೋಡಿನಲ್ಲಿಯೇ ವಿದ್ಯಾಭ್ಯಾಸ. === ಜೀವನ === ಇವರು ಉದಯವಾಣಿ ಪತ್ರಿಕೆಯಲ್ಲಿ ಮುಂಬೈ ವರದಿಗಾರರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು.ಇವರು ಉದಯವಾಣಿ ಪತ್ರಿಕೆಗೆ ಬರೆಯುತ್ತಿದ್ದ "ಮುಂಬಯಿ ಪತ್ರ"ಎಂಬ ಅಂಕಣ ಜನಪ್ರಿಯವಾಗಿತ್ತು. ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.ಇವರು ವೃತ್ತಿಪರ ಪತ್ರಕರ್ತರಾಗಿದ್ದರೂ ಉತ್ತಮ ಕಥೆಗಾರರೂ ಅಗಿದ್ದರು.ಇವರ ಬರವಣಿಗೆಯ ಮೇಲೆ ಕಥೆಗಾರ ನಿರಂಜನ ಹಾಗೂ ಮಲೆಯಾಳಂ ಭಾಷೆಯ ಲೇಖಕ ಎಂ.ಟಿ.ವಾಸುದೇವ ನಾಯರ್ ಇವರ ಪ್ರಭಾವ ಗಾಢವಾಗಿತ್ತು. === ಕೃತಿಗಳು === ಕಥಾಸಂಕಲನಗಳು ದೇವಕಿಯಮ್ಮನ ತರವಾಡು ಮನೆ ಜುಗಲಬಂದಿ ಮುಂಬಯಿ ಪತ್ರ ಬಾಳ್ ಠಾಕ್ರೆ ಮತ್ತು ಇತರ ಸಂದರ್ಶನಗಳು === ನಿಧನ === ಇವರು ತಮ್ಮ ೬೨ನೆಯ ವರ್ಷದಲ್ಲಿ ಅನಾರೋಗ್ಯದಿಂದ ಮೇ ೧೯ ೨೦೦೯ ರಂದು ಪುಣೆಯ ಆಸ್ಪತ್ರೆಯಲ್ಲಿ ನಿಧನರಾದರು. === ಉಲ್ಲೇಖಗಳು ===