ಡಾ| ಕೆ.ಮರುಳಸಿದ್ದಪ್ಪ ಇವರು ಕನ್ನಡ ಭಾಷೆಯ ವಿಮರ್ಶಕರು, ಕವಿಗಳು, ವಿದ್ವಾಂಸರು, ಸಾಹಿತಿಗಳು , ಪ್ರಾಧ್ಯಾಪಕರಾಗಿ ಖಾತ್ಯರಾಗಿದ್ದಾರೆ . ಇವರು ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರೂ,ಮುಖ್ಯಸ್ಥರೂ ಆಗಿದ್ದರು.ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದರು. === ಜನನ === ಡಾ| ಕೆ. ಮರುಳಸಿದ್ದಪ್ಪ ಚಿಕ್ಕಮಗಳೂರು ಜಿಲ್ಲೆಯ ಕಾರೇಹಳ್ಳಿ ಗ್ರಾಮದವರು. ತಂದೆ ಉಜ್ಜನಪ್ಪ, ತಾಯಿ ಕಾಳಮ್ಮ. ರಂಗಭೂಮಿ, ನಾಟಕ ಮತ್ತು ಜಾನಪದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿರುವ ಅವರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ‌ದ್ದರು. === ಕೃತಿಗಳು === === ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಸಂಪುಟ === ಷಟ್ಪದಿ ಸಾಹಿತ್ಯ (1975) === ಪಿಎಚ್ ಡಿ ಮಹಾಪ್ರಬಂಧ === ಆಧುನಿಕ ಕನ್ನಡ ನಾಟಕ ವಿಮರ್ಶೆ(೧೯೮೬) === ಪ್ರವಾಸ ಕಥನ === ನೋಟ ನಿಲುವು (೨೦೦೨) === ಸಂಪಾದಿತ ಕೃತಿಗಳು === ಕನ್ನಡ ನಾಟಕ: ವಿಮರ್ಶೆ (೧೯೭೮) ಲಾವಣಿಗಳು (೧೯೭೨) ಶತಮಾನದ ನಾಟಕ(೨೦೦೩) ಒಡನಾಟ (೨೦೦೩) ವಚನ ಕಮ್ಮಟ ( ಇತರರೊಂದಿಗೆ) ಗಿರೀಶ್ ಕಾರ್ನಾಡರ ನಾಟಕಗಳು: ಕನ್ನಡದ ಪ್ರತಿಕ್ರಿಯೆ (೨೦೧೦) === ಅನುವಾದ ಕೃತಿಗಳು === ಮೀಡಿಯಾ (ಯುರಿಪಿಡೀಸನ ನಾಟಕ),೧೯೮೮ ಎಲೆಕ್ಟ್ರ (ಸಾಫೋಕ್ಲಿಸನ ನಾಟಕ),೧೯೮೮ ರಕ್ತಕಣಗೀಲೆ (ರವೀಂದ್ರನಾಥ ಠಾಗೋರ್ ಕೃತಿ) ಭಾರತೀಯ ಜಾನಪದ ಸಮೀಕ್ಷೆ (ದುರ್ಗಾ ಭಾಗವತ್),೧೯೭೪ === ಬಿಡಿ ಬರಹಗಳು === ಉಲ್ಲಾಸ (೨೦೧೩) ಲಂಕೇಶ ಬದುಕು ಬರಹ (೨೦೧೯) == ಉಲ್ಲೇಖಗಳು ==