ಕೆತ್ತನೆ ಎಂದರೆ ಮೂಲವಸ್ತುವಿನಿಂದ ಭಾಗಗಳನ್ನು ಹೆರೆದು/ಕೆತ್ತುವ ಮೂಲಕ ಆ ಮೂಲವಸ್ತುವಿನಿಂದ ಯಾವುದಕ್ಕಾದರೂ ಆಕಾರ ಕೊಡಲು ಉಪಕರಣಗಳನ್ನು ಬಳಸುವ ಕ್ರಿಯೆ. ಅದರಿಂದ ಚೂರುಗಳನ್ನು ತೆಗೆದಾಗ ಕೂಡ ಒಂದು ರೂಪವನ್ನು ಹಿಡಿದಿಡಲು ಸಾಕಷ್ಟು ಗಟ್ಟಿಯಾಗಿರುವ, ಅದೇ ಸಮಯಕ್ಕೆ ಲಭ್ಯವಾದ ಉಪಕರಣಗಳಿಂದ ಅದರ ಭಾಗಗಳನ್ನು ಕೆತ್ತುವಷ್ಟು ಮೃದುವಾದ ಯಾವುದೇ ಮೂಲವಸ್ತುವಿಗೆ ಈ ತಂತ್ರವನ್ನು ಅನ್ವಯಿಸಬಹುದು. ಶಿಲ್ಪವನ್ನು ತಯಾರಿಸುವ ಸಾಧನವಾಗಿ ಕೆತ್ತನೆಯು ಜೇಡಿಮಣ್ಣು, ಹಣ್ಣು, ಮತ್ತು ಕರಗಿಸಿದ ಗಾಜಿನಂತಹ ಮೃದು ಮತ್ತು ಬಡಿದು ತಗಡಾಗಿಸಬಲ್ಲ ವಸ್ತುಗಳನ್ನು ಬಳಸುವ ವಿಧಾನಗಳಿಂದ ಭಿನ್ನವಾಗಿದೆ. ಮೃದುವಾಗಿದ್ದಾಗ ಇವುಗಳಿಗೆ ಅಪೇಕ್ಷಿತ ರೂಪದ ಆಕಾರ ಕೊಡಬಹುದು ಮತ್ತು ನಂತರ ಆ ರೂಪದಲ್ಲಿ ಅವುಗಳನ್ನು ಗಟ್ಟಿಯಾಗಿಸಬಹುದು. ಬಡಿದು ತಗಡಾಗಿಸಬಲ್ಲ ವಸ್ತುಗಳನ್ನು ಬಳಸುವ ವಿಧಾನಗಳಿಗಿಂತ ಕೆತ್ತನೆಗೆ ಮತ್ತಷ್ಟು ಹೆಚ್ಚು ಕೆಲಸ ಬೇಕಾಗುವ ಸಾಧ್ಯತೆಯಿರುತ್ತದೆ. ಕೆತ್ತನೆಯ ಬಗೆಗಳಲ್ಲಿ ಮೂಳೆ ಕೆತ್ತನೆ, ಬಿಲ್ಲೆ ಕೆತ್ತನೆ, ಹಣ್ಣು ಕೆತ್ತನೆ, ಹಾಲುಗುಂಬಳ ಕೆತ್ತನೆ, ಹಿಮ ಕೆತ್ತನೆ, ದಂತ ಕೆತ್ತನೆ, ಕಲ್ಲು ಕೆತ್ತನೆ (ಕಲ್ಲುಕೊರೆತ), ತರಕಾರಿ ಕೆತ್ತನೆ, ದಾರು ಕೆತ್ತನೆ, ನಾಣ್ಯ ಕೆತ್ತನೆ, ಮರ ಕೆತ್ತನೆ ಸೇರಿವೆ. == ಉಲ್ಲೇಖಗಳು ==