ಸಾಮಾನ್ಯ ಇಂಗ್ಲಿಷ್‌ (ಇಂಗ್ಲೆಂಡ್ ಮತ್ತು ಅಮೆರಿಕಾ) ಭಾಷೆಯಲ್ಲಿ ಕೆನ್ನೇರಳೆ ಬಣ್ಣವನ್ನು ಕೆಂಪು ಮತ್ತು ನೀಲಿ ಬಣ್ಣಗಳ ಮಿಶ್ರಣದಿಂದ ಲಭಿಸುವ ಬಣ್ಣದ ಛಾಯೆ ಅಥವಾ ನೆರಳು ಎಂದು ಹೇಳಲಾಗುತ್ತದೆ. ಪ್ರಾಥಮಿಕ ಬಣ್ಣಗಳಾದ ಕೆಂಪು ಮತ್ತು ನೀಲಿಯನ್ನು ಬೇರೆ ಬೇರೆ ಪ್ರಮಾಣದಲ್ಲಿ ಸೇರಿಸಿದಾಗ ಅದು ತಿಳಿಯಾದ ಬಣ್ಣವನ್ನು ಪಡೆದುಕೊಳ್ಳುತ್ತದೆ. ಬಣ್ಣ ಹಾಕಲು ಬಳಸುವ ವರ್ಣದ್ರವ್ಯವನ್ನು ತೆಗೆದಾಗ ಅದು ಪ್ರಾಥಮಿಕ ಮೆಜೆಂಟಾ ಬಣ್ಣಕ್ಕೆ ಸಮನಾಗಿರುತ್ತದೆ. ಅಥವಾ ಕೆಂಪು ಮತ್ತು ನೀಲಿಯನ್ನು ಕೆನ್ನೇರಳೆ ಜೊತೆ ಸೇರಿಸಿದಾಗ ಅದು ಉಂಟಾಗುತ್ತದೆ. ಅಥವಾ ಮೇಲೆ ಹೇಳಿದ ಎರಡನ್ನು ಸೇರಿಸಿದಾಗ ಅಲ್ಪ ಪ್ರಮಾಣದ ಶುದ್ಧತ್ವ ಇರುವ ಬಣ್ಣವು ಬರುವ ಫಲಿತಾಂಶವಾಗಿದೆ. ಮೂರನೇ ಪ್ರಾಥಮಿಕ ಬಣ್ಣವಾದ ತಿಳಿ ಹಸಿರು, ಹಳದಿ ಬಣ್ಣದ ವರ್ಣದ್ರವ್ಯದ ಕೆಲ ಪ್ರಮಾಣವನ್ನು ಸೇರಿಸಿದಾಗ ಕಡಿಮೆ ಪ್ರಮಾಣದ ಶುದ್ಧತ್ವವಿರುವ ಬಣ್ಣಕ್ಕೆ ಕಾರಣವಾಗುತ್ತದೆ. ಬಣ್ಣಗಳಲ್ಲಿ ವ್ಯತ್ಯಾಸವಾಗಿರುವುದರಿಂದ ಇಲ್ಲಿ ಉಂಟಾಗುವ ಬಣ್ಣಗಳ ಛಾಯೆಯನ್ನು ಕೆನ್ನೇರಳೆ ಬಣ್ಣವೆಂದು ನಿಖರವಾಗಿ ಹೇಳಲು ಸಾಧ್ಯವಾಗದು. ಕಡು ನೇರಳೆ (ಮೆಜೆಂಟಾ) ಅಥವಾ ನೇರಳೆ (ಹೆಲಿಯೋಟ್ರೋಪ್) ಬಣ್ಣಗಳ ನಿರ್ಧಿಷ್ಟ ಛಾಯೆಯನ್ನು ಕೆಲ ಜನರು ಕರಾರುವಕ್ಕಾಗಿ ಸೂಚಿಸುತ್ತಾರೆ. ಕೆಂಪು ಮತ್ತು ತೆಳು ನೀಲಿ ಬಣ್ಣಗಳ ಕಣ್ಣಳತೆಯ ಸೂಕ್ಷ್ಮತೆಯ ವ್ಯತ್ಯಾಸವು ಸ್ವಲಕ್ಷಣದ ಮತ್ತೊಂದು ವ್ಯತ್ಯಾಸವನ್ನು ತೋರಿಸುತ್ತದೆ. ಬಣ್ಣದ ಸಿದ್ಧಾಂತದ ಪ್ರಕಾರ, "ಕೆನ್ನೇರಳೆ" ಬಣ್ಣವನ್ನು ಕಡುಬಣ್ಣದ ನೀಲಿ ಮತ್ತು ಕೆಂಪು ಬಣ್ಣಗಳ ನಡುವಿನ ಯಾವುದೇ ಅದೃಶ್ಯ () ಬಣ್ಣವೆಂದು (ಕಡುಬಣ್ಣದ ನೀಲಿ ಮತ್ತು ಕೆಂಪು ಬಣ್ಣಗಳನ್ನು ಹೊರತುಪಡಿಸಿ) ಹೇಳಲಾಗುತ್ತದೆ. ಈ ಅದೃಶ್ಯ ಬಣ್ಣಗಳಾದ ನೇರಳೆ ಮತ್ತು ಕೃತಕವಾಗಿ ತಯಾರಿಸಲಾದ ನೀಲಿ ನೇರಳೆ ಬಣ್ಣದ ವರ್ಣದ್ರವ್ಯವು ಬಣ್ಣಗಳ ಸಿದ್ಧಾಂತದ ಪ್ರಕಾರ ಕೆನ್ನೇರಳೆ ಬಣ್ಣ ಅಲ್ಲ. ಆದರೂ ಅವುಗಳನ್ನು ಇಂಗ್ಲಿಷ್‌ನ ಸಾಮಾನ್ಯ ಬಳಕೆಯಲ್ಲಿ ಈಗಲೂ ಕೆನ್ನೇರಳೆ ಬಣ್ಣವೆಂದೇ ಬಳಸಲಾಗುತ್ತದೆ. ಅವುಗಳು ಕೆಂಪು ಮತ್ತು ನೀಲಿ ನೇರಳೆ ಬಣ್ಣಗಳ ಸಂಯೋಜನೆಯಿಂದ ಉಂಟಾಗಿರುವ ಬಣ್ಣವಾಗಿರುವುದೇ ಇದಕ್ಕೆ ಕಾರಣವಾಗಿದೆ. ಕಲೆಯಲ್ಲಿ ಕಡುಗೆಂಪು, ನೀಲಿ-ನೇರಳೆ ಮತ್ತು ಇದರ ತಿಳಿಬಣ್ಣಗಳು ಮತ್ತು ಛಾಯೆಗಳ ಮಧ್ಯೆ ಕೆನ್ನೇರಳೆಯು ಬಣ್ಣದ ಚಕ್ರದ ಮೇಲಿನ ಬಣ್ಣ. ಈ ಬಣ್ಣವನ್ನು ವಿದ್ಯುತ್ ನೇರಳೆಯನ್ನಾಗಿ ಈ ಕೆಳಗಿನಂತೆ ವಿವರಿಸಲಾಗಿದೆ. ಮಾನವನ ಬಣ್ಣದ ಮನಶ್ಯಾಸ್ತ್ರದಲ್ಲಿ ನೇರಳೆಯನ್ನು ಉನ್ನತ ಮತ್ತು ಶ್ರೇಷ್ಠ ಸಂಬಂಧ ಜತೆ ಕಾಣಲಾಗುತ್ತದೆ. (ಪ್ರಾಚೀನ ಸಂಪ್ರದಾಯಬದ್ಧ ಮನೆತನದವರು ಮಾತ್ರ ಶ್ರೇಷ್ಠ ನೇರಳೆ(ಟೈರಿಯನ್) ಬಣ್ಣಗಳನ್ನು ಬಳಸುತ್ತಿದ್ದರು) == ಪದರಚನೆ ಮತ್ತು ವ್ಯಾಖ್ಯಾನಗಳು == ಎಂಬ ಶಬ್ದವು ಹಳೆಯ ಇಂಗ್ಲಿಷ್ ಪದವಾದ ಎಂಬ ಶಬ್ದದಿಂದ ಬಂದಿದೆ. ಇದು ಲ್ಯಾಟಿನ್ ಭಾಷೆಯ ಎಂಬ ಮೂಲ ಪದದಿಂದ ಹುಟ್ಟಿಕೊಂಡಿದೆ. ಇದನ್ನು ಕೊಯ್ನಿ ಗ್ರಿಕ್πορφύρα( ) ದಿಂದ ಪಡೆಯಲಾಗಿದೆ, ಪ್ರಾಚೀನ ಸಂಪ್ರದಾಯದಂತೆ ಶ್ರೇಷ್ಠ ನೇರಳೆ ಬಣ್ಣವನ್ನು ಸ್ಪಿನ್ನಿ ಡೈ- ಮುರೆಕ್ಸ್‌ಸ್ನೈಲ್‌ನ(ಬಸವನ ಹುಳು) ಸಿಂಬಳ ಅಥವಾ ಅಂಟಿನಿಂದ ಟೈರಿಯನ್ ಪರ್ಪಲ್ ಡೈ ತಯಾರಿಸುತ್ತಾರೆ. ಕ್ರಿ.ಶ. 975ನೇ ಇಸವಿಯಲ್ಲಿ ಇಂಗ್ಲಿಷ್ ನಲ್ಲಿ '' ಎಂಬ ಶಬ್ದವನ್ನು ಮೊದಲ ಬಾರಿಗೆ ದಾಖಲಿತವಾಗಿ ಬಳಸಲ್ಪಟ್ಟಿತ್ತು. == ಕೆನ್ನೇರಳೆ ಮತ್ತು ನೀಲಿ ನೇರಳೆ == ನೀಲಿ ನೇರಳೆಯು ನೀಲಿ ಬಣ್ಣಕ್ಕಿಂತ ಅಲೆಯಳತೆಯ ಅದೃಶ್ಯ ಬಣ್ಣವಾಗಿದೆ(ಅಂದಾಜು 380-420 , ಹಾಗೆಯೇ ಕೆನ್ನೇರಳೆಯು ಕೆಂಪು ಮತ್ತು ನೀಲಿ ಅಥವಾ ತೆಳು ನೀಲಿ ನೇರಳೆಯ ಸಂಯೋಜನೆಯಾಗಿದೆ. ಆದರೆ ಕೆನ್ನೇರಳೆ ಬಣ್ಣವು ಎಲ್ಲವುಗಳೊಂದಿಗೆ ಬೆರೆಯುವ ಬಣ್ಣವಾಗಿಲ್ಲ. ನೇರಳೆಯು ವರ್ಣಪಟ್ಟಿಯಲ್ಲಿಲ್ಲದ ಬಣ್ಣವಾಗಿದೆ. ನಿಜ ಅರ್ಥದಲ್ಲಿ ಪ್ರಸ್ತುತವಾಗಿ ನೇರಳೆಯು ನ್ಯೂಟನ್‌ನ ಬಣ್ಣದ ಚಕ್ರಕ್ಕೆ ಸಂಬಂಧಪಡುವುದಿಲ್ಲ. (ಕಡು ನೀಲಿಯಿಂದ ಕೆಂಪಿಗೆ ನೇರವಾಗಿ ತಿರುಗುವುದು). ಇದು ಆಧುನಿಕದಲ್ಲೊಂದಾಗಿದ್ದು, ಕೆಂಪು ಮತ್ತು ಕಡುನೀಲಿಯ ನಡುವೆ ಇದೆ. "ತೆಳು ಕೆನ್ನೇರಳೆಯ ತರಂಗಾಂತರ" ದಲ್ಲಿ ಬೇರೆ ವಿಷಯಗಳೇ ಇಲ್ಲ ಇದು ಸಂಯೋಜನೆಗಳಿಂದಿದೆ. ಭಾರತೀಯ ಸಾಮ್ರಾಜ್ಯದ ಕೈಪಿಡಿಯ ರೇಖಾಚಿತ್ರದಲ್ಲಿ ನೋಡುವುದಾದರೆ ನೇರಳೆ ಬಣ್ಣವು ಕೆಳಮಟ್ಟದ ಎಡಭಾಗದಲ್ಲಿರುವ ಬಾಗಿದ ಗಡಿರೇಖೆಯಾಗಿದ್ದು, ನೇರ ರೇಖೆಯಾದ ಕೆನ್ನೇರಳೆಯು ತುತ್ತತುದಿಯ ಬಣ್ಣವಾದ ಕೆಂಪು ಮತ್ತು ನೇರಳೆ ಬಣ್ಣಕ್ಕೆ ಹೋಗಿ ಸೇರುತ್ತದೆ. ಈ ರೇಖೆಯನ್ನು ಕೆನ್ನೇರಳೆಯ ರೇಖೆ ಎಂದು ಗುರುತಿಸಲಾಗುತ್ತದೆ. ಮನೋಭೌತಶಾಸ್ತ್ರದ ಒಂದು ಕುತೂಹಲಕಾರಿ ಲಕ್ಷಣವಾಗಿ ಎರಡು ಬಣ್ಣಗಳನ್ನು ತೆಗೆದುಕೊಂಡು ಅವುಗಳನ್ನು ಬೇರೆ ಬೇರೆಯಾಗಿ ಬಳಸಿದಾಗ ಅವುಗಳು ಕಾಣಿಸಿಕೊಳ್ಳುವ ಜತೆಗೆ ಬಣ್ಣಗಳ ಪ್ರಕಾಶತೆಯನ್ನು ಅಳೆಯಬಲ್ಲ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ. ನೇರಳೆ ಬಣ್ಣದ (ವೈಯಲೆಟ್) ಪ್ರಕಾಶತೆಯನ್ನು ಅಳೆಯಬಲ್ಲ ಪ್ರಮಾಣದಲ್ಲಿ ಹೆಚ್ಚಳವಾದಾಗ ನೀಲಿ ಮಿಶ್ರಣವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರಿಸಿದಾಗ ಕಾಣಿಸಿಕೊಳ್ಳುವ ಫಲಿತಾಂಶವಾದ ಬಿಜಾಲ್ಡ್-ಬ್ರೂಕ್ ಶಿಫ್ಟ್ (-Brücke)ನ ಸ್ಥಾನದಲ್ಲಿ ಬದಲಾವಣೆಯಾಗುತ್ತದೆ. ಇದೇ ರೀತಿ ನೀಲಿ ಅಂಶದಲ್ಲಿ ಹೆಚ್ಚಳವಾದಂತೆ ಕೆನ್ನೇರಳೆಯಲ್ಲಿ ಹೆಚ್ಚಳವಾಗುವುದಿಲ್ಲ. ಶುದ್ಧ ನೇರಳೆಯನ್ನು ಯಾವುದೇ ಕಾರಣಕ್ಕೂ ಕೆಂಪು-ಹಸಿರು-ನೀಲಿ (ಆರ್.ಜಿ.ಬಿ) ಬಣ್ಣದ ವ್ಯವಸ್ಥೆಯಲ್ಲಿ ಪುನರ್ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಆದರೆ ನೀಲಿ ಮತ್ತು ಕೆಂಪು ಬಣ್ಣವನ್ನು ಸೇರಿಸಿದಾಗ ಆರ್.ಜಿ.ಬಿ. ಬಣ್ಣದ ಸಮೀಪಕ್ಕೆ ಬರುತ್ತದೆ. ಕೊನೆಗೆ ಬಣ್ಣದ ಫಲಿತಾಂಶದಲ್ಲಿ ಒಂದೇ ರೀತಿಯ ಮಿಶ್ರಣವಾದಂತೆ ಕಂಡುಬಂದರೂ ಸಹ ಕಡಿಮೆ ಪ್ರಮಾಣದ ಬಣ್ಣದ ಶುದ್ಧತ್ವವನ್ನು ಹೊಂದಿರುತ್ತದೆಯೇ ವಿನಃ ಶುದ್ಧ ನೇರಳೆ ಬಣ್ಣವಾಗಿರುವುದಿಲ್ಲ == ವರ್ಗಗುಣ == ವರ್ಣಗುಣದ ರೇಖಾಚಿತ್ರದ ಪ್ರಕಾರ, ನೇರ ರೇಖೆಯು ತುತ್ತ ತುದಿಯ ಸ್ಪೆಕ್ಟರಲ್ ಬಣ್ಣಗಳಾದ ಕೆಂಪು ಮತ್ತು ನೇರಳೆಯನ್ನು ಸಂದಿಸಿದಾಗ ಆ ರೇಖೆಯನ್ನು ಕೆನ್ನೇರಲೆಯ ರೇಖೆ (ಅಥವಾ ಕೆನ್ನೇರಳೆ ಗಡಿರೇಖೆ) ಎಂದು ಗುರುತಿಸಲಾಗುತ್ತದೆ. ಇದು ಒಂದು ಮಿತಿಯಲ್ಲಿ ಮನುಷ್ಯನ ಬಣ್ಣಗಳ ಗ್ರಹಿಕೆಯನ್ನು ಪ್ರತಿನಿಧಿಸುತ್ತದೆ. ಮೆಜೆಂಟಾ ಅಥವಾ ಕಡು ನೀಲಿ ಬಣ್ಣವನ್ನು ಮುದ್ರಣ ಹಂತವಾದ ಸಿಎಂವೈಕೆ ()ಯಲ್ಲಿ ಬಳಸಲಾಗುತ್ತದೆ. ಇದು ಕೆನ್ನೇರಳೆಯ ಮಧ್ಯಭಾಗದ ಹತ್ತಿರದ ರೇಖೆಯಾಗಿರುತ್ತದೆ. ಆದರೆ ಬಹಳಷ್ಟು ಮಂದಿ ಕೆನ್ನೇರಳೆಯನ್ನು ನೀಲಿಯೊಂದಿಗೆ ಮಿಶ್ರಣ ಮಾಡಲು ಸಹಾಯಕವಾಗಿ ಬಳಸುತ್ತಾರೆ. ಅವುಗಳು ವಿದ್ಯುತ್ ಕೆನ್ನೇರಳೆಯಾಗಿ (ನೇರಳಾತೀತ) ಬಣ್ಣವನ್ನಾಗಿ ಈ ಕೆಳಗಿನಂತೆ ತೋರಿಸಲಾಗಿದೆ. (ಈ ಬಣ್ಣ ನೇರವಾಗಿ ಕೆನ್ನೇರಳೆ ರೇಖೆ ಮೇಲೆ ಇದೆ). ಕೆನ್ನೇರಳೆ (ಪರ್ಪಲ್) ಮತ್ತು ನೇರಳೆ (ವೈಯಲೆಟ್) ಬಣ್ಣಗಳ ಹೆಸರಿಗೆ ಸಂಬಂಧಿಸಿದಂತೆ ಕೆಲವು ಗೊಂದಲಗಳಿವೆ. . ಕೆನ್ನೇರೆಳೆ ಬಣ್ಣವು ಕೆಂಪು ಮತ್ತು ತಿಳಿ ನೀಲಿಯ ಸಂಯೋಜನೆಯಿಂದಾಗಿದೆ, ಅಲ್ಲಿ ನೀಲಿ-ನೇರಳೆ ಅದೃಶ್ಯ ದ ಬಣ್ಣವಾಗಿದೆ. == ಐತಿಹಾಸಿಕ ಬೆಳವಣಿಗೆ == === ಟೆರಿಯನ್ ಕೆನ್ನೇರಳೆ : ಪ್ರಾಚೀನ ಸಂಪ್ರದಾಯ === ಟೆರಿಯನ್ ಕೆನ್ನೇರಳೆ ಯ ನಿಜವಾದ ಬಣ್ಣವು ಕೆನ್ನೇರಳೆಯ ಮೂಲ ಬಣ್ಣದೊಂದಿಗೆ ಕೆನ್ನೇರಳೆ ಎಂಬ ಹೆಸರಿನಂತ ಪತ್ತೆ ಮಾಡಲಾಯಿತು. ಬಣ್ಣ ಹಚ್ಚಿಕೊಳ್ಳಲು ಉಪಯೋಗವಾಗವ ವಸ್ತುವನ್ನು ಮೃದ್ವಂಗಿ ಅಥವಾ ಚಿಪ್ಪುಜೀವಿಯಿಂದ ಪ್ರಾಚೀನ ಸಂಪ್ರದಾಯದಂತೆ ತಯಾರಿಸಲಾಯಿತು. ಇದನ್ನು ಶ್ರೀಮಂತಿಕೆ ಪ್ರತೀಕವಾಗಿ ಬಳಸಲಾಗುತ್ತಿತ್ತು. ಏಕೆಂದರೆ ಇದನ್ನು ಶ್ರೀಮಂತ ಮಂದಿ ಮಾತ್ರ ಬಳಸಲು ಶಕ್ತರಾಗಿದ್ದರು. ಆದ್ದರಿಂದಲೇ ಟೆರಿಯನ್ ಪರ್ಪಲ್ ಅನ್ನು ಸಾಮ್ರಾಜ್ಯದ ಅಥವಾ ಅಧಿಪತ್ಯದ ಕೆನ್ನೇರಳೆ ಎಂದು ಕರೆಯಲಾಗುತ್ತಿತ್ತು. ಮಿನೋನ್ ನಾಗರೀಕತೆಯ ಕಾಲದ ಮುಂಚೆಯೇ ಟೆರಿಯನ್ ಕೆನ್ನೇರಳೆಯನ್ನು ಅನ್ವೇಶಿಸಲಾಗಿತ್ತು. ಪ್ರಸಿದ್ದ ಅಲೆಕ್ಸಾಂಡರ್ ಚಕ್ರವರ್ತಿ (ಸಾಮ್ರಾಜ್ಯಶಾಹಿಗಳಿಗೆ ಬಿಟ್ಟುಕೊಟ್ಟ ಮೆಕೆಡೋನಿಯನ್ ಸಾಮ್ರಾಜ್ಯದ ಚಕ್ರವರ್ತಿ|ಮೆಕೆಡೋನಿಯನ್ ಸಾಮ್ರಾಜ್ಯದ ಚಕ್ರವರ್ತಿ). ಸೆಲ್ಯುಸಿಡ್ ಸಾಮ್ರಾಜ್ಯದ ರಾಜರು ಮತ್ತು ಈಜಿಪ್ಟಿನ ಟಾಲೆಮಿ ದೊರೆಗಳು ಟೆರಿಯನ್ ಪರ್ಪಲ್ ಅನ್ನು ಧರಿಸುತ್ತಿದ್ದರು. ರೋಮನ್ ಚಕ್ರವರ್ತಿಗಳ ಪ್ರತಿಷ್ಠೆಯ ನೀಳುಡುಪಾಗಿ (ನಿಲುವಂಗಿ) ಲೋಹದ ಬಂಗಾರದ ನೂಲಿನಿಂದ ತಯಾರಿಸಿದ ಟೆರಿಯನ್ ಕೆನ್ನೇರಳೆಯನ್ನು ಧರಿಸುತ್ತಿದ್ದರು. ರೋಮನ್ ಸೆನೆಟ್ ಸದಸ್ಯರು ತಮ್ಮ ಕಚೇರಿಯ ಚಿಹ್ನೆಯು ಟೆರಿಯನ್ ಪರ್ಪಲ್ ಬಣ್ಣದ್ದಾಗಿದ್ದು, ಆ ಚಿಹ್ನೆಯನ್ನು ತಮ್ಮ ಬಿಳಿಯ ಇಳಿವಸ್ತ್ರದಲ್ಲಿ ಬಳಸುತ್ತಿದ್ದರು. ಟೆರಿಯನ್ ಪರ್ಪಲ್‌ನ್ನು ಪೂರ್ವ ರೋಮನ್ ರ ಸಾಮ್ರಾಜ್ಯ 1453ರಲ್ಲಿ ಕೋನೆಯ ಪತನವಾಗುವ ವರೆಗೂ ಬಳೆಕೆಯಲ್ಲಿ ಮುಂದುವರಿಯಿತು. === ಹ್ಯಾನ್ ಪರ್ಪಲ್: ಪ್ರಾಚೀನ ಚೀನ === ಹ್ಯಾನ್ ಪರ್ಪಲ್ ಎಂಬುದು ಕೃತಕವಾಗಿ ತಯಾರಿಸಲಾದ ಒಂದು ರೀತಿಯ ವರ್ಣದ್ರವ್ಯವಾಗಿದೆ. ಇದನ್ನು ಕ್ರಿ.ಪೂ. 500ರಿಂದ ಕ್ರಿ.ಶ. 220ರ ಒಳಗೆ ಚೀನಾದಲ್ಲಿ ಕಂಡುಹಿಡಿಯಲಾಯಿತು. ಇದನ್ನು ಮಣ್ಣಿನಲ್ಲಿ ಸೈನಿಕರ ಗೊಂಬೆಯನ್ನು ಅಲಂಕರಿಸಲು ಇದನ್ನು ಬಳಸಲಾಗುತ್ತಿತ್ತು. === ರಾಯಲ್ (ಶ್ರೀಮಂತಿಕೆ) ಪರ್ಪಲ್: ಮಧ್ಯ ಯುರೋಪ್ === ಈ ರೀತಿಯ ಕೆನ್ನೇರಳೆ ಛಾಯೆಯು ಪ್ರಾಚೀನ ಟೆರಿಯನ್ ಕೆನ್ನೇರಳೆಗಿಂತಲೂ ಹೆಚ್ಚು ನೀಲಿ ಅಂಶವನ್ನು ಹೊಂದಿದೆ. ಮಧ್ಯಯುಗದ ಯುರೋಪಿನಲ್ಲಿ ನೀಲಿ ಬಣ್ಣವನ್ನು ಹಾಕುವ ವಸ್ತು ಅಪರೂಪ ಮತ್ತು ದುಬಾರಿ. ಕೇವಲ ಅತಿ ಶ್ರೀಮಂತರು ಅಥವಾ ಶ್ರೀಮಂತ ಪ್ರಭುತ್ವ ಹೊಂದಿರುವವರು ಮಾತ್ರ ಇವುಗಳನ್ನು ಧರಿಸಲು ಅಥವಾ ಬಳಸಲು ಶಕ್ತರಾಗಿದ್ದಾರೆ. (ಸಾಮಾನ್ಯ ವರ್ಗದವರು ಹೆಚ್ಚಾಗಿ ಹಸಿರು ಮತ್ತು ಕಂದು ಬಣ್ಣವನ್ನು ಧರಿಸುತ್ತಾರೆ). ಈ ಕಾರಣಕ್ಕಾಗಿ (ಮತ್ತು ಏಕೆಂದರೆ ಕ್ರಿ.ಶ. 476ರಲ್ಲಿ ಪಶ್ಚಿಮ ರೋಮನ್ ಸಾಮ್ರಾಜ್ಯದ ಪತನದ ನಂತರ ಟೈರಿಯನ್ ಪರ್ಪಲ್‌ನ್ನು ಪಶ್ಚಿಮ ಯುರೋಪ್‌ನಲ್ಲಿ ಬಳಕೆಗಾಗಿ ತೆಗೆದುಕೊಂಡು ಹೊಗಲಾಯಿತು) ಯುರೋಪಿಯನ್ನರು ಉಪಾಯದಿಂದ ಕೆನ್ನೇರಳೆಯನ್ನು ಇನ್ನೂ ಹೆಚ್ಚಿನ ನೀಲಿಯನ್ನಾಗಿ ಪರಿವರ್ತಿಸಿ ಅದನ್ನು ರಾಯಲ್ (ಶ್ರೀಮಂತಿಕೆಯ) ಕೆನ್ನೇರಳೆ ಅಥವಾ ಪರ್ಪಲ್ ಎಂದು ಕರೆದರು. ಏಕೆಂದರೆ ಈ ರಾಯಲ್ ನೀಲಿ ಬಣ್ಣವು ಶ್ರೀಮಂತ ಪ್ರಭುತ್ವ ಅಥವಾ ಸರ್ಕಾರ ಹೊಂದಿರುವವರಿಂದ ಧರಿಸಲ್ಪಡುತ್ತಿತ್ತು. ಮಧ್ಯಕಾಲಿನ ಯುರೋಪಿನ ರಾಜರು ಕೆನ್ನೇರಳೆ ಮಿಶ್ರಿತವಾಗಿರುವ ಬಟ್ಟೆಯನ್ನು ಧರಿಸುತ್ತಿದ್ದರು. === ಕಲೆಗಾರರ ಕೆನ್ನೇರಳೆ ವರ್ಣದ್ರವ್ಯ (ಕೆಂಪು-ನೇರಳೆ): 1930 === ಮೇಲೆ ಹೇಳಿದಂತೆ ಶ್ರೀಮಂತರ ಕೆನ್ನೇರಳೆ (ರಾಯಲ್ ಪರ್ಪಲ್) ಅಥವಾ ಕಪ್ಪು ನೇರಳೆ ಬಣ್ಣವನ್ನು ಒಂದು ವರ್ಗಕ್ಕೆ ಸಂಬಂಧಿಸಿದ ಕೆನ್ನೇರಳೆ ಎಂದು ಗುರುತಿಸಲಾಗುತ್ತದೆ. ಈ ಬಣ್ಣವು ಪರಿಣತಿ ಇಲ್ಲದ ಸಾಮಾನ್ಯ ಕಲೆಗಾರನ ದೃಷ್ಟಿಕೋನದ ಕೆನ್ನೇರಳೆಯಾಗಿತ್ತು. ಆದರೆ ವೃತ್ತಿನಿರತ ಕಲಾಕಾರರು ಮುನ್ಸೆಲ್ ಬಣ್ಣದ ಪದ್ಧತಿಯನ್ನು (ಇದುನ್ನು 1905ರಲ್ಲಿ ಪರಿಚಯಿಸಲಾಯಿತು. ಮತ್ತು 1930ರಲ್ಲಿ ಎಲ್ಲ ಕಡೆ ಜಾರಿಗೆ ತರಲಾಯಿತು.) ಜಾರಿಗೆ ತಂದಿತು. ಈಗ ತೋರಿಸಿದ ಹಾಗೆ ಕೆನ್ನೇರಳೆ ಬಣ್ಣವು ಕೆಂಪು ಮತ್ತು ರೆಡ್ ವೈಲೆಟ್ ಬಣ್ಣಗಳ ಪರ್ಯಾಯ ಬಣ್ಣವಾಗಿ ಬಳಲಲಾಗುತ್ತಿತ್ತು. ಕೆನ್ನೇರಳೆಯಿಂದ ವೈಯಲೆಟ್ ಗೆ ಇರುವ ವ್ಯತ್ಯಾಸವನ್ನು ನಿಖರವಾಗಿ ತಿಳಿಯುವ ಸಲುವಾಗಿ ಮತ್ತು ಬಣ್ಣವನ್ನು ಹಾಕಲು ಸುಲಭವಾಗುವುದಕ್ಕಾಗಿ ದೊಡ್ಡ ವರ್ಣಫಲಕವನ್ನು ಬಳಸಲಾಗುತ್ತಿತ್ತು. ಈ ಕೆಂಪು-ನೇರಳೆ ಬಣ್ಣವು ಕಲೆಗಾರರ ಕೆನ್ನೇರಳೆ ಎಂದು ಕಲಾವಿದರಿಂದ ಕರೆಯಲ್ಪಟ್ಟಿದೆ. ಈ ವರ್ಣದ್ರವ್ಯದ ಬಣ್ಣವು ವರ್ಣದ್ರವ್ಯ ಆಗುವ ಮೊದಲು ಬಣ್ಣದ ಚಕ್ರದಲ್ಲಿ ನೇರಳೆ ವರ್ಣದ್ರವ್ಯ ಮತ್ತು ಕಡು ನೇರಳೆ (ಮೆಜೆಂಟಾ)ವರ್ಣದ್ರವ್ಯ ನಡುವೆ ಕಾರ್ಯ ನಡೆಯುತ್ತಿರುತ್ತದೆ. ಬಣ್ಣದ ಪದ್ಧತಿಯಲ್ಲಿ ಈ ಬಣ್ಣವು ತುತ್ತ ತುದಿಯ 12ನೇ ವರ್ಣತೀವ್ರತೆಯನ್ನು (ಬಣ್ಣದ ಗಾಢವಾದ ಸ್ಥಿತಿ) ಹೊಂದಿದ್ದು, ಇದನ್ನು ಕೆಂಪು ಕೆನ್ನೇರಳೆ ಎಂದು ಕರೆಯಲಾಗುತ್ತದೆ. ಕಲೆಗಾರರ ವರ್ಣದ್ರವ್ಯ ಮತ್ತು ಬಣ್ಣದ (ಕುಂಚ) ಪೆನ್ಸಿಲ್ ಗಳನ್ನು ಕೆನ್ನೇರಳೆಯನ್ನಾಗಿ ಪಟ್ಟಿಮಾಡಲಾಗಿದ್ದು, ಪ್ರಸ್ತುತ ಕೆಂಪು-ನೇರಳೆ ಬಣ್ಣಗಳನ್ನಾಗಿ ತೋರಿಸಲಾಗುತ್ತಿದೆ. === ವಿದ್ಯುತ್ ಕಾಂತೀಯ === ವಿದ್ಯುತ್ ಕೆನ್ನೇರಳೆಯಾದ ನೇರಳೆ ಮತ್ತು ಕಡು ನೇರಳೆ (ಮೆಜೆಂಟಾ) ಬಣ್ಣಗಳ ನಡುವೆ ಈ ಬಣ್ಣವು ಸಂಪೂರ್ಣ ಅರೆಬರೆಯಾಗಿದೆ ಮತ್ತು ಈ ಕಾರಣಕ್ಕಾಗಿ ಕಲೆಗಾರಿಕೆಗಗಾಗಿ ತಕ್ಕದಾದ ಕೆನ್ನೇರಳೆ ವ್ಯಾಖ್ಯಾನವನ್ನು ರಚಿಸಲಾಯಿತು. ಕಂಪ್ಯೂಟರ್ ಪರದೆ (ಸ್ಕ್ರೀನ್) ಮೇಲೆ ಸಂಯೋಜನೀಯ ಬಣ್ಣಗಳನ್ನು ಬಳಸಲಾಗುತ್ತದೆ. ಇದರಲ್ಲಿ ಅತಿ ಪ್ರಕಾಶಮಾನವಾದ ಕೆನ್ನೇರಳೆ ಬಣ್ಣವನ್ನು ತಯಾರಿಸಲು ಸಾಧ್ಯವಿದ್ದು, ಪ್ರಾಥಮಿಕ ಬಣ್ಣಗಳ ಘಟಕದಲ್ಲಿ ತರಂಗಾಂತರ ಅಂಶಗಳನ್ನು ವರ್ಣದ್ರವ್ಯಗಳೊಂದಿಗೆ ಸೇರಿಸುವಾಗ ತೆಗೆಯಲಾಗುವುದು. ಕಂಪ್ಯೂಟರ್ ನಲ್ಲಿ ಸಮನಾದ ಬಣ್ಣವನ್ನು ಬಳಸುವಾಗ ವರ್ಣದ್ರವ್ಯಗಳ ಬಣ್ಣವಾದ ಕೆಂಪು-ನೇರಳೆಯು ವಿದ್ಯುತ್ ಕೆನ್ನೇರಳೆಗಿಂತ ಮೇಲಿನ ಅಂಶದೊಂದಿಗೆ ಕಾಣಿಸಿಕೊಳ್ಳುತ್ತದೆ. ಅದೇನೆಂದರೆ ಅತಿ ಪ್ರಕಾಶಿತ ಕೆನ್ನೇರಳೆಯನ್ನು ನೀವು ಕಂಪ್ಯೂಟರ್ (ಸ್ಕ್ರೀನ್) ಪರದೆಯಲ್ಲಿ ಪುನರ್ ಸೃಷ್ಠಿ ಮಾಡುವುದನ್ನು ನೋಡಬಹುದು. ಈ ಬಣ್ಣವು ಶುದ್ಧ ಕೆನ್ನೇರಳೆ ಎಂಬ ಭಾವನೆಯನ್ನು ಕಂಪ್ಯೂಟರ್ ಕಲಾವಿದರು (ಆರ್ಟಿಸ್ಟ್ ಗಳು) ಭಾವಿಸುತ್ತಾರೆ. ಶುದ್ಧ ವರ್ಣಶುದ್ಧತೆಯು ಕಂಪ್ಯೂಟರ್ ಪರದೆಯ ಮೇಲಿರುವ ಬಣ್ಣದ ಚಕ್ರದ ಅರ್ಧದವರೆಗೆ. ಈ ರೀತಿಯ ವಿದ್ಯುತ್ ಕೆನ್ನೇರಳೆಯು ಶುದ್ಧ ಮತ್ತು ಪ್ರಕಾಶಮಾನಮಾದ ಕೆನ್ನೆರಳೆಯಾಗಿದ್ದು, ಅದನ್ನು ಕಂಪ್ಯೂಟರ್ ಪರದೆ ಮೇಲೆ ಪ್ರದರ್ಶಿಸಲು ಸಾಧ್ಯವಾಗಿದೆ. == ಕಂಪ್ಯೂಟರ್ ವೆಬ್ ಬಣ್ಣವಾಗಿ ಕೆನ್ನೇರಳೆ == === ಕೆನ್ನೇರಳೆ (ಎಚ್ ಟಿ ಎಂ ಎಲ್/ಸಿ ಎಸ್ ಎಸ್ ಬಣ್ಣ) === ಈ ಕೆನ್ನೇರಳೆ ಬಣ್ಣವನ್ನು ಎಚ್‌ಟಿಎಂಎಲ್ ಮತ್ತು ಸಿಎಸ್‌ಎಸ್ ನಲ್ಲಿ ಬಳಸಲಾಗುತ್ತದೆ. ಇದನ್ನು X11 ಕೆನ್ನೇರಳೆ ಬಣ್ಣಕ್ಕಿಂತಲೂ ಅತಿ ಹೆಚ್ಚಾಗಿ ಮತ್ತು ಅಚ್ಚ ಕೆಂಪು ಮಿಶ್ರಿತ ಬಣ್ಣವನ್ನಾಗಿ (#800080) ತೋರಿಸಲಾಗುತ್ತಿದ್ದು, ಈ ಕೆಳೆಗೆ ತೋರಿಸಲಾದ (X11 ಬಣ್ಣ) (#A020F0), ಇವುಗಳು ನೀಲಿಮಯ ಮತ್ತು ಪ್ರಕಾಶಿತವಾಗಿವೆ. ಈ ಬಣ್ಣವನ್ನು ಎಚ್‌ಟಿಎಂಎಲ್/ಸಿಎಸ್‌ಎಸ್ ಕೆನ್ನೇರಳೆ ಅಂತಲೂ ಕರೆಯಲಾಗುತ್ತದೆ. === ಕೆನ್ನೇರಳೆ (X11 ಬಣ್ಣ) === ಕಂಪ್ಯೂಟರ್ ಪರದೆಯ ಬಲಭಾಗದಲ್ಲಿ ಕೆನ್ನೇರಳೆ ಬಣ್ಣವನ್ನು ಮುದ್ರಿಸಲಾಗಿದ್ದು, ಇದನ್ನು X11 ಬಣ್ಣ ಎಂದು ಬಣ್ಣಿಸಲಾಗುತ್ತದೆ. ಇದು ಮೇಲೆ ತೋರಿಸಿದ ಎಚ್ ಟಿ ಎಂ ಎಲ್ ಕೆನ್ನೇರಳೆಗಿಂತಲೂ ಹೆಚ್ಚು ಪ್ರಕಾಶಮಾನ ಮತ್ತು ನೀಲಿಯತೆಯಿಂದ ಕೂಡಿದೆ. ಕಂಪ್ಯೂಟರ್ ನಲ್ಲಿರುವ ಬಣ್ಣದ ಪಟ್ಟಿಯಲ್ಲಿ ಬಣ್ಣಗಳ ಹೆಸರನ್ನು ನೋಡಿದಾಗ X11 ಮತ್ತು ಎಚ್ ಟಿ ಎಂ ಎಲ್/ಸಿ ಎಸ್ ಎಸ್ ಬಣ್ಣಗಳ ನಡುವೆ ಘರ್ಷಣೆಗಳು ಆಗುತ್ತಿರುತ್ತವೆ. X11 ನೇ ಬಣ್ಣಗಳ ಹೆಸರಿನ ಬಗ್ಗೆ ಇರುವ ಬರಹಗಳನ್ನು ಗಮನಿಸಿದಾಗ ಈ ಬಣ್ಣಗಳು ಎಚ್ ಟಿ ಎಂ ಎಲ್ ಮತ್ತು X11 ನೇ ಬಣ್ಣಗಳ ನಡುವೆ ವ್ಯತ್ಯಾಸವನ್ನು ಸೂಚಿಸುತ್ತದೆ. ಈ ಬಣ್ಣವನ್ನು X11ನೇ ಬಣ್ಣ ಎಂತಲೂ ಹೇಳಲಾಗುತ್ತದೆ. === ಮಧ್ಯಮ ಕೆನ್ನೇರಳೆ (X11) === ಕಂಪ್ಯೂಟರ್‌ನ ಬಲಭಾಗದಲ್ಲಿ ವೆಬ್ ಬಣ್ಣಕ್ಕೆ ಮಧ್ಯಮ ಕೆನ್ನೇರಳೆ ಯನ್ನಾಗಿ ಮುದ್ರಿಸಲಾಗಿದೆ. ಈ ಬಣ್ಣವು ಮೇಲೆ ತೋರಿಸಿದ X11ನೇ ಕೆನ್ನೇರಳೆ ಬಣ್ಣದ ಮಧ್ಯಮ ಛಾಯೆಯನ್ನು ಹೊಂದಿದೆ. ಹೆಟ್ಟಿನ ಬದಲಾವಣೆಗಳು == ಇತರ ಬದಲಾವಣೆಗಳು == === ಆರ್ಕಿಡ್ === ಆರ್ಕಿಡ್ ಬಣ್ಣವು ಕೆನ್ನೇರಳೆಯ ತಿಳಿ ಛಾಯೆಯನ್ನು ಹೊಂದಿದ್ದು , ಆರ್ಕಿಡ್ ಎಂಬ ಹೆಸರು ಹೆಚ್ಚಿನ ಸಂತಾನೋತ್ಪತ್ತಿ ಗುಣ ಹೊಂದಿರುವ ಸೀತೆ ಹೂವಿನ ಗಿಡದ ತಳಿಯಿಂದ ಬಂದಿದೆ. ಅವುಗಳನ್ನು ಲೈಲಾ ಫುರ್ ಫುರಾಸಿಯಾ ಮತ್ತು ಆಸ್ಕೋಸೆಂಟ್ರಮ್ ಪುಸಿಲ್ಲಮ್ ಈ ಬಣ್ಣಗಳನ್ನು ಈ ಹೂವಿನ ಎಸಳುಗಳಿಂದ ತಯಾರಿಸಲಾಗಿದೆ. === ಹೆಲಿಯೋಟ್ರೋಪ್ (ನೇರಳೆ ಬಣ್ಣದ ಹೂ ಬಿಡುವ ಗಿಡ) === ಹೆಲಿಯೋಟ್ರೋಪ್ ಬಣ್ಣವು ಕೆನ್ನೇರಳೆ ಬಣ್ಣದ ಅತ್ಯುನ್ನತ ಛಾಯೆಯಾಗಿದೆ. ಹೆಲಿಯೋಟ್ರೋಪ್ ಗಿಡದ ಬಣ್ಣವನ್ನು ಈ ಹೆಲಿಯೋಟ್ರೋಪ್ ನಸುಗೆಂಪು ಮತ್ತು ಕೆನ್ನೇರಳೆ ಬಣ್ಣಗಳ ಮಿಶ್ರಣವಾಗಿದ್ದು, ಇದು ಹೆಲಿಯೋಟ್ರೋಪ್ ಹೂವನ್ನು ಪ್ರತಿನಿಧಿಸುತ್ತದೆ. === ವಿಲಕ್ಷಣ (ಸೈಕಿಡೆಲಿಕ್) ಕೆನ್ನೇರಳೆ === ಈ ಶುದ್ಧ ಪರಿಮಳವನ್ನು ಹೊಂದಿದ್ದ ಕೆನ್ನೇರಳೆ ಬಣ್ಣವು 1960ರ ಸಂದರ್ಭದಲ್ಲಿ ವರ್ಣದ್ರವ್ಯಕ್ಕೆ ಫ್ಲೋರಸೆಂಟ್ ಮೆಜಂಟಾ ಮತ್ತು ಫ್ಲೋರಸೆಂಟ್ ನೀಲಿ ಬಣ್ಣಗಳ ದ್ರವ್ಯವನ್ನು ಸೇರಿಸಿ ಫ್ಲೋರಸೆಂಟ್ ಕೆನ್ನೇರಳೆ ಯನ್ನು ತಯಾರಿಸಿ ವಿಲಕ್ಷಣ ತಿಳಿ ಕಪ್ಪು ಬೆಳಕಿನ ವರ್ಣಚಿತ್ರಕ್ಕೆ ಬಳಸಲಾಯಿತು. ಕೆನ್ನೇರಳೆಯ ಛಾಯೆಯು 1960ರ ದಶಕದ ಹಿಪ್ಪಿಸ್ ಜನಾಂಗ ಅಥವಾ ಸಮಾಜದ ವಿರುದ್ಧ ತಿರುಗಿ ಬಿದ್ದವರಲ್ಲಿ ಹೆಚ್ಚಾಗಿ ಪ್ರಚಾರಪಡೆಯಿತು. ಮತ್ತು ಜಿಮಿ ಹಿಂಡ್ರಿಕ್ಸ್ ಎಂಬಾತನ ಅತಿ ಇಷ್ಟದ ಬಣ್ಣವಾಗಿತ್ತು. ಹೀಗಾಗಿ ಇದನ್ನು ವಿಲಕ್ಷಣ ಕೆನ್ನೇರಳೆ ಎಂದು ಕರೆಯಲ್ಪಟ್ಟಿತು. ಈ ಬಣ್ಣದ ಛಾಯೆಯು ಮೆಜೆಂಟಾ ಮತ್ತು ವಿದ್ಯುತ್ ಕೆನ್ನೇರಳೆ ಬಣ್ಣಕ್ಕೆ ಅತಿ ಸಮೀಪವಾಗಿದೆ. 1980ರ ದಶಕದಲ್ಲಿ ವಿಕ್ಟೋರಿಯನ್ ಹೌಸ್ ನ ಪೂರ್ವ ಭಾಗದ ಮುಖ್ಯ ಬೀದಿಯಲ್ಲಿ ಜಿಮಿ ಹೆಂಡ್ರಿಕ್ಸ್ ಮ್ಯೂಸಿಯಂ ಇದೆ. ಇಲ್ಲಿ ಅರ್ಧ ನಿಷೇಧದ (ಕಟ್ಟಿದ) ದಕ್ಷಿಣದ ಎತ್ತರದ ಬೀದಿಯ ಎತ್ತರದ ಆ‍ಯ್‌ಶ್‌ಬರಿ ಯನ್ನು ಸ್ಯಾನ್ ಫ್ರಾನ್ಸಿಸ್ಕೋದ ನೆರೆಯಲ್ಲಿ ಈ ಬಣ್ಣವನ್ನು ಚಿತ್ರಿಸಿಲಾಗಿದೆ. === ಮಲ್ಬರಿ (ಉಪ್ಪುನೇರಳೆ, ಹಿಪ್ಪುನೇರಳೆ ಅಥವಾ ಕಡು ಕೆಂಪು ಬಣ್ಣ) === ಮಲ್ಬರಿ ಬಣ್ಣವು ಕಂಪ್ಯೂಟರ್ ಬಲಭಾಗದಲ್ಲಿ ಮುದ್ರಿತವಾಗಿರುತ್ತದೆ. ಈ ಬಣ್ಣವು ಮಲ್ಬರಿ ಬಣ್ಣದ ಲೇಪನವನ್ನು ಪ್ರತಿನಿಧಿಸುತ್ತದೆ. 1958ರಿಂದ 2003ರ ವೆರೆಗೆ ಕ್ರಯೋಲಾ () ಬಣ್ಣದ ಕಡ್ಡಿಯನ್ನು ಬಳಸಲಾಗುತ್ತಿತ್ತು. ಮಲ್ಬರಿನ್ನು ಬಣ್ಣದ ಹೆಸರನ್ನಾಗಿ ಇಂಗ್ಲಿಷ್ ಭಾಷೆಯಲ್ಲಿ 1776ರಲ್ಲಿ ಮೊದಲ ಬಾರಿಗೆ ದಾಖಲಾರ್ಹವಾಗಿ ಬಳಸಲಾಯಿತು. === ಪ್ಯಾನ್ಸಿ ಕೆನ್ನೇರಳೆ (ವಯೋಲ ಕುಲಕ್ಕೆ ಸೇರಿದ ಹೂವು) === ಪ್ಯಾನ್ಸಿ ಹೂವು ಅನೇಕ ಬಗೆಯನ್ನು ಹೊಂದಿದ್ದು, ಅದು ಮೂರು ವಿವಿಧ ಬಣ್ಣಗಳನ್ನು ಬಿಡುತ್ತದೆ. ಪ್ಯಾನ್ಸಿ (ನೇರಳೆ ಬಣ್ಣದ ಅತಿಯಾದ ಛಾಯೆ ಹೊಂದಿರುವುದು), ಪ್ಯಾನ್ಸಿ ನಸುಗೆಂಪು (ಪಿಂಕ್) ಮತ್ತು ಪ್ಯಾನ್ಸಿ ಕೆನ್ನೇರಳೆ ಎಂಬ ಬಣ್ಣದ ಹೂವುಗಳನ್ನು ಬಿಡುತ್ತದೆ. 1814ರಲ್ಲಿ ಮೊದಲ ಬಾರಿಗೆ ಪ್ಯಾನ್ಸಿ ಕೆನ್ನೇರಳೆಯನ್ನು ಬಣ್ಣ ಎಂದು ಹೆಸರಿಸಿ ದಾಖಲಿಸಲಾಯಿತು. === ರಿಗೇಲಿಯ (ರಾಜ ಲಾಂಛನ) === ರಿಗೇಲಿಯ ಕೆನ್ನೇರಳೆ ಬಣ್ಣದ ಛಾಯೆಯಾಗಿದೆ. ಇದನ್ನು ಕ್ಲೆಮ್ ಸನ್ ಯೂನಿವರ್ಸಿಟಿಯ ಒಂದು ಪ್ರಾಥಮಿಕ ಶಾಲೆಯಲ್ಲಿ ಬಳಸಲಾಗುತ್ತದೆ. == ಪ್ರಕೃತಿ == === ಸಸ್ಯಗಳು === ಕೆನ್ನೇರಳೆ ಸೂಜಿಹುಲ್ಲು ಕ್ಯಾಲಿಫೋರ್ನಿಯಾದ ರಾಜ್ಯಹುಲ್ಲು ಎಂದೇ ಕರೆಯಲ್ಪಟ್ಟಿದೆ. === ಪ್ರಾಣಿಗಳು === ಕೆನ್ನೇರಳೆ ಕಪ್ಪೆಯೆಂಬ ಉಭಯಚರ ಜಾತಿಯ ಪ್ರಾಣಿಯನ್ನು 2003ರಲ್ಲಿ ಭಾರತದಲ್ಲಿ ಕಂಡುಹಿಡಿಯಲಾಯಿತು. ಕೆನ್ನೇರಳೆ ಹನಿಕ್ರೀಪರ್. (ತೆವಳುವ ಜೇನು) == ಸಂಸ್ಕೃತಿ == === ಶೈಕ್ಷಣಿಕ ವಸ್ತ್ರ (ಸಮವಸ್ತ್ರ) === ಫ್ರೆಂಚ್ ಶೈಕ್ಷಣಿಕ ವಸ್ತ್ರ ಪದ್ಧತಿಯಲ್ಲಿ ಐದು ಸಾಂಪ್ರದಾಯಿಕ ಶಿಕ್ಷಣ ಕ್ಷೇತ್ರವನ್ನಾಗಿ ವಿಂಗಡಿಸಲಾಗಿದ್ದು, (ಕಲೆ, ವಿಜ್ಞಾನ, ವೈದ್ಯ, ಕಾನೂನು ಮತ್ತು ದೇವತಾ ಶಾಸ್ತ್ರ) ಈ ಎಲ್ಲವನ್ನು ವಿಭಿನ್ನ ಬಣ್ಣಗಳಿಂದ ಸಂಕೇತಿಸಲಾಗುತ್ತದೆ. ಶೈಕ್ಷಣಿಕ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುವ ಜನರು ಇಂಥ ಶಿಕ್ಷಣ ಕ್ಷೇತ್ರದಲ್ಲಿ ಪದವೀಧರರಾಗಿದ್ದಾರೆ ಎಂಬುದನ್ನು ತಿಳಿಯಬಹುದಾಗಿದೆ. ಕೆನ್ನೇರಳೆ (ಸಾಮಾನ್ಯವಾಗಿ ಅದ್ಧೂರಿ ಕೆನ್ನೇರಳೆ ಬಣ್ಣಕ್ಕೆ ಸಮೀಪವಾಗಿರುವ ಮಿಶ್ರ ಬಣ್ಣ) ಬಣ್ಣವು ದೈವತ್ವಶಾಸ್ತ್ರಕ್ಕೆ ವಿಶೇಷ ಲಕ್ಷಣವುಳ್ಳ ಬಣ್ಣವಾಗಿದೆ. ಇದನ್ನು ಉನ್ನತ ಶೈಕ್ಷಣಿಕ ಅಧಿಕಾರಿಗಳು (ಯೂನಿವರ್ಸಿಟಿ ಅಧ್ಯಕ್ಷ, ವಿಭಾಗದ ಮುಖ್ಯಸ್ಥ, ಕಾಲೇಜು ಮುಖ್ಯಸ್ಥರು) ಧರಿಸುತ್ತಾರೆ. ಯಾವಾಗ ಅವರು ಪದವೀಧರರಾಗುತ್ತಾರೆ ಆಗ ಆ ಕ್ಷೇತ್ರದ ಬಗ್ಗೆ ಗಮನಕೊಡುವುದಿಲ್ಲ. ==== ವರ್ಣಭೇದ ನೀತಿ ವಿರೋಧಿ ಚಳವಳಿ ==== ದಕ್ಷಿಣ ಆಫ್ರಿಕಾದ ಕೇಪ್ ಪ್ರಾಂತದಲ್ಲಿ ನಡೆಯುತ್ತಿದ್ದ ವರ್ಣಭೇದ ವಿರೋಧಿ ಚಳವಳಿಗೆ ವಿರುದ್ಧವಾಗಿ ಕೆನ್ನೇರಳೆ ಮಳೆ ಪ್ರತಿಭಟನೆ ನಡೆಸಲಾಯಿತು. ಇದನ್ನು ಸೆಪ್ಟೆಂಬರ್ 2, 1989ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಯಿತು. ಆಗ ಪೊಲೀಸರು ನೀರು ಒಂಟೆ ಜತೆ ಕೆನ್ನೇರಳೆ ವರ್ಣದ್ರವ್ಯವನ್ನು ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರ ಮೇಲೆ ಸಿಂಪಡಿಸಿದರು. ಇದು ಎಂಬ ಘೋಷಣೆಗೆ ಕಾರಣವಾಯಿತು. ==== ಖಗೋಳಶಾಸ್ತ್ರ ==== ಸಪ್ತ ನಕ್ಷತ್ರಗಳಲ್ಲಿ ಒಂದು ನಕ್ಷತ್ರವನ್ನು ಪ್ಲಿಯೋನ್ ಎಂದು ಕರೆಯಲಾಗಿದೆ. ಕೆಲವೊಮ್ಮೆ ಇದನ್ನು ಕೆನ್ನೇರಳೆ ಪ್ಲಿಯೋನ್ ಎಂದೂ ಕರೆಯುತ್ತಾರೆ. ಏಕೆಂದರೆ ಅಸ್ತಿತ್ವದಲ್ಲಿರುವ ವೇಗದ ನೂಲಿನ ನಕ್ಷತ್ರವು ಕೆನ್ನೇರಳೆಯ ವರ್ಣದ್ರವ್ಯವನ್ನು ಹೊಂದಿದೆ. ನೀಲಿ-ಬಿಳಿಯು ಮಂಕಾದ ಬಣ್ಣವಾಗಿ ಮಾರ್ಪಾಟಾಗುವುದೇ ಇದಕ್ಕೆ ಕಾರಣ. ಇದು ವಿದ್ಯುತ್ ಕಾಂತೀಯುಳ್ಳ ಜಲಜನಕ ಅನಿಲವನ್ನು ಸಣ್ಣ ವೃತ್ತಾಕಾರದಲ್ಲಿ ಹೊರಬಿಡುತ್ತದೆ. ==== ಬಿಲಿಯರ್ಡ್ ಆಟಗಳು ==== ಸ್ನೂಕರ್ ಪ್ಲಸ್ ಆಟದಲ್ಲಿ ಕೆನ್ನೇರಳೆ ಬಣ್ಣದ ಚೆಂಡಿಗೆ 10 ಅಂಕದ ಮೌಲ್ಯವಿದೆ. ಬಿಲಿಯರ್ಡ್ ಆಟದಲ್ಲಿ 4-ಘನ ಮತ್ತು 12 ಪಟ್ಚೆಪಟ್ಟೆಯಾಗಿರುವ ಕೆನ್ನೇರಳೆ ಬಣ್ಣದ ಚೆಂಡುಗಳು ಇರುತ್ತವೆ. ==== ಕಂಪ್ಯೂಟರ್ ಆಟಗಳು ==== ಕೊನೆಯಿಲ್ಲದ ಕ್ಷೇತ್ರಗಳಲ್ಲಿ ಅಥವಾ ಪ್ರದೇಶಗಳಲ್ಲಿ ಅಪರಿಚಿತ ಸಾಹಿಸಿಗಳು () ಉನ್ನತ ಸಮರತಂತ್ರ ಅಥವಾ ಕಾರ್ಯವಿಧಾನ/ಕಂಪ್ಯೂಟರ್‌ನ ಸಾಹಿಸಿ ಆಟಗಳನ್ನು ಆಡುವ ಆಟಗಾರರು ಸರಿಇದ್ದಂತೆ ಕಂಡರೂ ಅಂಸಭವವಾದ (ಕಲ್ಪನೆಗೆ ಸಂಬಂಧಪಟ್ಟ) ಆಕಾಶಗಂಗೆಯಲ್ಲಿನ ನಕ್ಷತ್ರಗಳ ರಾಶಿಯಂತೆ ಕಂಡು ಬುರುವ ಪ್ರದೇಶವನ್ನು ದ ಪರ್ಪಲ್ ವಾಯ್ಡ್ ಎಂದು ಕರೆಯಲಾಗುತ್ತದೆ. ==== ಕ್ಯಾಲೆಂಡರ್‌‍ಗಳು (ಪಂಚಾಂಗ) ==== ಥಾಯ್ಲೆಂಡ್ ಸೊಲರ್ ಕ್ಯಾಲೆಂಡರ್ ನಲ್ಲಿ ಶನಿವಾರ ಕೆನ್ನೇರಳೆ ಬಣ್ಣವನ್ನು ಕಾಣಬಹುದಾಗಿದೆ. ಶನಿವಾರದಂದು ಯಾರು ಬೇಕಾದರು ಕೆನ್ನೇರಳೆ ಬಣ್ಣದ ಬಟ್ಟೆಯನ್ನು ಹಾಕುತ್ತಾರೆ ಮತ್ತು ಶನಿವಾರದಂದು ಹುಟ್ಟಿದವರು ಕೆನ್ನೇರಳೆ ಬಣ್ಣವನ್ನು ಹೆಚ್ಚಾಗಿ ಬಳಸುತ್ತಾರೆ. ==== ಹಾಸ್ಯ ==== ಕೆನ್ನೇರಳೆ ಈರುಳ್ಳಿಯನ್ನು ಉತ್ತರ ಸಮುದ್ರ ತೀರದ ಪ್ರದೇಶಗಳಾದ ಸ್ಯಾನ್ ಫ್ರಾನ್ಸಿಸ್ಕೋ, ಕ್ಯಾಲಿಫೋರ್ನಿಯಾದಲ್ಲಿ ಹಾಸ್ಯ ಕೂಟಗಳಲ್ಲಿ ಬಳುಸುವುದರ ಮೂಲಕ ಆಚರಿಸುತ್ತಾರೆ. ==== ಸಾಂಸ್ಕೃತಿಕ ಕೂಟಗಳು ==== ಪೂರ್ವ ಏಷ್ಯಾದ ಕೆಲ ಭಾಗಗಳಲ್ಲಿ ಕೆನ್ನೇರಳೆ ಬಣ್ಣವನ್ನು ಸಾವಿನ ಬಣ್ಣವೆಂದು ಗುರುತಿಸುತ್ತಾರೆ. ==== ನೃತ್ಯ ==== ಕೆನ್ನೇರಳೆ ಚಂದ್ರನ ನೃತ್ಯ ಯೋಜನೆ ಯ ನೃತ್ಯ ತಂಡ ಸ್ಯಾನ್ ಫ್ರಾನ್ಸಿಸ್ಕೋದಲ್ಲಿದೆ. ==== ಭೌಗೋಳಿಕ ಕ್ಷೇತ್ರ ==== ಕೆನ್ನೇರಳೆ ಪರ್ವತಗಳನ್ನು ಪೂರ್ವಭಾಗದ ಪ್ರದೇಶಗಳಾದ ನನ್‌ಜಿಂಗ್, ಜೈಂಗ್ಸೂ ಪ್ರಾಂತಗಳಲ್ಲಿ ಕಾಣಬಹುದಾಗಿದ್ದು, ಇದು ಚೀನಾ ಜನರ ಗಣರಾಜ್ಯವಾಗಿದೆ. ಇದರ ಶಿಖಿರವು ಹಲವಾರು ಕೌತುಕಗಳನ್ನು ಹೊಂದಿದೆ ಅಥವಾ ತನ್ನಲ್ಲಿ ಆವರಿಸಿಕೊಂಡಿದೆ. ಇಲ್ಲಿ ಮುಂಜಾನೆ ಮತ್ತು ಮುಸ್ಸಂಜೆ ಕೆನ್ನೇರಳೆ ಮೋಡಗಳು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಇದಕ್ಕೆ ಕೆನ್ನೇರಳೆ ಪರ್ವತ ಎಂಬ ಹೆಸರು ಬಂತು. ==== ವಂಶ ಲಾಂಛನ ==== ಪೋರ್ಪೊರಾ ಅಥವಾ ಪರ್ಪ್ಯೂರ್ವು ಯುರೋಪಿನ್ನರ ವಂಶ ಲಾಂಛನಕ್ಕೆ ಸಾಮಾನ್ಯವಾಗಿ ಗುರುತಿಗೆ ಬಳಸುವ ಲೋಹದ ಬಣ್ಣವಾಗಿಲ್ಲ. ಕೊನೆ ದಿನಗಳಲ್ಲಿ ಇದನ್ನು ಅಸ್ತಿತ್ವಕ್ಕೆ ತರಲಾಯಿತು. ಈ ವಂಶಲಾಂಛನಕ್ಕೆ ಬಳಸುವ 7 ಲೋಹಗಳಿಗೆ ಕೆಲವು ಬಣ್ಣಗಳನ್ನು ಹಾಕಲಾಗುತ್ತದೆ. ಆದ್ದರಿಂದ ಅವರು ಗ್ರಹಗಳ ಕೂಟವನ್ನು ಕೊಡುತ್ತಾರೆ. ಈ ಮೊದಲ ಶಾಸ್ತ್ರೀಯ ಉದಾಹರಣೆಯಾದ ಕೆನ್ನೇರಳೆಯು ಲಿಯೋನ್ ಸಾಮ್ರಾಜ್ಯದ ತೋಲ್ಬಲವಾಗಿದೆ. ಬೆಳ್ಳಿಯ ಸಿಂಹ ಗುರುತಿನ ವಂಶಲಾಂಛನವು 1245ರ ಮುಂಚೆಯೇ ತಯಾರಿಸಲ್ಪಟ್ಟಿತ್ತು. ==== ಇತಿಹಾಸ ==== ಬೈಸೆಂಟಿನ್ ಚಕ್ರವತ್ರಿನಿ (ಚಕ್ರವರ್ತಿ ಹೆಂಡತಿ)ಯು ಬೈಸೆಂಟಿನ್ ರಾಜರಿಗಾಗಿ ಕೆನ್ನೇರಳೆ ಬಣ್ಣದ ಕೋಣೆಯನ್ನು ನಿರ್ಮಿಸುತ್ತಾಳೆ. ಆದ್ದರಿಂದ ಇದು (ಪೊರ್‌ಪಿರೊಜೆನಿಟ್ಸ್) ಎಂಬ ಹೆಸರಿನಲ್ಲಿ ಅಸ್ತಿತ್ವ ಪಡೆಯಿತು. (ಕೆನ್ನೇರಳೆ ಬಣ್ಣದ ಹುಟ್ಟು) ಈ ಚಿಹ್ನೆಯಿಂದ ಗುರುತಿಸಲ್ಪಟ್ಟ ರಾಜವಂಶೀಯ ಚಕ್ರವರ್ತಿಗಳು ಸ್ವಸಾಮರ್ಥ್ಯದಿಂದ ರಾಜಪದವಿ ಪಡೆದವರನ್ನು ವಿರೋಧಿಸುತ್ತಿದ್ದರು. ಚೀನಾದಲ್ಲಿ ಚೀನಿಯರು ಕರೆಯುವ ನಿಷೇಧಿತ ನಗರದ ಸಾಹಿತ್ಯಿಕ ಅರ್ಥವೆಂದರೆ “ನಿಷೇಧಿತ ಕೆನ್ನೇರಳೆ ನಗರ” (紫禁城) ಎಂದು ಕರೆಯಲಾಗುತ್ತದೆ. ಇದರ ಮೊದಲ ಪದವಾದ 紫 ಎಂದರೆ ಕೆನ್ನೇರಳೆ (ಚೀನೀ ಚಕ್ರವರ್ತಿಗಳು ತೊಡುವ ವಸ್ತ್ರವು ಹಳದಿಬಣ್ಣದ್ದಾಗಿದ್ದು, ಇದನ್ನು ಚೀನಾದಲ್ಲಿ ಸಾಮ್ರಾಜ್ಯಶಾಹಿಯ ಬಣ್ಣ ಎಂದು ಗುರುತಿಸಲಾಗುತ್ತಿತ್ತು. ==== ಏಹೂದಿ ಹತ್ಯಾಕಾಂಡ ==== ನಾಜಿಗಳ ಸೆರೆ ಶಿಬಿರ (ನಿರ್ಬಂಧಿತರನ್ನು ಕೂಡಿಹಾಕುವ ಶಿಬಿರ) ದಲ್ಲಿ ಕೆನ್ನೇರಳೆ ತ್ರಿಕೋನ ಹೊಂದಿದ ಫಲಕವನ್ನು ಬಳಸಲಾಗುತ್ತಿತ್ತು. ಇದನ್ನು ನಾಜಿಗಳು ಸಂಪ್ರದಾಯಬದ್ಧವಲ್ಲದ ಮತ್ತು ಇಂಗ್ಲೆಂಡ್ ನ ಅಧಿಕೃತ ಚರ್ಚ್ ಅನ್ನು ಒಪ್ಪದಿರುವ ಕೆಲ ಗುಂಪನ್ನು ಗುರುತಿಸಲು ಉಪಯೋಗಿಸಲಾಗುತ್ತಿತ್ತು. ಈ ಗುಂಪನ್ನು ಬಿಬೇಲ್ಫೋರ್ಸ್ಚೆರ್ ಎಂದು ಜೆಹೂದಿಗಳ ಪುರಾವೆಯಾಗಿ ಗುರುತಿಸಲಾಗುತ್ತಿತ್ತು. ==== ಸಾಹಿತ್ಯ ==== ದಿ ಕಲರ್ ಪರ್ಪಲ್ ಎಂಬ ಕಾದಂಬರಿಯ ಲೇಖಕ ಅಲಿಸ್ ವಾಕರ್ ಹೇಳುವಂತೆ, ಹೇಗೆ ಹೆಣ್ಣಗತನವನ್ನು ಹೊಂದಿರುವವ ಸ್ತ್ರೀವಾದಿಯಾಗುತ್ತಾನೋ ಹಾಗೆ ಕೆನ್ನೇರಳೆ ಬಣ್ಣವು ನಸು ನೀಲಿ ಬಣ್ಣವನ್ನು ಪಡೆಯುತ್ತದೆ. ಶ್ರೀಮಂತಿಕೆ ಮತ್ತು ವೈಭವದ ಕೂಟಗಳ ಫಲಿತಾಂಶವಾಗಿ, ಕೆನ್ನೇರಳೆ ಎಂಬ ಪದವನ್ನು ಸಾಹಿತ್ಯದಲ್ಲಿ ಅಧಿಕಗುಣ ಹೊಂದಿರುವ ಅಥವಾ ರಂಗೇರಿದ ಬಣ್ಣ ಎಂದು ವಿಶ್ಲೇಷಿಸಲಾಗುತ್ತದೆ. ಉದಾಹರಣೆಗೆ ಒಂದು ವಾಕ್ಯ ಅಥವಾ ಪ್ಯಾರಾದಲ್ಲಿ ಮಿತಿಮೀರಿದ ಸಂಖ್ಯೆಯಲ್ಲಿ ಉದ್ದನೆಯ ಮತ್ತು ಸಾಮಾನ್ಯವಾಗಿ ಬಳಸದ ಪದಗಳನ್ನು ಹೊಂದಿದ್ದರೆ ಅವುಗಳನ್ನು ಕೆನ್ನೇರಳೆ ಮಾರ್ಗ (ಪರ್ಪಲ್ ಪ್ಯಾಸೇಜ್) ಎಂದು ಕರೆಯಲಾಗುವುದು. (ಇವುಗಳನ್ನು ಪರ್ಪಲ್ ಪದ್ಯಗಳಲ್ಲಿ ನೋಡಬಹುದು). ==== ಇಂಟರ್ನೆಟ್ (ಆನ್ ಲೈನ್) ಬೃಹತ್ ಪ್ರಮಾಣದ ಮಲ್ಟಿಪ್ಲೇಯರ್ ಆಟ ==== ಎಂಎಂಓಆರ್‌‌‍ಪಿಜಿ ವಾರ್ಕ್ರಾಫ್ಟ್ ವರ್ಡ್ ನ ವಸ್ತುವಾದ ಇದು ಮಹಾಕಾವ್ಯದ ಗುಣವನ್ನು ಹೊಂದಿದ್ದು (ಭಾರಿ ಅಪರೂಪದ ವಸ್ತು) ಕೆನ್ನೇರಳೆ ಬಣ್ಣವನ್ನು ಹೊಂದಿದೆ. ಮತ್ತು ಇದನ್ನು ಕೆನ್ನೇರಳೆ () ಎಂದೇ ಅಭ್ಯಾಸ ಮಾಡಲಾಗುತ್ತದೆ‌. ==== ಸೂಕ್ಷ್ಮ ಜೀವವಿಜ್ಞಾನ ==== ಏಪ್ರಿಲ್ 2007ರಲ್ಲಿ ನೀಡಿದ ಸಲಹೆ ಪ್ರಕಾರ ಸೂರ್ಯನಿಂದ ಶಕ್ತಿ ಪಡೆಯುವುದಕ್ಕೋಸ್ಕರ ಕಣ್ಣಿನ ಅಕ್ಷಿಪಟಲದ ಆರ್ಕಿಯಾ () ವನ್ನು ಈ ಮೊದಲು ಬಳಸಲಾಗಿತ್ತು. ಕೆನ್ನೇರಳೆ ವರ್ಣದ್ರವ್ಯವನ್ನು ಹರಿತ್ತಿನ ಬದಲಾಗಿ ಬಳಕೆ ಮಾಡಲಾಗುತ್ತಿತ್ತು. ಆದ್ದರಿಂದ ವಿಶಾಲ ಪ್ರದೇಶದವನ್ನು ಹೊಂದಿದ ಸಮುದ್ರ ಮತ್ತು ಸಮುದ್ರ ತೀರದ ರೇಖೆಯು ಕೆನ್ನೇರಳೆ ಬಣ್ಣವನ್ನು ಹೊಂದಿದ್ದು, ಇದನ್ನು ಕೆನ್ನೇರಳೆ ಭೂಮಿ ಎಂದು ಕಲ್ಪನೆ ಮಾಡಲಾಗಿದೆ. ==== ಮಿಲಿಟರಿ (ಸೇನೆ) ==== ಅಮೆರಿಕಾ ಮತ್ತು ಸಂಯುಕ್ತ ರಾಷ್ಟ್ರಗಳ ಸೈನ್ಯಗಳಲ್ಲಿ ಕೆನ್ನೇರಳೆ ಬಣ್ಣವು ಕಾರ್ಯಯೋಜನೆ ಅಥವಾ ಪೂರ್ವ ನಿರ್ಧಾರಿತ ಕೆಲಸಗಳನ್ನು ಒಟ್ಟಾಗಿ ಸೂಚಿಸುತ್ತದೆ. ಅದೇನೆಂದರೆ ಇವುಗಳು ಕೇವಲ ಒಂದೇ ಸೇವೆಯಾದ ಸೈನ್ಯ ಅಥವಾ ನೌಕಾಪಡೆಗೆ ಸೀಮಿತವಾಗಿರದೇ ಎಲ್ಲ ರಕ್ಷಣಾ ಕಾರ್ಯಗಳನ್ನು ಸ್ಥಾಪಿಸಲು ಇದನ್ನು ಬಳಸಲಾಗುತ್ತದೆ. ಈ ಸಂದರ್ಭದಲ್ಲಿ ಅವಶ್ಯಕತೆ ಇರುವ ಒಂದು ಅಥವಾ ಎರಡು ಸಂಯುಕ್ತ ಬಿಡಾರವನ್ನು (ಸೈನಿಕರಿಗೆ ಉಳಿದುಕೊಳ್ಳಲು ಇರುವ ಕೋಣೆ) ಯನ್ನು ನಿರ್ಮಾಣ ಮಾಡಲು ಹೇಳಲಾಗುತ್ತದೆ. ಏಕೆಂದರೆ ಧ್ವಜ ಭಡ್ತಿಗೆ ಇದು ಸಹಾಯ ಮಾಡುತ್ತದೆ. (ಹಿನ್ನೆಲೆಯ ನೌಕಾಧಿಪತಿ ಮತ್ತು ಉನ್ನತ ಮಟ್ಟದ) ಇದು ಸಂಯುಕ್ತ ಸಂಸ್ಥಾನದ ನೌಕಾಪಡೆಯಲ್ಲಿ ಚಾಲ್ತಿಯಲ್ಲಿದೆ. ಈ ಅಧಿಕಾರಿಗಳು ಸಂಯುಕ್ತ ಬಿಡಾರದಲ್ಲಿದ್ದರೆ, ಕೆಲವು ಬಾರಿ ಕೆನ್ನೇರಳೆ ಬಣ್ಣದ ವಸ್ತ್ರವನ್ನು ತೊಟ್ಟಿರುತ್ತಾರೆ. (ಈ ಮಾತಿನಂತೆ ಹೇಳುವುದಾದರೆ ಇದನ್ನು ಅಲಂಕಾರಿಕವಾಗಿ ಮಾತ್ರ ಬಳಸಲಾಗುತ್ತದೆಯೇ ವಿನಃ ಸಂಯುಕ್ತ ಸಂಸ್ಥಾನದ ಸೈನ್ಯಗಳು ಮತ್ತು ಇಂಗ್ಲೆಂಡ್‌ನ ಸೈನ್ಯಗಳಲ್ಲಿ ಕೆನ್ನೇರಳೆ ಬಣ್ಣದ ಸಮವಸ್ತ್ರವನ್ನು ಬಳಲಾಗುವುದಿಲ್ಲ. 2ನೇ ವಿಶ್ವಯುದ್ಧ ನಡೆಯುತ್ತಿದ್ದ ವೇಳೆ ಮತ್ತು ನಂತರ ಜಪಾನಿಗರು ಗುಪ್ತ ಸಂಖೇತ ಪದ್ಧತಿಯಾಗಿ ಅರಿಯಲು ಪರ್ಪಲ್ ಎಂದು ಬಳಸುತ್ತಿದ್ದರು ಅಥವಾ ಕೆನ್ನೇರಳೆ ಗುಪ್ತ ಸಂಖೇತವನ್ನು ಬಳಸುತ್ತಿದ್ದರು. ಆದರೆ ಸಂಯುಕ್ತ ರಾಷ್ಟ್ರಗಳ ಮತ್ತು ಇಂಗ್ಲೆಂಡ್ ದೇಶಗಳ ಸೈನ್ಯವು ಜತೆಗೂಡಿ ಪೆಸಿಫಿಕ್ ಮಹಾಸಾಗರದಲ್ಲಿರುವ ಶಸ್ತ್ರಾಸ್ತ್ರಗಳ ಮಾಹಿತಿಯ ಗೂಢಲಿಪಿಯನ್ನು ಜಪಾನಿಗರಿಗೆ ಗೊತ್ತಿಲ್ಲದಂತೆ ಗೂಢಲಿಪಿಕಾರರ ಸಹಾಯದಿಂದ ಭೇದಿಸಿದರು. ಸಂಯುಕ್ತ ಸಂಸ್ಥಾನದ ಸೈನ್ಯದಲ್ಲಿ ಏಪ್ರಿಲ್ 5, 1917ರಂದು ಅಥವಾ ನಂತರ ಈ ಸೈನ್ಯದಲ್ಲಿದ್ದವರು ಗಾಯಗೊಂಡಿದ್ದರೆ ಅಥವಾ ಮಡಿದವರಿಗೆ ಅಮೆರಿಕಾ ಅಧ್ಯಕ್ಷರ ಹೆಸರಿನಲ್ಲಿ ಪರ್ಪಲ್ ಹಾರ್ಟ್ ಎಂಬ ಪ್ರಶಸ್ತಿ ಫಲಕವನ್ನು ಕೊಡಲಾಗುವುದು. ==== ಶೋಕ ==== ಇಂಗ್ಲೆಂಡ್ ನಲ್ಲಿ 16ನೇ ಶತಮಾನದಲ್ಲಿ ಕೆನ್ನೇರಳೆ ಬಣ್ಣವನ್ನು ಶೋಕಾಚರಣೆಯ ಕೊನೆಯ ಹಂತವಾಗಿ ಬಳಸುತ್ತಿದ್ದರು ಎಂದು ಮಾರ್ಕ್ ಟ್ವೈನ್‌ನ ಮೊದಲ ಐತಿಹಾಸಿಕ ಕಾಲ್ಪನಿಕ ಪುಸ್ತಕವಾದ ‘ದ ಪ್ರಿನ್ಸ್ ಎಂಡ್ ದ ಪಾಪರ್’ ಎಂಬ ಪುಸ್ತಕದಲ್ಲಿ ಹೇಳಿದ್ದಾನೆ. ==== ಸಂಗೀತ ==== ಡೀಪ್ ಪರ್ಪಲ್ ಜನಪ್ರಿಯವಾದ ರಾಕ್ ಸಂಗೀತ ವ್ಯಾದ್ಯವೃಂದವಾಗಿದೆ. “ಡೀಪ್ ಪರ್ಪಲ್" (ಹಾಡು) ಎಂಬುದು ಜನಪ್ರಿಯವಾದ ಹಾಡಾಗಿದ್ದು, ಬೇಬ್ ರುತ್ ರ ಪ್ರಿಯವಾದ ಹಾಡಾಗಿತ್ತು. ಪರ್ಪಲ್ ಎಂಬುದು ಡೀಪ್ ಪರ್ಪಲ್ ಗೆ ನೀಡಿದ ಕೊಡುಗೆಯ ಬ್ರಿಟಿಷ್ ಸಂಗೀತ ವೃಂದವಾಗಿದೆ. ಮಲ್ಬೇರಿ ಪರ್ಪಲ್ (ಉಪ್ಪುನೇರಳೆ ಬಣ್ಣ) ವು ಜನಪ್ರಿಯವಾದ ಆಧುನಿಕ ರಾಕ್ ಸಂಗೀತ ವಾದ್ಯವೃಂದವಾಗಿದೆ. “ಪರ್ಪಲ್ ಪೀಪಲ್ ಈಟರ್” ಎಂಬುದು 1958ರಲ್ಲಿ ಅತಿ ದೊಡ್ಡ ಜನಪ್ರಿಯ ಸಂಗೀತ ಸಂಗ್ರಹ (ಆಲ್ಬಮ್) ಆಗಿತ್ತು. “ಪರ್ಪಲ್ ಹೇಜ್” ಎಂಬುದು ಜಿಮಿ ಹೆಂಡ್ರಿಕ್ಸ್ ಎಂಬಾತನ ಭಾರಿ ಜನಪ್ರಿಯ ಹಾಡುಗಳಲ್ಲೊಂದಾಗಿದೆ. ದಿ ಪರ್ಪಲ್ ಎಂಬ ಹಾಡನ್ನು ಪಾಬ್ಲೋ ಮತ್ತು ವಿಕ್ಟರ್ ಎಂಬುವ ಜೋಡಿ ಪ್ರಸ್ತುತ ಪಡಿಸಿದ್ದಾರೆ. ಪರ್ಪಲ್ (ಕೆನ್ನೇರಳೆ) ಬಣ್ಣವು ಹೆಸರಾಂತ ಪಾಪ್ ಲೋಕದ ದೊರೆಯಾದ ಪ್ರಿನ್ಸ್ ನ ಮೆಚ್ಚಿನ ಬಣ್ಣವಾಗಿದೆ. ಈತನ 1984 ಸಿನಿಮಾ ಮತ್ತು ಆಲ್ಬಮ್ ಆದ “ಪರ್ಪಲ್ ರೈನ್ ” ಈ ಪಾಪ್ ದೊರೆಯ ಉತ್ತಮ ಶ್ರಮಕ್ಕೆ ಒಂದು ಸಾಕ್ಷಿಯಾಗಿದೆ. ಈ ಪರ್ಪಲ್ ರೈನ್ ಸಿನಿಮಾ ಶೀರ್ಷಿಕೆ ಹಾಡಾಗಿ ಪ್ರಿನ್ಸ್‌ ನ ಸಿಗ್ನೇಚರ್ ಸಾಂಗ್ ನ್ನು ಬಳಸಲಾಗಿದೆ. ಮತ್ತು ಹೆಚ್ಚಾಗಿ ಈ ಹಾಡನ್ನು ಈ ದಿನದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಪ್ರಿನ್ಸ್ ತನ್ನ ಅಭಿಮಾನಿಗಳಿಗೆ ಹೆಚ್ಚಾಗಿ ಕೆನ್ನೇರಳೆ ಬಣ್ಣದ ಬಟ್ಟೆಗಳನ್ನು ಧರಿಸಲು ಉತ್ತೇಜಿಸುತ್ತಿದ್ದ. “ಸ್ಟಾರ್ಟ್ ವೇರಿಂಗ್ ಪರ್ಪಲ್” ಎಂಬ ಹಾಡನ್ನು ಗೊಗೋಲ್ ಬೋರ್ಡೆಲ್ಲೋ ಬರೆದಿದ್ದಾನೆ. ಪರ್ಪಲ್ ರಿಬ್ಬನ್ ರೆಕಾರ್ಡ್ಸ್ ಎಂಬ ಮುದ್ರಣದ ಪ್ರಖ್ಯಾತ ಮುದ್ರಣ ಹೆಸರು ಪಟ್ಟಿಯ ಮಾಲೀಕತ್ವವನ್ನು ಔಟ್‌ಕಾಸ್ಟ್ ಜೋಡಿಗಳಲ್ಲೊಬ್ಬನಾದ ಬಿಗ್ ಬೋಯಿ ಎಂಬಾತ ಹೊಂದಿದ್ದಾನೆ. 2005ರಲ್ಲಿ ಗಾಟ್ ಪರ್ಪ್? ಎಂಬ ಮಿಕ್ಸ್‌ಟೇಪ್ ಬಿಡುಗಡೆಗೊಂಡಿತು.ಸಂಪುಟ 2 ರಲ್ಲಿ ಪರ್ಪಲ್ ರಿಬ್ಬನ್ ಎಲ್ಲ ತಾರೆಗಳು ಮತ್ತು ಇತರ ಕಲಾವಿದರನ್ನು ಲೇಬಲ್‌ನಲ್ಲಿ ತೋರಿಸಲಾಯಿತು. ಇದರಲ್ಲಿ ಪರ್ಪಲ್ ಒಂದು ನಿರ್ಧಿಷ್ಟ ಗುಣಮಟ್ಟದ ಮರಿಜುವಾನಾವನ್ನು ಸೂಚಿಸುತ್ತದೆ. 1994ರಲ್ಲಿ ಪರ್ಪಲ್ ಎಂಬ ಆಲ್ಬಮ್ ಅನ್ನು ಸ್ಟೋನ್ ಟೆಂಪಲ್ ಪೈಲಟ್ಸ್ ಬ್ಯಾಂಡ್ ಮಾಡಿದೆ. ಪರ್ಪಲ್ ಎಂಬುದು ಸಂಗೀತದ ಒಂದು ರಾಗವಾಗಿ ಆಶು ಕಲಾವಿದ ( ) ನಾಸ್ ಎಂಬಾತ ರಚಿಸಿದ್ದಾನೆ. ಮನೆ ಸಂಗೀತವನ್ನು ಸ್ವಿಡ್ಜರ್‌ಲೆಂಡ್‌ನ ಪರ್ಪಲ್ ಮ್ಯೂಸಿಕ್ ಇಂಕ್. ಎಂಬ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ದಿ ನ್ಯೂ ರೈಡರ್ಸ್ ಆಫ್ ದ ಪರ್ಪಲ್ ಸೇಜ್ ವು ಅಮೆರಿಕಾ ಹಳ್ಳಿಗಾಡಿನ ಸಂಗೀತ ತಂಡವಾಗಿದೆ. ಈ ಗುಂಪು 1969ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ರಚಿಸಲಾದ ಸೈಕ್ಯಾಡೆಲಿಕ್ ರಾಕ್ ಚಿತ್ರಣದಿಂದ ಪ್ರಸಿದ್ಧಿಗೆ ಬಂತು. ಮತ್ತು ಇದರಲ್ಲಿ ಗ್ರೇಟ್‌ಫುಲ್ ಡೆಡ್ ನ ಸದಸ್ಯರು ಸೇರಿಕೊಂಡಿದ್ದಾರೆ. ಅನಿಮಲ್ ಕಲೆಕ್ಟಿವ್ ಇಂದ ದಿ ಪರ್ಪಲ್ ಬಾಟಲ್ ಎಂಬ ಹಾಡು ರಚಿಸಲ್ಪಟ್ಟಿದೆ. ==== ಅಧಿಮನಶ್ಯಾಸ್ತ್ರ ==== ಕೆನ್ನೇರಳೆ ಪ್ರಭೆಯುಳ್ಳ ಜನರು ಹೇಳುವಂತೆ ಅವರು ಧಾರ್ಮಿಕ ವಿಧಿವಿಧಾನ ಮತ್ತು ಹಬ್ಬಗಳನ್ನು ಆಚರಿಸುವುದನ್ನು ಪ್ರೀತಿಸುತ್ತಾರೆ. ==== ಸಾರ್ವಜನಿಕರು ==== ಟಿಬ್ಯುರೋನ್, ಕ್ಯಾಲಿಫೋರ್ನಿಯಾ,ನ ಮಹಿಳೆಯೊಬ್ಬರಾದ ಬಾರ್ಬರಾ ಮಿಸ್ಲೆನ್ ಎಂಬಾಕೆಯನ್ನು ದಿ ಪರ್ಪಲ್ ಲೇಡಿ ಎಂದೇ ಕರೆಯಲಾಗುತ್ತಿತ್ತು. ಹಾಡುಗಾರ ಪ್ರಿನ್ಸ್ ನ ದ ಪರ್ಪಲ್ ಒನ್ ಅಥವಾ ಹಿಸ್ ರಾಯಲ್ ಪರ್ಪಲ್ ನೆಸ್ ಎಂಬ ಹಾಡನ್ನು ಆತನ ಅಭಿಮಾನಿಗಳು ಮತ್ತು ಮಾಧ್ಯಮ ಸಮನಾವಾದ ರೀತಿಯಲ್ಲಿ ಉಲ್ಲೇಖಿಸುತ್ತಾರೆ. ಈತ ಪರ್ಪಲ್ ರೈನ್ ಎಂಬ ಸಿನಿಮಾವನ್ನು ಪ್ರಾರಂಭಿಸಿದಾಗ ಮತ್ತು ಪರ್ಪಲ್ ರೈನ್ ಆಲ್ಬಮ್ ಗೆ ಪರ್ಪಲ್ ರೈನ್ ಎಂಬ ಹೆಸರನ್ನು ನಾಮಕರಣ ಮಾಡಿ ಬಿಡುಗಡೆ ಮಾಡಿದಾಗ ಇದು ಅತಿ ಮಾರಾಟವಾದ ಆಲ್ಬಮ್ ಗಳಲ್ಲಿ ಒಂದು ಹೆಸರು ಗಳಿಸಿದೆ. ಪ್ರಿನ್ಸ್ ನ ಹಾಡುಗಳಲ್ಲಿ ಮತ್ತು ಮಾಧ್ಯಮದಲ್ಲಿ ಪರ್ಪಲ್ ಬಣ್ಣದ ಬಗ್ಗೆ ಸಾಕಷ್ಟು ಉಲ್ಲೇಖವಿದೆ. ==== ರಾಜಕೀಯ ==== ಇಟಲಿಯಲ್ಲಿ 2009 ಡಿಸೆಂಬರ್ 5ರಂದು ನಡೆದ ವಿಶ್ವ ಪ್ರದರ್ಶನದ ತರುವಾಯದ ದಿನಗಳಿಂದ ಬೆರ್ಲುಸ್ಕೋನಿಗಳ ಸರ್ಕಾರ ವಿರುದ್ಧ ಕೆನ್ನೇರಳೆ ಬಣ್ಣವನ್ನು ನಾಗರಿಕರ ಚಳವಳಿ ಅಥವಾ ಪ್ರತಿಭಟನೆಯಲ್ಲಿ ಬಳಸಲಾಗುತ್ತಿತ್ತು. ಮಾಧ್ಯಮವು ಸರ್ವಾಧಿಕಾರದಿಂದ ಮಾಫಿಯಾ (ಅಂತಾರಾಷ್ಟ್ರೀಯ ಅಪರಾಧಿಗಳ ತಂಡ)ದೊಂದಿಗೆ ಭಾರಿ ಸಂಬಂಧವನ್ನು ಹೊಂದಿದೆ ಎಂದು ಸರ್ಕಾರವು ಈ ಸಂದರ್ಭದಲ್ಲಿ ಆರೋಪಿಸಿತ್ತು. ಈ ಬಣ್ಣವನ್ನು ಅಪಾರ್ಟಿಟಿಕ್ () ಹೇಳಿಕೆಯಾಗಿ ಬಳಸಲಾಗುತ್ತಿತ್ತು. ಏಕೆಂದರೆ ಇದು ಇಟಲಿಯಲ್ಲಿ ಪ್ರಚಲಿತದಲ್ಲಿರುವ ಯಾವುದೇ ರಾಜಕೀಯ ಪಕ್ಷಗಳ ಚಿಹ್ನೆ ಅಥವಾ ಗುರುತಾಗಿ ಕಾಣಿಸಿಕೊಂಡಿಲ್ಲ. ಈ ಚಳವಳಿ ವೆಬ್ (ಇಂಟರ್ ನೆಟ್) ಮೂಲಕ ತನ್ನ ಅಭಿಪ್ರಾಯವನ್ನು ಮಂಡಿಸುತ್ತಿತ್ತು. ಇದು ಪೊಪೋಲೊ ವಿಯೋಲ (ಕೆನ್ನೇರಳೆ ಹೋರಾಟಗಾರರು) ಎಂದು ಗುರುತಿಸಿಕೊಂಡಿತ್ತು. ಬ್ರಿಟಿಷ್ ರಾಜಕೀಯದಲ್ಲಿ ಯುನೈಟೆಡ್ ಕಿಂಗ್‌ಡಮ್ ಇಂಡಿಪೆಂಡೆನ್ಸ್ ಪಾರ್ಟಿಯ ಗುರುತಾಗಿ ಬಳಸಲಾಗುತ್ತಿತ್ತು. ಈ ಯುರೋಸೆಪ್ಟಿಕ್ ಪಕ್ಷವು ಬ್ರಿಟೈನ್ (ಬ್ರಿಟನ್, ಇಂಗ್ಲೆಂಡ್, ವೇಲ್ಸ್ ಮತ್ತು ಸ್ಕಾಟ್ಲೆಂಡ್) ಅನ್ನು ಯುರೋಪಿಯನ್ ಒಕ್ಕೂಟದಿಂದ ಹೊರೆಗೆ ಸೆಳೆಯಲು ಪ್ರಯತ್ನಿಸುತ್ತಿತ್ತು. ನೆದರ್ಲ್ಯಾಂಡ್‌ನ ರಾಜಕೀಯದಲ್ಲಿ ಪರ್ಪಲ್ (ಕೆನ್ನೇರಳೆ) ("" ) ಅಂದರೆ ಸರ್ಕಾರವು ಬಲ ಪಂಥೀಯರನ್ನು ಮತ್ತು ಸಮಾಜವಾದಿಗಳನ್ನು ತಾತ್ಕಾಲಿಕವಾಗಿ ಒಂದುಗೂಡಿಸಿ ( ಇದು ಕೆಂಪು ಮತ್ತು ನೀಲಿಯನ್ನು ಸೂಚಿಸುತ್ತದೆ), ಸಾಮಾನ್ಯ ಒಕ್ಕೂಟವಾದ ಕ್ರಿಶ್ಟಿಯನ್ ಪ್ರಜಾಪ್ರಭುತ್ವ ಕೇಂದ್ರದ ಒಂದು ಅಥವಾ ಎರಡು ಪಕ್ಷಗಳ ವಿರುದ್ಧ ಸಂಘಟಿಸುತ್ತಿತ್ತು. 1994ರಿಂದ 2002ರ ವರೆಗೆ ಎರಡು ಪರ್ಪಲ್ ಕ್ಯಾಬಿನೆಟ್ (ಸಂಪುಟ) ಇತ್ತು. ಸಂಯುಕ್ತ ರಾಷ್ಟ್ರಗಳ ರಾಜಕೀಯದಲ್ಲಿ (ಯುಎಸ್) ಪರ್ಪಲ್ ಸ್ಟೇಟ್ (ಸ್ಥಿತಿ) ಅನ್ನು ರಿಪಬ್ಲಿಕನ್ ಪಕ್ಷದವರು (ಪ್ರಸ್ತುತ ಕೆಂಪು ಬಣ್ಣದಿಂದ ಗುರುತಿಸಿಕೊಳ್ಳುವ) ಮತ್ತು ಡೆಮೋಕ್ರಾಟಿಕ್ ಪಕ್ಷದವರ (ಪ್ರಸ್ತುತ ನೀಲಿ ಬಣ್ಣದಿಂದ ಗುರುತಿಸಿಕೊಳ್ಳುತ್ತಿರುವ) ನಡುವಿನ ದರ್ಜೆಯನ್ನು ಸಮತೋಲದಲ್ಲಿಡಲು ಬಳಸಲಾಗುತ್ತಿತ್ತು. ನೋಡಿ: ರೆಡ್ ಸ್ಟೇಟಸ್ ಮತ್ತು ಬ್ಲೂ ಸ್ಟೇಟಸ್. ==== ಧಾರ್ಮಿಕ ಪಠ್ಯ ==== ಬೈಸಂಟೈನ್ ಸಾಮ್ರಾಜ್ಯದಲ್ಲಿ ಕ್ರೈಸ್ತವೇದವನ್ನು ಚರ್ಮಕಾಗದಲ್ಲಿ ಕೈಬರಹದ ಮೂಲಕ ಬಂಗಾರದ ಅಕ್ಷರದಲ್ಲಿ ಬರೆಯಲಾಗಿತ್ತು. ಇದಕ್ಕೆ ಟೆರಿಯನ್ ಪರ್ಪಲ್ ಬಣ್ಣವನ್ನು ಉಪಯೋಗಿಸಲಾಗಿತ್ತು. ==== ಪದ್ಯ ==== ಈಗಿನ ಆಧುನಿಕ ಇಂಗ್ಲಿಷ್ ಪದ್ಯಗಳಲ್ಲಿ ಪರ್ಪಲ್ ಎಂಬ ಪದವನ್ನು ಕೆಲವು ಬಾರಿ ಉಪಯೋಗಿಸಲಾಗಿದೆ. ರಾಬರ್ಟ್ ಬರ್ನ್ಸ್ ನ ಎಪಿಸ್ಟಲ್ ಟು ಮಿಸಸ್ ಸ್ಕಾಟ್ ಎಂಬ ಪದ್ಯದಲ್ಲಿ ಪರ್ಪಲ್ ಅನ್ನು ಕರ್ಪಲ್ ಜತೆ ಬಣ್ಣಿಸಿದ್ದ. ನಮಗೆ ತಿಳಿದಂತೆ ಈ ಶಬ್ದವನ್ನು ಬರ್ನ್ಸ್ ಮಾತ್ರ ಬಳಸಿದ್ದಾನೆ. ಕರ್ಪಲ್ ಅಂದರೆ 1) ಸೊಂಟದ ಕೃಶವಾದ ಭಾಗ ಅಥವಾ 2) ಹಿಂಭಾಗ ಅಥವಾ ನಿತಂಬ. ಗ್ರೇಸ್ ಕಿಲ್ಲೆ ಎಂಬ ಹಾಡನ್ನು ಮಿಕಾ ಎಂಬುವರು ರಚಿಸಿದ್ದು, ಇದರಲ್ಲಿ ಪರ್ಪಲ್ ಎಂಬ ಶಬ್ಧವನ್ನು ಪ್ರಾಸಬದ್ಧವಾಗಿ ಹರ್ಟ್ ಫುಲ್ ಎಂದು ಬಳಸಿದ್ದಾನೆ. “ಡ್ಯಾಂಗ್ ಮಿ” ಈತನ ಜನಪ್ರಿಯ ಹಾಡಾಗಿದ್ದು, ರೋಜರ್ ಮಿಲ್ಲರ್ ಈ ಕೆಳಗಿನ ಸಾಲುಗಳನ್ನು ಹಾಡಿದ್ದಾನೆ: , [] ==== ವೈಜ್ಞಾನಿಕ ಕಾದಂಬರಿ ==== ಸ್ಟಾರ್ ಟ್ರೆಕ್ ವಿಶ್ವದಲ್ಲಿ, ಕ್ಲಿಂಗನ್‌ಗಳು ಕೆನ್ನೇರಳೆ ಬಣ್ಣದ ರಕ್ತವನ್ನು ಹೊಂದಿರುತ್ತವೆ. ಸ್ಟಾರ್ ವಾರ್ಸ್ ನಲ್ಲಿ ಬರುವ ಪಾತ್ರದಲ್ಲಿ ಮೇಕ್ ವಿಂಡು ಎಂಬ ಒಂದೇ ಪಾತ್ರ ಕೆನ್ನೇರಳೆ ಲೈಟ್ಸ್ಅಬೇರ್ ಹೊಂದಿದೆ. ==== ಲೈಂಗಿಕತೆ ==== ಈಗ ಪರ್ಪಲ್ (ಕೆನ್ನೇರಳೆ) ಬಣ್ಣವನ್ನು ಅಭಿಮಾನ ಅಥವಾ ಹೆಮ್ಮೆಯ ಸೂಚಕವಾಗಿ ತಿಳಿಯಲಾಗುತ್ತಿದೆ. ಈ ಬಣ್ಣವು ಗೇ (ಸಲಿಂಗಕಾಮಿಗಳು) ಮತ್ತು ಎಲ್‌ಜಿ‌ಬಿ‌ಟಿ ಸಮುದಾಯದವರಿಗೂ ಸೂಚಿಸಲಾಗುತ್ತದೆ. 2007ರ ಜೂನ್ 24ರಂದು ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ನಡೆದ ಗೇ ಪ್ರೈಡ್ ಪರೇಡ್ (ಸಲಿಂಗಕಾಮಿಗಳ ಹೆಮ್ಮೆಯ ಜಾಥಾ)ನಲ್ಲಿ ಮನುಷ್ಯ ಮೃಗವಿರುವ () (3 7/16) ಚಿತ್ರಗಳುಳ್ಳ ವೃತ್ತಾಕಾರದ ಪ್ಲಾಸ್ಟಿಕ್ ಸ್ಟಿಕ್ಕರ್‌ಗಳನ್ನು ಸಲಿಂಗಕಾಮಿ ಪುರುಷರು ಅಥವಾ ಮಹಿಳೆಯರ ಚಿತ್ರಣವನ್ನು ಪುರುಷ ಮೃಗದ () ಸಲ್ಲಿಂಗ ಕಾಮಿಗಳ ಹೆಮ್ಮೆಯ ಅವತಾರ (ಮೂರ್ತರೂಪ)ದ ವಿರುದ್ಧ ಕಂಪ್ಯೂಟರ್‌ನ ಎಚ್‌ಟಿ‌ಎಂ‌ಎಲ್/ಸಿ‌ಎಸ್‌ಎಸ್ ಕೆನ್ನೇರಳೆ ಹಿನ್ನೆಲೆಯು ಹೊರಗೆ, ಹೆಮ್ಮೆಯ ಮತ್ತು ಕೆನ್ನೇರಳೆ ಎಂದು ಹೇಳುತ್ತದೆ. , , ಪರ್ಪಲ್ . 1970ರ ಮಧ್ಯಭಾಗದಲ್ಲಿ ಸ್ಯಾನ್ ಫ್ರಾನ್ಸಿಸ್ಕೋದ ನಿಯೋ ಮತ್ತು ಕ್ಯಾಸ್ಟ್ರೋ ನಡುವೆ ಮಇರುವ 2223 ಮಾರ್ಕೆಟ್ ಸ್ಟೇ. ನಲ್ಲಿದ್ದ ಗೇ ಪಿಯಾನೋ ಬಾರ್ ಅನ್ನು ಪರ್ಪಲ್ ಪಿಕಲ್ ಎಂದು ಕರೆಯುತ್ತಿದ್ದರು. ಪರ್ಪಲ್ ಹ್ಯಾಂಡ್ ಎಂಬುದು ಎಲ್‌ಜಿ‌ಬಿ‌ಟಿ ಚಿಹ್ನೆಯಾಗಿದ್ದು, ಇದು ಹೆಲ್ಲೋವೀನ್ ನೈಟ್ 1969ರ 31 ಅಕ್ಟೋಬರ್ ನಲ್ಲಿ ಸಂಭವಿಸಿದ ಘಟನೆಯನ್ನು ಶೋಧಿಸುತ್ತದೆ. ಯಾವಾಗ ಗೇ ಲಿಬರೇಶನ್ ಫ್ರಂಟ್ (ಜಿ ಎಲ್ ಎಫ್)ಗೆ 60 ಮಂದಿ ಸದಸ್ಯರಾದರೋ ಆಗ ಮತ್ತು ದಿ ಸೊಸೈಟಿ ಆಫ್ ಇಂಡಿವಿಜುಯಲ್ ರೈಟ್ಸ್ (ಎಸ್ ಐ ಆರ್) ವು ಸ್ಯಾನ್ ಫ್ರಾನ್ಸಿಸ್ಕೋ ಎಕ್ಸಾಮಿನರ್ ಬಗ್ಗೆ ಬಂದ ಸರಣಿ ಸುದ್ದಿ ಲೇಖನಕ್ಕೆ ದೊರೆತ ಪ್ರತಿಕ್ರಿಯೆ ಪ್ರತಿಭಟನೆಗೆ ವೇದಿಕೆಯಾಯಿತು. ಇದು ಸ್ಯಾನ್ ಫ್ರಾನ್ಸಿಸ್ಕೋದ ಎಲ್‌ಜಿ‌ಬಿ‌ಟಿ ಜನರಾದ ಸಲಿಂಗಕಾಮಿಗಳ ಬಾರ್ ಮತ್ತು ಕ್ಲಬ್ ಗಳಿಗೆ ಕೆಟ್ಟ ಹೆಸರನ್ನು ತಂದವು. ==== ಕ್ರೀಡೆಗಳು ==== ಲಾಸ್ ಏಂಜಲೀಸ್ ಲೇಕರ್ಸ್ ನ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಅಸೋಸಿಯೇಷನ್ (ದಿ ನ್ಯಾಶನಲ್ ಬಾಸ್ಕೆಟ್ ಬಾಲ್ ಅಸೋಸಿಯೇಷನ್ಸ್), ಫೀನಿಕ್ಸ್ ಸನ್ಸ್ ಮತ್ತು ಸ್ಯಾಕ್ರಿಮೆಂಟೋ ಕಿಂಗ್ಸ್ ಪರ್ಪಲ್ ಅಥವಾ ಕೆನ್ನೇರಳೆಯನ್ನು ತಮ್ಮ ಪ್ರಾಥಮಿಕ ಬಣ್ಣವಾಗಿ ಬಳಸುತ್ತಿದ್ದರು. ಆದಾಗ್ಯೂ ಈ ಪೂರ್ವದಲ್ಲಿ ಲೇಕರ್ಸ್ ಗಳು ಫೋರಮ್ ಬ್ಲ್ಯೂ (ನೀಲಿ ಸಭಾಂಗಣ) ಎಂದು ಬಳಸುತ್ತಿದ್ದರು. ಈ ಸಭಾಂಗಣವನ್ನು ಅವರು ಹಳೆಯ ಅಖಾಡ ಕ್ಷೇತ್ರವೆಂದು ಉಲ್ಲೇಖಿಸಲಾಗಿದೆ. ದಿ ನ್ಯಾಷನಲ್ ಹಾಕಿ ಲೀಗ್ಸ್ ನಲ್ಲಿ ಲಾಸ್ ಏಂಜಲೀಸ್ ಕಿಂಗ್ಸ್‌ ಪ್ರಾಥಮಿಕ ಬಣ್ಣಗಳಲ್ಲೊಂದಾಗಿ ಕನ್ನೇರಳೆ ಬಣ್ಣವನ್ನು ಉಪಯೋಗಿಸುತ್ತಿದ್ದರು. ಬೇಸ್‌ಬಾಲ್‌ನ ಮೇಜರ್ ಲೀಗ್ ಆಟದಲ್ಲಿ ಕೆನ್ನೇರಳೆ (ಪರ್ಪಲ್) ಯು ಕೊಲೊರಾಡೊ ರಾಕಿಗಳ ತಂಡ ಪ್ರಾಥಮಿಕ ಬಣ್ಣಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ಫುಟ್ಬಾಲ್ ಲೀಗ್ ಪಂದ್ಯದಲ್ಲಿ ಮಿನ್ನೆಸೋಟಾ ವೈಕಿಂಗ್ಸ್ ಮತ್ತು ಬಾಲ್ಟಿಮೋರ್ ರೆವೆನ್ಸ್ ತಂಡಗಳು ಕೆನ್ನೇರಳೆಯನ್ನು ಪ್ರಧಾನ ಬಣ್ಣವನ್ನಾಗಿ ಉಪಯೋಗಿಸುತ್ತಿದ್ದವು. ಆಸ್ಟ್ರೇಲಿಯಾ ಫುಟ್ಬಾಲ್ ಲೀಗ್ ನಲ್ಲಿ ಫ್ರೆಮೆಂಟಲ್ ಫುಟ್ಬಾಲ್ ಕ್ಲಬ್ ವು ಕೆನ್ನೇರಳೆಯನ್ನು ತನ್ನ ಪ್ರಾಥಮಿಕ ಬಣ್ಣವನ್ನಾಗಿ ಉಪಯೋಗಿಸುತ್ತದೆ. ಫುಟ್ಬಾಲ್ ಅಸೋಸಿಯೇಷನ್ ನಲ್ಲಿ ಇಟಲಿಯ ಸಿರೈ ಎ ಕ್ಲಬ್ ( ) ಫಿಯೋರೆಂಟಿನಾ ಮತ್ತು ಆಸ್ಟ್ರೇಲಿಯಾ ಎ ಲೀಗ್‌ನ ಪರ್ಥ್ ಗ್ಲೋರಿ ಕ್ಲಬ್ ಗಳು ಪ್ರಾಥಮಿಕ ಬಣ್ಣವಾಗಿ ಕೆನ್ನೇರಳೆಯನ್ನು ಬಳಸುತ್ತಿವೆ. ಮೆಲ್ಬೋರ್ನ್ ಸ್ಟೋರ್ಮ್ ನಲ್ಲಿ ನಡೆದ ಆಸ್ಟ್ರೇಲಿಯಾದ ರಾಷ್ಟೀಯ ರಗ್ಬಿ ಲೀಗ್ ಪಂದ್ಯಾವಳಿಯಲ್ಲಿ ಕೆನ್ನೇರಳೆ ಬಟ್ಟೆಯನ್ನು ಪ್ರಾಥಮಿಕ ಬಣ್ಣವಾಗಿ ಬಳಸಿದ್ದರು. ಎನ್‌ಸಿ‌ಎ‌ಎದಲ್ಲಿ, ದಿ ಕ್ಯಾನ್ಸಾಸ್ ಸ್ಟೇಟ್ ವೈಲ್ಡ್ ಕ್ಯಾಟ್ಸ್, ಟಿಸಿಯು ಹಾರ್ನಡ್ ಫ್ರಾಗ್ಸ್, ನೈಯಾಗರಾ ಯೂನಿವರ್ಸಿಟಿ ಪರ್ಪಲ್ ಈಗಲ್ಸ್ ಮತ್ತು ನಾರ್ಥ್ ವೆಸ್ಟ್ರನ್ ವೈಲ್ಡ್ ಕ್ಯಾಟ್ಸ್ ಗಳ ಚಹರೆಯ ಪ್ರಾಥಮಿಕ ಬಣ್ಣವನ್ನಾಗಿ ಕೆನ್ನೇರಳೆಯನ್ನು ತಂಡದ ಬಣ್ಣವಾಗಿ ಬಳಸಲಾಗುತ್ತಿತ್ತು. ವಾಷಿಂಗ್‌ಟನ್ ಹಸ್ಕೀಸ್ ವಿಶ್ವವಿದ್ಯಾಲಯ, ಅಲ್ಕೋರ್ನ್ ಸ್ಟೇಟ್ ಯೂನಿವರ್ಸಿಟಿ ಬ್ರೇವ್ಸ್, ಎಲ್‌ಎಸ್‌ಯು ಟೈಗರ್ಸ್ ಮತ್ತು ಜೇಮ್ಸ್ ಮ್ಯಾಡಿಸನ್ ಡ್ಯೂಕ್ಸ್ ನ ಪ್ರಾಥಮಿಕ ತಂಡಗಳ ಬಣ್ಣಗಳು ಕೆನ್ನೇರಳೆ ಮತ್ತು ಬಂಗಾರದ ಬಣ್ಣಗಳಾಗಿವೆ. ರಾಯಲ್ ಪರ್ಪಲ್ ಈಸ್ಟ್ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ವ್ಯಾವಹಾರಿಕಾ ಬಣ್ಣವಾಗಿ ಬಳಸಲ್ಪಡುತ್ತಿದೆ. ವಿಶ್ವ ಫುಟ್ಬಾಲ್ ಕಾಲೇಜಿನಲ್ಲೂ ಬಳಸಾಗುತ್ತದೆ. ಈವನ್ಸ್ ವಿಲ್ಲೆ ಯೂನಿವರ್ಸಿಟಿ ಪರ್ಪಲ್ ಏಸಸ್ ದ ಪ್ರಾಥಮಿಕ ತಂಡದ ಬಣ್ಣವಾಗಿ ಪರ್ಪಲ್ ಇದೆ. ಡೆಪೊರ್ಟಿವೊ ಸ್ಯಾಪ್ರಿಸಾದ ಕೋಸ್ಟಾ ರಿಕಾದ ಪ್ರೈಮೆರಾ ಡಿವಿಷನ್ ಸಾಕರ್ ತಂಡದ ಪ್ರಮುಖ ಬಣ್ಣ ಕೆನ್ನೇರಳೆ ಮತ್ತು ಈ ತಂಡದವರನ್ನು ಮೋನ್ ಸ್ಟ್ರೌ ಮೊರಾಡೊ ಅಥವಾ ಪರ್ಪಲ್ ಮೌನ್ ಸ್ಚರ್ ಎಂಬ ಅಡ್ಡ ಹೆಸರಿನಿಂದ ಕರೆಯಲಾಗುತ್ತದೆ. ==== ವ್ಯಕ್ತ್ಯಾತೀತ ಮನಃಶ್ಶಾಸ್ತ್ರ ==== 1976ರಲ್ಲಿ ಟಿಮೋತಿ ಲೀರೆ ಮತ್ತು ರಾಬರ್ಟ್ ಆಂಟನ್ ವಿಲ್ಸನ್ ರಚಿಸಿದ ನಕಾಶೆಯನ್ನು ದಿ ಪೀರಿಯೋಡಿಕ್ ಟೇಬಲ್ ಆಫ್ ಯನರರ್ಜಿ ಎಂದು ಕರೆಯಲಾಗಿತ್ತು. ಈ ತತ್ವಶಾಸ್ತ್ರದ ಸಾರಂಶವನ್ನು ಡಾ. ಟಿಮೋತಿ ಲೀರಿ ಯನ್ನು ಕ್ಯಾಲಿಫೋರ್ನಿಯಾ ಬರ್ಕ್ಲಿಯ ಗುಂಪಾದ ಸ್ಟಾರ್‌ಫ್ಲೈಟ್ ನೆಟವರ್ಕ್ ಗೆ (ಜಾಲ) ಕೊಟ್ಟರು. ರಾಬರ್ಟ್ ಆಂಟನ್ ಎಂಬುವರು ಇದರ ತಳಪಾಯವನ್ನು ರಚಿಸಿದ್ದನ್ನು ಡಾ. ಟಿಮೋತಿ ತಮ್ಮ ತತ್ವಶಾಸ್ತ್ರದಲ್ಲಿ ಪ್ರಕಟಪಡಿಸಿದ್ದಾರೆ. ನಕಾಶೆಯಲ್ಲಿ ದಿ ಐಟ್ತ್ ಅಥವಾ ಸೈಕೋ-ಅಟೋಮಿಕ್ ಮಂಡಲವು ಎದ್ದು ಕಾಣುವ ಕೆನ್ನೇರಳೆ ಬಣ್ಣ ದಿಂದ ಪ್ರತಿನಿಧಿಸಲ್ಪಡುತ್ತದೆ. ==== ಸಾಗಣೆ ಯೋಜನೆ ==== ಬೋಸ್ಟೋನ್ ನ ಎಂಬಿಟಿಎ ನಿತ್ಯ ಪ್ರಯಾಣಿಕರ ರೈಲು ಕೆನ್ನೇರಳೆ ಗುರುತಿನಿಂದ ಗುರುತಿಸಲ್ಪಡುತ್ತದೆ. ಮತ್ತು ಕೆಲವೊಮ್ಮೆ ಅದನ್ನು ಪರ್ಪಲ್ ಲೈನ್ (ಕೆನ್ನೇರಳೆ ಗೆರೆ) ಎಂದು ಕರೆಯಲ್ಪಡುತ್ತದೆ. ಲಾಸ್ ಏಂಜಲೀಸ್‌ನ ವಿಲ್‌ಶೈರ್ ಬೌಲ್‌ವಾರ್ಡ್ ಊರಿನ ಕೆಳಗಿನ ಪ್ರದೇಶದ ಸುರಂಗ ಮಾರ್ಗದ ಎಲ್‌ಎ‌ಸಿ‌ಎಂ‌ಟಿ‌ಎ ಪರ್ಪಲ್ ಲೈನ್ (ಕೆನ್ನೇರಳೆ ಗೆರೆ) ವು ವಿಲ್‌ಶೈರ್ ಬೌಲ್‌ವಾರ್ಡ್‌ನಿಂದ ಪೆಸಿಫಿಕ್ ಸಾಗರ ತನಕ ವಿಸ್ತರಿಸಲು ಪ್ರಸ್ತಾಪಿಸಲ್ಪಟ್ಟಿದೆ. ಚಿಕಾಗೋ ಟ್ರಾನ್ಸ್‌ಸಿಟ್ ಅಥಾರಿಟಿಯ “ಎಲ್” ("") ರೇಖೆಯು ಲಿಂಡೆನ್ ಸ್ಟ್ರೀಟ್ ಮೂಲಕ ಹಾದುಹೋಗುವ ಪರ್ಪಲ್ ಲೈನ್ (ಕೆನ್ನೇರಳೆ ರೇಖೆ) ಎಂದು ಕರೆಯಲ್ಪಡುತ್ತದೆ. ದಿ ಫ್ಲಶಿಂಗ್ ಪ್ರಯಾಣಿಕರ ಅಥವಾ ವೇಗದ (ಇದನ್ನು ಆಗಾಗ ದಿ ಸೆವೆನ್ ಟ್ರೈನ್ ಎಂದು ಕರೆಯಲಾಗುತ್ತದೆ) ನ್ಯೂಯಾರ್ಕ್ ನಗರದ ಸುರಂಗ ಮಾರ್ಗದ ರೈಲು ಅದರ ಸಂಖ್ಯೆಯ ಹಿಂದಿನ ಪರ್ಪಲ್ ಸರ್ಕಲ್ (ಕೆನ್ನೇರಳೆ ವೃತ್ತದ) ಮೂಲಕ ಗುರುತಿಸಲ್ಪಡುತ್ತದೆ. ಕೇವಲ ಇದೊಂದೇ ರೈಲು ಸಂಖ್ಯೆಯೊಂದಿಗೆ ವಿಶಿಷ್ಠವಾದ ಬಣ್ಣದೊಂದಿಗೆ ಗುರುತಿಸ್ಪಡುವ ನ್ಯೂಯಾರ್ಕ್ ನಗರದ ರೈಲಾಗಿದೆ. ಇದು ತನ್ನ ಬಣ್ಣವನ್ನು ಬೇರೆ ರೈಲುಗಳೊಂದಿಗೆ ಹೋಲಿಸಿಕೊಳ್ಳುವುದಿಲ್ಲ. ಸ್ಯಾನ್ ಫ್ರಾನ್ಸಿಸ್ಕೋ ದ ಲೈಟ್ ರೈಲ್ ಸೇವೆಯು, ದಿ ಮುನಿ ಮೆಟ್ರೋ ವು ಎಲ್ ಟ್ರಾವೆಲ್ ಲೈಟ್ ರೈಲ್ ಲೈನ್ ನಿಂದ ಗುರುತಿಸ್ಪಡುತ್ತದೆ. ಪಾರ್ಕ್ ಸೈಡ್ ಹತ್ತಿರದ ವರೆಗೆ ಹೋಗುವ ಈ ಟ್ರೈನ್ ಲೋಹದ ಕೆನ್ನೇರಳೆ ಡಿಸ್ಕ್ ಅನ್ನು ಹೊಂದಿದ್ದು, ಅದರಲ್ಲಿ ಬಿಳಿ ಬಣ್ಣದಲ್ಲಿ ರೈಲಿನ ಹೆಸರನ್ನು ಕೆತ್ತಲಾಗಿದೆ. ಬಣ್ಣದಿಂದ ಗುರುತಿಸಲ್ಪಡುವ ಸಂಚಾರದ ಭೂಪಟದಲ್ಲಿ ದಿ ಟೋಕ್ಯೋ ಮೆಟ್ರೋ ಹಾನ್ಜೋಮನ್ ಲೈನ್ ಟ್ರೇನ್ ವು ಕೆನ್ನೇರಳ ಬಣ್ಣದಿಂದ, ವಿಶಿಷ್ಟವಾದ ಮತ್ತು ತಿರುಗುವ ಆಕೃತಿ ಮೂಲಕ ಗುರುತಿಸಲ್ಪಡುತ್ತದೆ. ==== ವೆಕ್ಸಿಲ್ಲಾಲಜಿ ==== ಈ ನಡುವೆ ಜಗತ್ತಿನಲ್ಲಿ ಕೆಂಪು ಬಣ್ಣವು ಕಮ್ಯುನಿಸಮ್ ಅಥವಾ ಸಮಾಜವಾದ ಮತ್ತು ಕೆನ್ನೇರಳೆ ಅಥವಾ ಬಿಳಿ ಬಣ್ಣವು ರಾಜಸತ್ಥೆಯನ್ನು ಪ್ರತಿನಿಧಿಸುತ್ತದೆ. ಆದರೆ ಸ್ಪೇನ್‌ನಲ್ಲಿ ಇದು ತದ್ವಿರುದ್ಧವಾಗಿದ್ದು, ಕೆಂಪು ಬಣ್ಣವು ರಾಜಪ್ರಭುತ್ವಯನ್ನು ಪ್ರತಿನಿಧಿಸಿದರೆ, ಕೆನ್ನೇರಳೆ ಬಣ್ಣವು ಸಾಮಾನ್ಯ ಜನತೆಯನ್ನು ಪ್ರತಿನಿಧಿಸುತ್ತದೆ. ಸೆಕೆಂಡ್ ಸ್ಪ್ಯಾನಿಷ್ ರಿಪಬ್ಲಿಕ್‌ನ ಮೂರು ಬಣ್ಣದ ಧ್ವಜದಲ್ಲಿ ಪರ್ಪಲ್ ಕಡಿಮೆ ಜಾಗವನ್ನು ಹೊಂದಿದೆ. == ಇವನ್ನೂ ನೋಡಿ == ವರ್ಣ/ಬಣ್ಣಗಳ ಪಟ್ಟಿ ಪರ್ಪರ್ ವೈಲೆಟ್ (ಬಣ್ಣ) == ಆಕರಗಳು == == ಹೆಚ್ಚಿನ ಓದಿಗಾಗಿ == "ದಿ ಪರ್ಸೆಪ್ಶನ್ ಆಫ್ ಕಲರ್", ಇಂದ ಸ್ಚಿಫ್ಮ್ಯಾನ್, ಎಚ್.ಆರ್. (1990) ಸೇನ್ಸೆಶನ್ ಮತ್ತು ಪರ್ಸೆಪ್ಶನ್: ಏನ್ ಇಂಟಿಗ್ರೇಟೆಡ್ ಅಪ್ರೋಚ್ (ಮೂರನೇ ಮುದ್ರಣ). ನ್ಯೂ ಯಾರ್ಕ್: ಜಾನ್ ವಿಲಿ ಆಂಡ್ ಸನ್ಸ್ಜ್. == ಹೊರಗಿನ ಕೊಂಡಿಗಳು == ಟೆಂಪ್ಲೇಟು: ಟೆಂಪ್ಲೇಟು: