ಕೆಪ್ಲರ್-೪೫೨ಬಿಯು ಒಂದು ಸೌರಾತೀತ ಗ್ರಹ. ಇದು -ವರ್ಗದ ಕೆಪ್ಲರ್-೪೫೨ ನಕ್ಷತ್ರವನ್ನು ಸುತ್ತುತ್ತದೆ. ಕೆಪ್ಲರ್ ಎಂಬ ವ್ಯೋಮನೌಕೆಯ ದೂರದರ್ಶಕದ ಮೂಲಕ ಇದನ್ನು ಪತ್ತೆಹಚ್ಚಲಾಗಿದೆಯೆಂದು 23 2015ರಂದು ನಾಸಾ ಘೋಷಿಸಿತು. ಸೂರ್ಯನನ್ನು ಹೋಲುವ ಒಂದು ನಕ್ಷತ್ರದ ವಾಸಯೋಗ್ಯ ವಲಯದಲ್ಲಿ ಸುತ್ತುವ ಕಲ್ಲುಗುಡ್ಡಗಳನ್ನು ಹೊಂದಿರುವ ಸಂಭಾವ್ಯತೆ ಇರುವ ಹಾಗೂ ಭೂಮಿಗಿಂತ ಹೆಚ್ಚು ಭಾರ ಹೊಂದಿರುವವುಗಳಲ್ಲಿ ಮೊಟ್ಟಮೊದಲಾಗಿ ಕಂಡುಹಿಡಿಯಲ್ಪಟ್ಟ ಗ್ರಹ ಇದು. ಭೂಮಿ ಸಾದೃಶ್ಯತೆಯ ಅನುಕ್ರಮಣಿಕೆಯಲ್ಲಿ ಇದು ಆರನೇ ಸ್ಥಾನ ಪಡೆದಿದೆ. ಸೌರಮಂಡಲದಿಂದ ಸುಮಾರು ೧೪೦೦ ಜ್ಯೋತಿರ್ವಷಗಳಷ್ಟು ದೂರವಿರುವ ಈ ಗ್ರಹವನ್ನು ತಲುಪಲು ಗಂಟೆಗೆ ೫೯ ಸಾವಿರ ಕಿಲೋಮೀಟರು ವೇಗದಲ್ಲಿ (ನಾಸಾದ ವ್ಯೋಮನೌಕೆಗಳ ವೇಗ) ಹೋದರೆ ೨೫.೯ ಮಿಲಿಯ ವರ್ಷಗಳು ಬೇಕು.. == ಗುಣಲಕ್ಷಣಗಳು == ತನ್ನ ನಕ್ಷತ್ರವನ್ನು ಸುತ್ತುವರಿಯಲು ಈ ಗ್ರಹವು ೩೮೫ ಭೂಮಿಯ ದಿನಗಳನ್ನು ತೆಗೆದುಕೊಳ್ಳುತ್ತದೆ. ಆದು ಭೂಮಿಗಿಂತ ೬೦% ದೊಡ್ಡದಾಗಿದೆ. ಪರಿಯೋಜಿತ (ಅಂದರೆ, ಈಗಿರುವ ಅಳೆಯುವ ಪದ್ಧತಿಗಳ ಪ್ರಕಾರ ಅನುಮಾನಿಸಿದ) ಗಾತ್ರದ ಪ್ರಕಾರ ೨೦೧೫ರ ವರೆಗೆ ಕಂಡುಹಿಡಿಯಲಾದ ಭೂಮಿಗಾತ್ರದ ಗ್ರಹಗಳಲ್ಲಿ ಇದು ಅತ್ಯಂತ ಚಿಕ್ಕದು. == ಟಿಪ್ಪಣಿಗಳು ==