ಕೆಸು ಜವುಗು ಹಾಗೂ ನೆರಳಿನಲ್ಲಿ ಬೆಳೆಯುವ ಒಂದು ಸಸ್ಯ. ದಕ್ಷ್ಶಿಣ ಏಷಿಯಾದ ಮೂಲದ ಸಸ್ಯ. ಅಲಂಕಾರಿಕ ಸಸ್ಯವಾಗಿಯೂ ಬಳಕೆಯಲ್ಲಿದೆ. == ಸಸ್ಯಶಾಸ್ತ್ರೀಯ ವರ್ಗೀಕರಣ == ಕೊಲೊಕಾಸಿಯ ಎಸ್ಕುಲೆಂಟಾ [ ]ಎಂಬ ಸಸ್ಸ್ಯ ಶಾಸ್ತ್ರೀಯ ಹೆಸರನ್ನು ಹೊಂದಿದೆ. ಅರಾಸಿಯೆ ()ಕುಟುಂಬಕ್ಕೆ ಸೇರಿದೆ. == ಇತರ ಹೆಸರುಗಳು == ಇಂಗ್ಲಿಷ್ : ತಾರೋ () ಮಲೆಯಾಳಂ: ಚೆಂಪು == ಸಸ್ಯದ ಗುಣಲಕ್ಷಣಗಳು == ಅಗಲವಾದ ಎಲೆಗಳನ್ನು ಹೊಂದಿದೆ. ಇದರಲ್ಲಿ ಹಲವಾರು ಪ್ರಭೇದಗಳಿದ್ದು, ಎಲೆ ಕಾಂಡಗಳಲ್ಲಿ ನೀರು ನಿಲ್ಲುವುದಿಲ್ಲ. ಎರಡು ಅಥವಾ ಮೂರು ಅಡಿ ಎತ್ತರ ಬೆಳೆಯುತ್ತದೆ. == ಉಪಯೋಗಗಳು == ಇದು ಆಹಾರ ಪದಾರ್ಥವಾಗಿ ಬಳಕೆಯಲ್ಲಿದೆ. ಇದರ ಎಲೆ, ಕಾಂಡ ಹಾಗೂ ಗೆಡ್ಡೆ ಎಲ್ಲವೂ ಆಹಾರವಾಗಿ ಉಪಯೋಗಿಸಲ್ಪಡುತ್ತದೆ. ಪ್ರಪಂಚದಾದ್ಯಂತ ಉಪಯೋಗದಲ್ಲಿರುವ ಇದರಿಂದ ನೂರಾರು ಖಾದ್ಯಗಳನ್ನು ತಯಾರಿಸುತ್ತಾರೆ. ದಕ್ಷಿಣ ಕನ್ನಡ ಹಾಗೂ ಮಲೆನಾಡಿ ನಲ್ಲಿ ತಯಾರಿಸಲ್ಪಡುವ ಪತ್ರೋಡೆ ಎಂಬ ಖಾದ್ಯ ಅತ್ಯಂತ ಜನಪ್ರಿಯ. == ಬಾಹ್ಯ ಸಂಪರ್ಕಗಳು == - . == ಉಲ್ಲೇಖಗಳು ==