ಕೈಟಿನ್ ಸಂಧಿಪದಿಗಳ, ವಲಯವಂತಗಳ ಮತ್ತು ಬಹುಪಾಲು ಬಗೆಯ ಶಿಲೀಂಧ್ರಗಳ ಶರೀರ ರಚನೆಯಲ್ಲಿ ಕಾಣಬರುವ ಪ್ರಮುಖ ಬಗೆಯ ಬಹುಶರ್ಕರ (ಪಾಲಿಸ್ಯಾಕರೈಡ್). == ರಚಬೆ == ಕವಲೊಡೆಯದ ಬಲು ಉದ್ದವಾದ ಸರಪಳಿಯಂತಿರುವ ಕೈಟಿನ್ ಅಣು ಎನ್-ಅಸಿಟೈಲ್-ಗ್ಲೂಕೋಸಮೈನಿನ (-|-,) ಸಾವಿರಾರು ಘಟಕಗಳಿಂದ ರಚಿತವಾಗಿದೆ. ಈ ಘಟಕಗಳು β-1,4 ಗ್ಲೈಕೊಸಿಡಿಕ್ ಬಂಧಗಳಿಂದ ಪರಸ್ಪರ ಸೇರಿಕೊಂಡಿವೆ. ಸ್ವಾಭಾವಿಕವಾಗಿ ಕೈಟಿನ್ ಪ್ರೋಟೀನುಗಳೊಂದಿಗೆ ಕೂಡಿಕೊಂಡು ಗ್ಲೈಕೋ ಪ್ರೋಟೀನ್ ರೂಪದಲ್ಲಿ ಸ್ಥಿತವಾಗಿರುತ್ತದೆ. == ಲಕ್ಷಣಗಳು == ಕೈಟಿನ್‍ನ ಸಂರಚನೆಯನ್ನು ೧೯೨೯ರಲ್ಲಿ ಆಲ್ಬರ್ಟ್ ಹಾಫ್‍ಮನ್ಪರಿಹರಿಸಿದ. ಪೊಟಾಸಿಯಮ್ ಇಲ್ಲವೆ ಸೋಡಿಯಮ್ ಹೈಡ್ರಾಕ್ಸೈಡುಗಳೊಂದಿಗೆ ಕಾಯಿಸಿ ಅನಂತರ ಸಾರರಿಕ್ತ ಆಮ್ಲ ಮತ್ತು ಪ್ರಬಲವಾದ ಉತ್ಕರ್ಷಣಕಾರಿಯೊಂದಿಗೆ ವರ್ತಿಸುವುದರಿಂದ ಕೈಟಿನ್ನನ್ನು ಶುದ್ಧ ರೂಪದಲ್ಲಿ ಪಡೆಯಬಹುದು. ಶುದ್ಧರೂಪದ ಕೈಟಿನ್ ಬಣ್ಣವಿಲ್ಲದ ಪುಡಿಯಂತಿರುತ್ತದೆ; ನೀರಿನಲ್ಲಾಗಲಿ ಸಾರರಿಕ್ತ ಆಮ್ಲ ಇಲ್ಲವೆ ಕ್ಷಾರಗಳಲ್ಲಾಗಲೀ ಕರಗುವುದಿಲ್ಲ. ಆದರೆ ಸಾರ ಆಮ್ಲಗಳೊಂದಿಗೆ ಇಲ್ಲವೆ ಕೈಟಿನೇಸ್ ಎಂಬ ಕಿಣ್ವದೊಂದಿಗೆ ಸೇರಿಸಿ ಬಹುಕಾಲ ಇಟ್ಟರೆ ಜಲವಿಶ್ಲೇಷಣೆಗೊಳಗಾಗುತ್ತದೆ. ಕೈಟಿನ್ನಿನ ಸ್ವಾಭಾವಿಕ ಸಂಶ್ಲೇಷಣೆಗೆ UಆP-ಓ-ಅಸಿಟೈಲ್ ಗ್ಲೂಕೋಸಮೈನ್ ಎಂಬ ಪೂರ್ವಗಾಮಿ ಸಂಯುಕ್ತ ಹಾಗೂ ನಿರ್ದಿಷ್ಟ ಬಗೆಯ ಕಿಣ್ವ ಬೇಕು. ಅಲ್ಲದೆ ಅತ್ಯಲ್ಪ ಮೊತ್ತದಲ್ಲಿ ಮೊದಲೇ ತಯಾರಾದ ಈ ಬಹುಶರ್ಕರವಾಗಲೀ ಅದರಿಂದ ಉತ್ಪತ್ತಿಯಾಗುವ ಕಡಿಮೆ ಅಣುತೂಕದ ಡೆಕ್ಸ್‍ಟ್ರಿನ್ ಆಗಲಿ ಅವಶ್ಯಕ ಎಂದು ತೋರುತ್ತದೆ. ಇವು ಹೊಸ ಕೈಟಿನ್ ಅಣುಗಳ ಸಂಶ್ಲೇಷಣೆಗೆ ಮಾದರಿಗಳಾಗುತ್ತವೆ. ಬಸವನಹುಳು, ಭೂಮಿಯಲ್ಲಿ ವಾಸಿಸುವ ಬ್ಯಾಕ್ಟೀರಿಯ, ಎರೆಹುಳು ಮುಂತಾದ ಪ್ರಾಣಿಗಳಲ್ಲಿ ಕೈಟಿನ್ನನ್ನು ವಿಭಜಿಸುವ ಕಿಣ್ವವಾದ ಕೈಟನೇಸ್ ಎಂಬುದು ಕಂಡುಬರುತ್ತದೆ. == ಔಷಧವಾಗಿ == ಕೈಟಿನ್ ಔಷಧವಾಗಿ ಮನುಷ್ಯರ ಗಾಯಗಳನ್ನು ಕ್ಷಿಪ್ರವಾಗಿ ಗುಣಪಡಿಸುವ ಶಕ್ತಿ ಹೊಂದಿರುವುದು ಕಂಡುಬಂದಿದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == 2009-06-26 ವೇಬ್ಯಾಕ್ ಮೆಷಿನ್ ನಲ್ಲಿ. ( ) Martín- , , Gómez- , Martín- , , -Sánchez (1992). " -". . . 211: 241–254. :10.1016/0040-6031(92)87023-4.