ಕೊಡಗು ಜಿಲ್ಲೆ (ಕೊಡಗನ್ನು ಕೊಡವ ನಾಡ್ ಎಂದು ಕರೆಯಲಾಗುತ್ತದೆ), ಕರ್ನಾಟಕ ರಾಜ್ಯ ದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಹಸಿರು ವನರಾಶಿಯಿಂದ, ತೊರೆ, ಝರಿ, ನದಿಗಳಿಂದ ಕೂಡಿದ ಪರಿಸರದಲ್ಲಿದೆ. ಅದರ ಬಗ್ಗೆ ಹಲವಾರು ಕನ್ನಡ ಕವಿಗಳು ವರ್ಣಿಸಿದ್ದಾರೆ. ಚಿತ್ರ:ಸಾಂಪ್ರದಾಯಿಕ ವಿವಾಹದ ಉಡುಗೆ == ಹೆಸರಿನ ನಿಷ್ಪತ್ತಿ == ಕೊಡಗಿಗೆ ಕೂರ್ಗ್ () ಎಂಬ ಆಂಗ್ಲೀಯ[ಇಂಗ್ಲಿಶ್] ಬಳಕೆಯೂ ಇದೆ. ಭಾರತದ 'ಸ್ಕಾಟ್ ಲ್ಯಾಂಡ್' ಎಂಬ ಹೆಸರೂ ಇದಕ್ಕಿದೆ.://.//--/ 'ಕೊಡಗು' - ಕನ್ನಡದ ಕುಡು, ಎಂದರೆ ಗುಡ್ಡ ಅಥವಾ ಬೆಟ್ಟದ ಪ್ರದೇಶ ಎಂಬುದರಿಂದ ಬಂದಿರಬಹುದೆಂದು ಭಾವಿಸಲಾಗಿದೆ. == ಇಲ್ಲಿಯ ಜನ == ಕೊಡವರು ಮುಖ್ಯ (ಮೂಲ) ಜನರು. ಕೊಡವ ತಕ್ಕ್ ಹಾಗೂ ಅರೆಭಾಷೆ ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆಗಳು, ದಿನನಿತ್ಯದ ವ್ಯವಹಾರದಲ್ಲಿ ಹೆಚ್ಚಿನ ಜನರು ಕೊಡವ ತಕ್ಕ್ ಅನ್ನು ಬಳಸುತ್ತಾರೆ. ಕನ್ನಡ ಆಡಳಿತ ಭಾಷೆ. ಇದಲ್ಲದೆ ಮಲಯಾಳಂ,ತಮಿಳು, ತುಳು,ರಾವುಲ, ಮುಂತಾದವನ್ನು ಆಡುವವರು ಇಲ್ಲಿರುವರು.://../-// ಕೊಡವ ಭಾಷೆ ಅಥವಾ ಕೊಡವ ತಕ್ಕ್‌ಗೆ ಲಿಪಿ ಇದೆ,ಹಾಗೂ ಅರೆಬಾಷೆಗೆ ಇಲ್ಲ. ಕೊಡವ ಭಾಷೆಯನ್ನು ಸುಮಾರು ೩೦೦,೦೦೦ ಜನರು ಮಾತನಾಡಲು ಬಳಸುತ್ತಾರೆ ಹಾಗೂ ಅರೆಬಾಷೆಯನ್ನು ೨,೦೦೦೦೦ ಜನ ಬಳಸುತ್ತಾರೆ. ಯೆರವರು (ಅಥವಾ ರಾವುಲರು), ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಅಡಿಯರು ಎಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂಗಳು ಹಾಗೂ ವ್ಯವಸಾಯಗಾರರು. == ಜನಸಂಖ್ಯೆ == ೨೦೧೧ರ ಜನಗಣತಿಯ ಪ್ರಕಾರ ಕೊಡಗಿನ ಜನಸಂಖ್ಯೆ ೫,೫೪,೭೬೨.://.census2011..///259-. ಇವರಲ್ಲಿ ೨,೭೪,೭೨೫ ಪುರುಷರು ಮತ್ತು ೨,೮೦,೦೩೭ ಸ್ತ್ರೀಯರು. ಅಂದರೆ ಪ್ರತಿ ೧೦೦೦ ಪುರುಷರಿಗೆ ೧೦೧೯ ಸ್ತ್ರೀಯರಿದ್ದಾರೆ. ಕೊಡಗಿನ ಒಟ್ಟು ವಿಸ್ತೀರ್ಣವನ್ನು ೪,೧೦೨ ಚದರ ಕಿಲೊಮೀಟರನ್ನು ಪರಿಗಣಿಸಿದಾಗ ಇಲ್ಲಿನ ಜನಸಾಂದ್ರತೆ ಪ್ರತಿ ಚದರ ಕಿಲೊಮೀಟರಿಗೆ ೧೩೫ ಮಂದಿ. ಕೊಡಗಿನ ಒಟ್ಟು ಜನಸಂಖ್ಯೆಯಲ್ಲಿ ೪,೧೪,೩೦೫ ಮಂದಿ ( ಅಂದರೆ ೮೨.೫೨% ) ಅಕ್ಷರಸ್ಥರು. ಇವರಲ್ಲಿ ೨,೧೬,೪೧೩ ಮಂದಿ ಪುರುಷರು (೮೭.೨೪%) ಮತ್ತು ೧,೯೭,೮೯೨ ಸ್ತ್ರೀಯರು (೭೭.೯೧%). ಈ ಕೆಳಗಿನ ಕೋಷ್ಠಕದಲ್ಲಿ ಕೊಡಗಿನ ಕುರಿತ ಅಂಕಿ-ಅಂಶಗಳನ್ನು ೨೦೦೧ರ ಜನಗಣತಿಯೊಡನೆ ಹೋಲಿಸಿ ಕೊಡಲಾಗಿದೆ: == ಭೂಗೋಳ == ಕೊಡಗು ತನ್ನ ಪಶ್ಚಿಮ ಸರಹದ್ದಿನಲ್ಲಿ ದಕ್ಷಿಣ ಕನ್ನಡದ ಜಿಲ್ಲೆಯನ್ನೂ, ಉತ್ತರಕ್ಕೆ ಹಾಸನ, ಪೂರ್ವಕ್ಕೆ ಮೈಸೂರು, ದಕ್ಷಿಣಕ್ಕೆ ಕೇರಳದ ಕಣ್ಣೂರು ಜಿಲ್ಲೆಗಳನ್ನೂ ಹೊಂದಿದೆ. ಈ ಜಿಲ್ಲೆಯ ರಾಜಧಾನಿ ಮಡಿಕೇರಿ (ಮರ್ಕೆರಾ ಎಂದೂ ಆಂಗ್ಲದಲ್ಲಿ ಕರೆಯಲಾಗುತ್ತದೆ). ಕೊಡಗು ಮೊದಲು ಬ್ರಿಟಿಷರ ಕಾಲದಲ್ಲಿ ಸ್ವತಂತ್ರ ರಾಜ್ಯವಾಗಿತ್ತು. ಸ್ವಾತಂತ್ರ್ಯಾನಂತರ ಭಾಷಾವಾರು ರಾಜ್ಯವಿಂಗಡನೆಯಾದಾಗ ಮೈಸೂರು ರಾಜ್ಯಕ್ಕೆ ಜಿಲ್ಲೆಯಾಗಿ ಸೇರಲ್ಪಟ್ಟಿತು. == ತಾಲೂಕುಗಳು == ಕೊಡಗಿನಲ್ಲಿ ಐದುತಾಲೂಕುಗಳಿವೆ. ಕೊಡಗಿನ ೩ ತಾಲುಕಿನಲ್ಲು ಪ್ರವಾಸಿ ಕೆಂದ್ರಗಳಿವೆ. ಮಡಿಕೇರಿ ವಿರಾಜಪೇಟೆ ಸೋಮವಾರಪೇಟೆ ಕುಶಾಲನಗರ ಪೊನ್ನಂಪೇಟೆ === ಮಡಿಕೇರಿ ತಾಲುಕಿನ ಪ್ರೇಕ್ಷಣೀಯ ಸ್ಥಳಗಳು === ಪ್ರೇಕ್ಷಣೀಯ ಸ್ಥಳಗಳಲ್ಲಿ ಮುಖ್ಯವಾಗಿ ಮಡಿಕೇರಿ ತಾಲೂಕಿನಲ್ಲಿ ಅಬ್ಬಿ ಜಲಪಾತ, ಓಂಕಾರೇಶ್ವರ ದೇವಸ್ಥಾನ, ಗದ್ದಿಗೆ, ಅರಮನೆ, ರಾಜಸೀಟ್, ತಲಕಾವೇರಿ, ಇತ್ಯಾದಿಗಳಾದರೆ, ಎಮ್ಮೆಮಾಡ್ (ಸೂಫೀ ಶ ಹೀ ದ್) === ವಿರಾಜಪೇಟೆ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು === ವಿರಾಜಪೇಟೆ ತಾಲೂಕಿನಲ್ಲಿ- ನಾಗರಹೊಳೆ , ಇರ್ಪು, ಕುಂದ, ಟೀ ಏಸ್ಟೇಟ್, ಸೈಂಟ್ ಏನ್ಸ್ ಚರ್ಚ್, ಇಗ್ಗುತ್ತಪ್ಪ ದೇವಸ್ಥಾನ, ನಾಲ್ಕುನಾಡು ಅರಮನೆ, ಮುಂತಾದವು ಇವೆ. === ಕುಶಾಲನಗರ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು === ಕುಶಾಲನಗರ ತಾಲೂಕಿನಲ್ಲಿ- ಕಾವೇರಿ ನಿಸರ್ಗಧಾಮ, [[ಟಿಬೆಟ್ಟಿನ ಸ್ವರ್ಣದೇಗುಲ]ಪಿರಿಯಾಪಟ್ಟಣ{ತಾ}]], ವೀರಭೂಮಿ, ದುಬಾರೆ ಅರಣ್ಯ, ಹಾರಂಗಿ ಜಲಾಶಯ, ಚಿಕ್ಲಿ ಹೊಳೆ ಮೊದಲಾದವಿವೆ. === ಸೋಮವಾರಪೇಟೆ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು === ಸೋಮವಾರಪೇಟೆ ತಾಲೂಕಿನಲ್ಲಿ- ಹೊನ್ನಮ್ಮನ ಕೆರೆ, ಮಲ್ಲಳ್ಳಿ ಜಲಪಾತ, ಪುಷ್ಪಗಿರಿ ಅಭಯಾರಣ್ಯ ಮೊದಲಾದವಿವೆ. == ಬೆಳೆಗಳು == ಈ ಜಿಲ್ಲೆಯಲ್ಲಿ ಕಾಫಿ ಬಹಳವಾಗಿ ಬೆಳೆಯಲಾಗುತ್ತದೆಯಲ್ಲದೆ ಕರಿಮೆಣಸು,ಏಲಕ್ಕಿ,ಕಿತ್ತಳೆ,ಮತ್ತು ಭತ್ತ ಪ್ರಮುಖ ಬೇಸಾಯ.ಒಂದು ಕಾಲದಲ್ಲಿ ಕೊಡಗಿನ ಕಿತ್ತಳೆ ಭಾರತದಲ್ಲೆ ಹೆಸರಾಗಿತ್ತು.ಅದರೆ ಇಂದು ಅದು ಕೊಡಗಿನಲ್ಲಿಯೆ ಅಪರೂಪವಾಗಿದೆ.ಮೊದಲು ಕೊಡಗಿನಿಂದ ಕರ್ನಾಟಕ ರಾಜ್ಯಕ್ಕೆ ೧/೩ ಪಾಲು ಆದಾಯ ತೆರಿಗೆಯಾಗಿ ಹೋಗುತ್ತಿತ್ತು. == ಇತಿಹಾಸ == ಕನ್ನಡ ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ ಹಾಗು ಆಡಳಿತ ಭಾಷೆ. ಇದಲ್ಲದೆ ಅರೆಭಾಷೆ, ಕೊಡವ ತಕ್ಕ್, ಮಲಯಾಳಂ,ತಮಿಳು, ತುಳು,ರಾವುಲ, ಮುಂತಾದವನ್ನು ಆಡುವವರು ಇಲ್ಲಿರುವರು. ಕೊಡವ ಭಾಷೆ ಅಥವಾ ಕೊಡವ ತಕ್ಕ್‌ 1370 ಯಿಂದ ದಾಖಲಿತ ಲಿಪಿಯನ್ನು ಹೊಂದಿದೆ, ಇದನ್ನು ಸುಮಾರು 1,50,000 ಜನರು ಮಾತನಾಡುತ್ತಾರೆ ಮತ್ತು 4,00,000 ಜನರು ವ್ಯವಹಾರ ಭಾಷೆಯಾಗಿ ಬಳಸುತ್ತಾರೆ, ಕೊಡಗಿನ 18 ಬುಡಕಟ್ಟು ಸಮುದಾಯಗಳು ಕೊಡವ ತಕ್ಕ್ ಮಾತನಾಡುತ್ತಾರೆ. ಯೆರವೆರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂಗಳು ಹಾಗೂ ವ್ಯವಸಾಯಗಾರರು. == ಹೊರಗಿನ ಸಂಪರ್ಕಗಳು == ಕೊಡವ ['ಕೊಡಗು-ಕೊಡವರ ಸಿರಿನಾಡು ಕಾವೇರಿಯ ತವರು'-ಯಶೋದಾ ಮುತ್ತಣ್ಣ, ತರಂಗ,೨೯ ಸೆಪ್ಟೆಂಬರ್,೨೦೧೬,ಪು.೧೪-೩೦ & ೫೧-೫೩,ಮಂಜು ಮುಸುಕಿದ ಕೊಡವ ನಾಡು-ಚಿತ್ರ.ಅನಿಲ್.ಎಚ್.ಟಿ.] == ಉಲ್ಲೇಖಗಳು ==