ಕೊಮೊರೊಸ್ (ಉಚ್ಛಾರ , جزر القمر, ಘುಜುರ್ ಅಲ್-ಖಮರ್), ಅಧಿಕೃತವಾಗಿ ಕೊಮೊರೊಸ್ ಒಕ್ಕೂಟ (' ', الإتّحاد القمريّ, ಅಲ್-ಇತ್ತಿಹಾದ್ ಅಲ್-ಖಮರಿಯ್ಯ್) ಹಿಂದೂ ಮಹಾಸಾಗರದಲ್ಲಿನ ಒಂದು ದ್ವೀಪ ರಾಷ್ಟ್ರ. ಆಫ್ರಿಕಾದ ಪೂರ್ವ ತಟದ ಬಳಿ, ಉತ್ತರ ಮಾಡಗಾಸ್ಕರ್ ಮತ್ತು ಈಶಾನ್ಯ ಮೊಜಾಂಬಿಕ್ಗಳ ಮಧ್ಯೆ ಈ ದೇಶವಿದೆ. ಅರಬಿಕ್ ಭಾಷೆಯಲ್ಲಿ ಚಂದ್ರನೆಂಬ ಅರ್ಥದ ಪದವಾದ ಖಮರ್ ಇಂದ ಈ ದೇಶದ ಹೆಸರು ಉಗಮಿಸಿದೆ.