ಕೊಲೊಂಬಿಯ (ಅಧಿಕೃತವಾಗಿ ಕೊಲೊಂಬಿಯ ಗಣರಾಜ್ಯ - República (ಉಚ್ಛಾರಣೆ) ), ದಕ್ಷಿಣ ಅಮೇರಿಕದ ವಾಯುವ್ಯ ಭಾಗದಲ್ಲಿರುವ ಒಂದು ದೇಶ. ಈ ದೇಶದ ಪೂರ್ವಕ್ಕೆ ವೆನೆಜುವೆಲ ಮತ್ತು ಬ್ರೆಜಿಲ್; ದಕ್ಷಿಣಕ್ಕೆ ಎಕ್ವಡಾರ್ ಮತ್ತು ಪೆರು; ಉತ್ತರಕ್ಕೆ ಅಟ್ಲಾಂಟಿಕ್ ಮಹಾಸಾಗರ ಮತ್ತು ಕೆರಿಬ್ಬಿಯನ್ ಸಮುದ್ರ ಹಾಗು ಪಶ್ಚಿಮಕ್ಕೆ ಪನಾಮ ಮತ್ತು ಪೆಸಿಫಿಕ್ ಮಹಾಸಾಗರಗಳಿವೆ. ಇಂದು ಕೊಲೊಂಬಿಯ ದೇಶ ಇರುವ ಜಾಗದಲ್ಲಿ ಮೊದಲು ಸ್ಥಳೀಯ ಬುಡಕಟ್ಟು ಜನಾಂಗದವರಿದ್ದರು. ೧೪೯೯ ರಲ್ಲಿ ಸ್ಪೇನ್ ದೇಶದವರು ದಾಳಿ ಮಾಡಿ ಇದನ್ನು ವಸಹಾತನ್ನಾಗಿ ಮಾಡಿಕೊಂಡು. ಬೊಗೋಟಾ ಅವರ ರಾಜಧಾನಿಯಾಗಿತ್ತು.