ಕೊಸೊವೊ ( - ಕೊಸೊವ, Косово - ಕೊಸೊವೊ, ) ಕೆಲವು ದೇಶಗಳಿಂದ ಮನ್ನಣೆ ಪಡೆದಿರುವ ಪೂರ್ವ ಯುರೋಪ್ನ ಒಂದು ಭೂಆವೃತ ದೇಶ. ಸೆರ್ಬಿಯ ಈ ಪ್ರದೇಶವನ್ನು ತನ್ನ ಭಾಗವೆಂದು ಕಾಣುತ್ತದೆ. ಇದರ ಉತ್ತರಕ್ಕೆ ಸೆರ್ಬಿಯಾ, ಪಶ್ಚಿಮಕ್ಕೆ ಮಾಂಟೆನೆಗ್ರೊ, ಮತ್ತು ದಕ್ಷಿಣಕ್ಕೆ ಅಲ್ಬೇನಿಯ ಮತ್ತು ಉತ್ತರ ಮ್ಯಾಸೆಡೊನಿಯಗಳಿವೆ. ಸುಮಾರು ೨ ಮಿಲಿಯನ್ ಜನರನ್ನು ಹೊಂದಿರುವ ಈ ದೇಶದಲ್ಲಿ ಬಹುಪಾಲು ಜನ ಅಲ್ಬೇನಿಯನರು. ೧೯೯೯ರ ಕೊಸೊವೊ ಯುದ್ಧದ ನಂತರ ಸಂಯುಕ್ತ ರಾಷ್ಟ್ರ ಸಂಸ್ಥೆಯು ಇದನ್ನು ನೇಟೊ ನೇತೃತ್ವದ ಸುರಕ್ಷೆಯೊಂದಿಗೆ ತನ್ನ ಆಡಳಿತಕ್ಕೆ ತಗೆದುಕೊಂಡಿತು. ಅನೇಕ ಮಾತುಕತೆಗಳು ಯಾವುದೇ ಫಲಿತಾಂಶ ನೀಡದಿದ್ದಾಗ ಕೊಸೊವೊದ ತಾತ್ಕಾಲಿಕ ಸರ್ಕಾರ ಫೆಬ್ರುವರಿ ೧೭, ೨೦೦೮ರಂದು ತಾನಾಗಿ ತಾನೇ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು. == ಉಲ್ಲೇಖಗಳು ==