ಕೋಫ಼್ತಾ ಒಂದು ಬಗೆಯ ಮಾಂಸದುಂಡೆ ಅಥವಾ ಮಾಂಸತುಂಡು ಮತ್ತು ಅಫ಼್ಘಾನ್, ಭಾರತೀಯ, ಇರಾನೀ, ಪಾಕಿಸ್ತಾನಿ ಮುಂತಾದ ಪಾಕಪದ್ಧತಿಗಳಲ್ಲಿ ಒಂದು ಜನಪ್ರಿಯ ಖಾದ್ಯವಾಗಿದೆ. ಅತ್ಯಂತ ಸರಳ ರೂಪದಲ್ಲಿ, ಕೋಫ಼್ತಾಗಳು ಸಂಬಾರ ಪದಾರ್ಥಗಳು ಹಾಗೂ/ಅಥವಾ ಈರುಳ್ಳಿಗಳೊಂದಿಗೆ ಮಿಶ್ರಣಮಾಡಿದ ಕೊಚ್ಚಿದ ಅಥವಾ ರುಬ್ಬಿದ ಮಾಂಸದ ಉಂಡೆಗಳನ್ನು- ಸಾಮಾನ್ಯವಾಗಿ ಗೋಮಾಂಸ, ಚಿಕನ್, ಹಂದಿಮಾಂಸ ಅಥವಾ ಕುರಿಮಾಂಸ ಹೊಂದಿರುತ್ತವೆ. ಭಾರತದಲ್ಲಿ, ಸಸ್ಯಾಹಾರಿ ವಿಧಗಳು ಆಲೂಗಡ್ಡೆ, ಸೋರೆಕಾಯಿ, ಪನೀರ್ ಅಥವಾ ಬಾಳೆಯಿಂದ ತಯಾರಿಸಲಾದ ಕೋಫ಼್ತಾಗಳನ್ನು ಒಳಗೊಂಡಿವೆ. ಭಾರತದಲ್ಲಿ ಕೋಫ಼್ತಾಗಳನ್ನು ಸಾಮಾನ್ಯವಾಗಿ ಮಸಾಲೆಭರಿತ ಕರಿ/ಗ್ರೇವಿಯಲ್ಲಿ ಬೇಯಿಸಿ ಬಡಿಸಲಾಗುತ್ತದೆ ಮತ್ತು ಅನ್ನ ಅಥವಾ ಭಾರತೀಯ ಬ್ರೆಡ್‍ಗಳೊಂದಿಗೆ ತಿನ್ನಲಾಗುತ್ತದೆ. ಟರ್ಕಿದೇಶದಲ್ಲಿ ಇನ್ನೂರು ತೊಂಬತ್ತೊಂದು ತರದ ಕೋಫ್ತಾಗಳಿವೆ. ಚುಟ್ಟ ಆಕಾರದ ಕೋಫ್ತಾಗಳನ್ನು ಅರಬ್‍ನಲ್ಲಿ ತಯಾರಿಸುತ್ತಾರೆ. == ಉಲ್ಲೇಖಗಳು ==