ಕೊಬಾಲ್ಟ್ ಒಂದು ಬೆಳ್ಳಿಯಂತೆ ಬಿಳಿ ಬಣ್ಣದ ಮೂಲಧಾತು ಲೋಹವಾಗಿದೆ. ಇದನ್ನು ಸಿ.ಒ ಚಿಹ್ನೆಯಿಂದ ಗುರುತಿಸಲಾಗಿದೆ ಮತ್ತು ಇದರ ಪರಮಾಣು ಸಂಖ್ಯೆ ೨೭. ಇದು ಗುಣಲಕ್ಷಣಗಳಲ್ಲಿ ಕಬ್ಬಿಣ ಹಾಗೂ ನಿಕಲ್ ಲೋಹಗಳನ್ನು ಹೋಲುತ್ತದೆ. ಅವುಗಳಂತೆ ಇದು ಕೂಡಾ ಅಯಸ್ಕಾಂತೀಯ ಗುಣವನ್ನು ಹೊಂದಿದೆ. ಇದನ್ನು ಸ್ವೀಡನ್ ದೇಶದ ಜಾರ್ಜ್ ಬ್ರಾಂಡ್ ( ) ಎಂಬವರು ೧೭೩೭ರಲ್ಲಿ ಕಂಡುಹಿಡಿದರು. ಕೋಬಾಲ್ಟ್ ನಿರ್ದಿಷ್ಟ ೮.೯ ಗುರುತ್ವಾಕರ್ಷಣೆಯೊಂದಿಗೆ 'ಫೆರ್ರೊಮ್ಯಾಗ್ನೆಟಿಕ್ ಲೋಹವಾಗಿದೆ'. ಕೋಬಾಲ್ಟ್ ಪ್ರಾಥಮಿಕವಾಗಿ, ಮ್ಯಾಗ್ನೆಟ್ ತಯಾರಿಕೆಯಲ್ಲಿ, ಉಡುಗೆ ನಿರೋಧಕ ಮತ್ತು ಉನ್ನತ ಶಕ್ತಿಯ ಮಿಶ್ರಲೋಹಗಳಲ್ಲಿ ಬಳಸಲಾಗುತ್ತದೆ. ಅಜೈವಿಕ ರೂಪದಲ್ಲಿ ಕೋಬಾಲ್ಟ್ - ಬ್ಯಾಕ್ಟೀರಿಯಾ, ಪಾಚಿ ಮತ್ತು ಶಿಲೀಂಧ್ರಗಳ ಒಂದು ಮೈಕ್ರೋನ್ಯೂಟ್ರಿಯಂಟ್ ಆಗಿದೆ. ಇದನ್ನು ಮಿಶ್ರಲೋಹಗಳ ತಯಾರಿಕೆಯಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. ಇದಲ್ಲದೆ ಕೆಲವು ಅತ್ಯಂತ ಗಟ್ಟಿಯಾದ ವಸ್ತುಗಳ ತಯಾರಿಕೆಯಲ್ಲಿ, ಅಯಸ್ಕಾಂತೀಯ ವಸ್ತುಗಳ ತಯಾರಿಕೆಯಲ್ಲಿ, ಉಷ್ಣ ನಿರೋಧಕ ತಯಾರಿಕೆಯಲ್ಲಿ, ವಿಟಮಿನ್ -12ರ ತಯಾರಿಕೆಯಲ್ಲಿ ಬಳಕೆಯಲ್ಲಿದೆ. ಇದರ ಒಂದು ಸಮಸ್ಥಾನಿ () ಕೊಬಾಲ್ಟ್-೬೦ ಕ್ಯಾನ್ಸರ್ ನ ಚಿಕಿತ್ಸೆಯಲ್ಲಿ ಉಪಯೋಗಿಸಲ್ಪಡುತ್ತದೆ.