ಕೋಸಂಬರಿ ಬೇಳೆಕಾಳುಗಳಿಂದ ತಯಾರಿಸಲಾದ ಮತ್ತು ಸಾಸಿವೆಯ ಒಗ್ಗರಣೆ ಕೊಡಲಾದ ಒಂದು ಸ್ಯಾಲಡ್. ಕಡಲೆ ಬೇಳೆ ಮತ್ತು ಹೆಸರು ಬೇಳೆ ಸಾಮಾನ್ಯವಾಗಿ ಬಳಸಲಾದ ಬೇಳೆಕಾಳುಗಳು. ಈ ಸ್ಯಾಲಡ್‍ಗಳನ್ನು ಕೆಲವೊಮ್ಮೆ ಲಘು ಆಹಾರವಾಗಿ ತಿನ್ನಲಾಗುತ್ತದೆ, ಆದರೆ ಸಾಮಾನ್ಯವಾಗಿ ಉಡುಪಿ ಪಾಕಪದ್ಧತಿಯಲ್ಲಿ ಪೂರ್ಣ ವರಸೆಯ ಊಟದ ಭಾಗವಾಗಿ ತಿನ್ನಲಾಗುತ್ತದೆ. == ಬೇಕಾಗುವ ಸಾಮಾಗ್ರಿಗಳು == ಕ್ಯಾರೆಟ್ (ತುರಿದ ಕ್ಯಾರೆಟ್) ಹೆಸರು ಬೇಳೆ ( ೩ ಗಂಟೆ ಮುಂಚಿತವಾಗಿ ನೀರಿನಲ್ಲಿ ನೆನೆ ಹಾಕಿರಬೇಕು) ಸ್ವಲ್ಪ ತುರಿದ ತೆಂಗಿನಕಾಯಿ ಸ್ವಲ್ಪ ಕೊತ್ತಂಬರಿ ಸೊಪ್ಪು (ಕತ್ತರಿಸಿದ್ದು) ರುಚಿಗೆ ತಕ್ಕ ಉಪ್ಪು == ಒಗ್ಗರಣೆಗೆ == ಅಡುಗೆ ಎಣ್ಣೆ ಚಮಚ ಸಾಸಿವೆ ಇಂಗು ಕತ್ತರಿಸಿದ ಹಸಿಮೆಣಸಿನ ಕಾಯಿ == ತಯಾರಿಸುವ ವಿಧಾನ == ನೀರಿನಲ್ಲಿ ನೆನೆಹಾಕಿದ ಹೆಸರುಬೇಳೆಯನ್ನು ಅದರ ನೆನೆ ಹಾಕಿದ ವಾಸನೆ ಹೋಗುವವರೆಗೆ ಚೆನ್ನಾಗಿ ತೊಳೆಯಬೇಕು. ಅದಕ್ಕೆ ತುರಿದ ಕ್ಯಾರೆಟ್ ಮತ್ತು ಕೊಬ್ಬರಿಯನ್ನು ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಬೇಕು. ಈಗ ಬಾಣಲೆಯನ್ನು ಬಿಸಿ ಮಾಡಿ ಸಾಸಿವೆ ಹಾಕಿ ಅದು ಚಟಾಪಟಾ ಶಬ್ದ ಬರುವಾಗ ಹಸಿಮೆಣಸಿನ ಕಾಯಿ ಮತ್ತು ಚಿಟಿಕೆಯಷ್ಟು ಇಂಗು ಸೇರಿಸಿ ೧-೨ ನಿಮಿಷ ಬಿಸಿ ಮಾಡಿ, ಅದನ್ನು ಕೊತ್ತಂಬರಿ ಸೊಪ್ಪಿನ ಮಿಶ್ರಣದ ಜೊತೆ ಸೇರಿಸಿದರೆ , ಕೋಸಂಬರಿ ರೆಡಿ. == ಉಲ್ಲೇಖಗಳು ==