ಕ್ಯಾಲಿಫೋರ್ನಿಯಮ್ ಕೃತಕವಾಗಿ ಸೃಷ್ಟಿಸಲ್ಪಟ್ಟ ಒಂದು ವಿಕಿರಣಶೀಲ ಮೂಲಧಾತು. ಇದನ್ನು ಅಮೆರಿಕದ ಕ್ಯಾಲಿಫೋರ್ನಿಯಾದ ಬರ್ಕಲಿ ವಿಶ್ವವಿದ್ಯಾಲಯದಲ್ಲಿ ೧೯೫೦ರಲ್ಲಿ ಕಂಡುಹಿಡಿದರು. ಆದುದರಿಂದ ಇದಕ್ಕೆ ಕ್ಯಾಲಿಫೋರ್ನಿಯಮ್ ಎಂದು ಹೆಸರಿಡಲಾಗಿದೆ. ಇದಕ್ಕೆ ಸುಮಾರು ೧೮ ಸಮಸ್ಥಾನಿಗಳಿವೆ. ಇದನ್ನು ಕ್ಯುರಿಯಮ್ ಪರಮಾಣುವನ್ನು ಹೀಲಿಯಮ್ ಅಯಾನುಗಳಿಂದ ತಾಡಿಸಿ ಪಡೆಯಲಾಗಿದೆ. ಇದು ಯುರೇನಿಯಂ ಆಚೆಯ (ಟ್ರಾನ್ಸ್‌ಯುರೇನಿಕ್) ಧಾತುಗಳಲ್ಲಿ ಒಂದು. ಇದರ ರಾಸಾಯನಿಕ ಚಿಹ್ನೆ . ಆಕ್ಟಿನೈಡ್ ಶ್ರೇಣಿಯ ಧಾತುಗಳಲ್ಲಿ ಒಂಬತ್ತನೆಯದು. ಪರಮಾಣು ಸಂಖ್ಯೆ ೯೮. ಇದರ ಸಂಭಾವ್ಯ ಎಲೆಕ್ಟ್ರಾನಿಕ್ ವಿನ್ಯಾಸ 1s2 2s2 2p6 3s2 3p6 3d10 4s2 4p6 4d10 4f14 5s2 5p6 5d10 5f10 6s2 6p6 7s2. ಇದನ್ನು ೧೯೫೦ರಲ್ಲಿ ಎಸ್. ಜಿ. ಥಾಂಪ್ಸನ್ ಮತ್ತು ಅವನ ಸಂಗಡಿಗರು ಸಂಶ್ಲೇಷಿಸಿದರು. ಅಮೆರಿಕದ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ೬೦" ವ್ಯಾಸದ ಸೈಕ್ಲೊಟ್ರಾನ್ ವೇಗೋತ್ಕರ್ಷದಲ್ಲಿ ಕ್ಯೂರಿಯಂ-೨೪೨ನ್ನು ಹೀಲಿಯಂ ಆಯಾನುಗಳಿಂದ ತಾಡಿಸಿದಾಗ (ಬೊಂಬಾರ್ಡ್) ಕ್ಯಾಲಿಫೋರ್ನಿಯಮಿನ ಅಸ್ತಿತ್ವ ಬೆಳಕಿಗೆ ಬಂತು. ಮೂಡಿಬಂದ ಹೊಸ ಕೃತಕಧಾತುವಿಗೆ ಕ್ಯಾಲಿಫೋರ್ನಿಯಂ ಅನ್ವರ್ಥನಾಮವಾಯಿತು. == ಸಮಸ್ಥಾನಿಗಳು == ಇದರ ಪ್ರಧಾನ ಸಮಸ್ಥಾನಿಯ ಪರಮಾಣುತೂಕ ೨೪೫. ಕ್ಯಾಲಿಫೋರ್ನಿಯಂ ೨೪೨ರಿಂದ ಹಿಡಿದು ಕ್ಯಾಲಿಫೋರ್ನಿಯಂ-೨೫೪ರ ವರೆಗಿನ ಸಮಸ್ಥಾನಿಗಳನ್ನು ಕಂಡುಹಿಡಿಯಲಾಗಿದೆ. ಎಲ್ಲ ಸಮಸ್ಥಾನಿಗಳಿಗೂ ವಿಕಿರಣಪಟುತ್ವ (ರೇಡಿಯೋ ಆಕ್ಟಿವಿಟಿ) ಉಂಟು. ಇವುಗಳ ಅರ್ಧಾಯು (ಹಾಫ್‌ಲೈಫ್) ಕೆಲವು ಮಿನಿಟುಗಳಿಂದ ಹಿಡಿದು ಸುಮಾರು ೫,೦೦೦ ವರ್ಷಗಳವರೆಗೂ ವ್ಯಾಪಿಸಿದೆ. ಭಿನ್ನ ಭಿನ್ನ ವರ್ಗಗಳ ಸಮಸ್ಥಾನಿಗಳನ್ನು ಪ್ರಯೋಗದ ಗುರಿ ವಸ್ತುವನ್ನಾಗಿ (ಟಾರ್ಗೆಟ್ ಮೆಟೀರಿಯಲ್) ಆರಿಸಿಕೊಂಡು ಅವನ್ನು ಬೇರೆ ಬೇರೆ ಕಣಗಳಿಂದ ತಾಡಿಸಿ ಕ್ಯಾಲಿಫೋರ್ನಿಯಮಿನ ವಿವಿಧ ಸಮಸ್ಥಾನಿಗಳನ್ನು ತಯಾರಿಸುವುದರ ಜೊತೆಗೆ ನ್ಯೂಕ್ಲಿಯರ್ ರಿಯಾಕ್ಟರುಗಳಲ್ಲೂ ಪ್ಲುಟೋನಿಯಂ-೨೩೯ನ್ನು ನ್ಯೂಟ್ರಾನುಗಳ ಪ್ರಭಾವಕ್ಕೊಳಪಡಿಸಿ ಕ್ಯಾಲಿಫೋರ್ನಿಯಮಿನ ಸಮಸ್ಥಾನಿಗಳನ್ನು ತಯಾರಿಸಲಾಗುತ್ತದೆ. ಇಂಥವಲ್ಲಿ ಉತ್ಪಾದನೆಯಾಗುವ ಸಮಸ್ಥಾನಿಯ ಪರಿಮಾಣ ಹಲವು ಮಿಲಿಗ್ರಾಂಗಳಷ್ಟು ಮಾತ್ರ! == ಉಪಯೋಗಗಳು == ಕ್ಯಾಲಿಫೋರ್ನಿಯಂ-೨೫೨ನ್ನು ಪರಮಾಣು ಭೌತವಿಜ್ಞಾನದ ವಿವಿಧ ವಿಭಾಗಗಳಲ್ಲಿ ಬಳಸುವುದಲ್ಲದೆ ವೈದ್ಯಕೀಯ ಸಂಶೋಧನೆಯಲ್ಲೂ ಬಳಸುವುದಿದೆ. ಅಧಿಕ ತೀಕ್ಷ್ಣತೆಯ ನ್ಯೂಟ್ರಾನ್ ಆಕರಗಳ ಸಂಬಂಧದಲ್ಲಿ ೨೫೨Cfರ ಉಪಯೋಗ ಹೆಚ್ಚು. ಅರ್ಧಾಯು ೩೨೩ ವರ್ಷಗಳಿರುವ ೨೪೯Cf ಸಮಸ್ಥಾನಿಗೆ ರಾಸಾಯನಿಕ ಪರೀಕ್ಷೆಗಳಲ್ಲಿ ಅತ್ಯಧಿಕ ಪ್ರಯೋಜನ ಉಂಟು. ಇದನ್ನು ()ರ ಕಾಂತಪ್ರವೃತ್ತಿಯನ್ನು (ಮ್ಯಾಗ್ನೆಟಿಕ್ ಸಸೆಪ್ಟಿಬಿಲಿಟಿ) ಅಳೆಯಲು ಉಪಯೋಗಿಸುತ್ತಾರೆ. ಕ್ಯಾಲಿಫೋರ್ನಿಯಮಿನ ನಾಲ್ಕು ಘನಸಂಯುಕ್ತ ವಸ್ತುಗಳನ್ನು (CfCl3, , ಮತ್ತು Cf2O3) ವರ್ಗೀಕರಿಸಲಾಗಿದೆ. ಇವೆಲ್ಲವನ್ನೂ ಶುಷ್ಕ ರಾಸಾಯನಿಕ ವಿಧಾಗಳಿಂದ ಕಂಡುಕೊಳ್ಳಲಾಗಿದೆ. ಎಲ್ಲ ಸಂಯುಕ್ತಗಳೂ ಹಸಿರು ಬಣ್ಣದವು. ೧೯೨೮ರ ಮೊದಲು ೨೫೨Cfರ ರಾಸಾಯನಿಕ ಗುಣ ಲಕ್ಷಣಗಳನ್ನು ಟ್ರೇಸರ್ ವಿಧಾನವನ್ನು ಅನುಸರಿಸಿ ಅಧ್ಯಯನ ಮಾಡಲಾಗಿತ್ತು. ಆಕ್ಟಿನೈಡ್ ಶ್ರೇಣಿಯ ಇತರ ಧಾತುಗಳ ರಾಸಾಯನಿಕ ಗುಣಲಕ್ಷಣಗಳು ಇದಕ್ಕೂ ಇರುವುದು ಕಂಡುಬಂದಿತು. == ಉಲ್ಲೇಖ == == ಹೊರಗಿನ ಕೊಂಡಿಗಳು == ( ) . – – ,