ಕ್ರಕ್ಸ್ ದಕ್ಷಿಣಾಕಾಶದ ಒಂದು ಹೆಸರಾಂತ ನಕ್ಷತ್ರಪುಂಜ. ತ್ರಿಶಂಕು ಎಂಬುದು ಇದರ ಪರ್ಯಾಯನಾಮ. == ವ್ಯಾಪ್ತಿ == ಇದರ ವ್ಯಾಪ್ತಿ ವಿಷುವದಂಶ 11 ಗಂ. 55ಮಿ.-12ಗಂ.55ಮಿ. ಮತ್ತು ಘಂಟಾವೃತ್ತಾಂಶ 550 ದ.-640 ದ.ಕ್ರಕ್ಸ್ ಪುಂಜದ ಆಕಾರ ತಲೆಕೆಳಗಾದ ಶಿಲುಬೆಯಂತೆ. ಈ ಕಾರಣದಿಂದ ಇದಕ್ಕೆ ದಕ್ಷಿಣದ ಶಿಲುಬೆ (ಸದರ್ನ್ ಕ್ರಾಸ್) ಎಂಬ ಹೆಸರು ಸಹ ರೂಢಿಯಲ್ಲಿದೆ. ಉತ್ತರಾಕಾಶದ ಲಘು ಸಪ್ತರ್ಷಿಗೆ ಇದು ಸಂವಾದಿ ಎಂಬುದು ಕೆಲವರ ಮತ. ಇದರಲ್ಲಿನ ನಾಲ್ಕು ಪ್ರಮುಖ ನಕ್ಷತ್ರಗಳ ಪೈಕಿ ಶಿಲುಬೆಯ ಬುಡದಲ್ಲಿರುವುದು α-ಕ್ರೂಸಿಸ್; ಇದಕ್ಕೆ ಆಕ್ರಕ್ಸ್ ಎಂಬ ಮತ್ತೊಂದು ಹೆಸರೂ ಉಂಟು. ಈ ನಕ್ಷತ್ರದ ಸಹಾಯದಿಂದ ದಿಕ್ಕಿನ ನಿರ್ದೇಶನವನ್ನು ನಾವಿಕರು ಪಡೆಯುತ್ತಿದ್ದರು. ಹೀಗಾಗಿ ಇದನ್ನು ನಾವಿಕನಕ್ಷತ್ರವೆಂದೂ (ನ್ಯಾವಿಗೇಷನಲ್ ಸ್ಪಾರ್) ಕರೆಯುವುದಿದೆ. ಶಿಲುಬೆಯ ಶಿರೋಭಾಗದಲ್ಲಿರುವ ನಕ್ಷತ್ರ ( ಗ್ಯಾಕ್ರಕ್ಸ್. ಈ ಎರಡೂ ನಕ್ಷತ್ರಗಳನ್ನು ಸೇರಿಸುವ ಸರಳರೇಖೆ ಹೆಚ್ಚು ಕಡಿಮೆ ಖಗೋಳೀಯ ದಕ್ಷಿಣಧ್ರುವದ ದಿಕ್ಕನ್ನು ನಿರ್ದೇಶಿಸುತ್ತದೆ. == ಬಾಹ್ಯ ಸಂಪರ್ಕಗಳು == . – 2008-10-14 ವೇಬ್ಯಾಕ್ ಮೆಷಿನ್ ನಲ್ಲಿ. – ://.byethost14.//. 1516-1989: (" , ...") . : . , . , , 1995, . 85. ()|: , ., , (2005), . 396. (2007). , , . 978-0-00-725120-9. , . 978-0-691-13556-4. [೧] - , 1516, , 1989