ಕ್ರೊಯೆಶಿಯ (), ಅಧಿಕೃತವಾಗಿ ಕ್ರೊಯೆಶಿಯ ಗಣರಾಜ್ಯ ( ಉಚ್ಛಾರ ), ದಕ್ಷಿಣ ಯುರೋಪ್ನಲ್ಲಿನ ಬಾಲ್ಕನ್ ಪ್ರದೇಶದ ಒಂದು ದೇಶ. ಇದರ ರಾಜಧಾನಿ ಜಾಗ್ರೆಬ್. ಇದರ ಗಡಿಗಳ ಉತ್ತರಕ್ಕೆ ಸ್ಲೊವೇನಿಯ ಮತ್ತು ಹಂಗೆರಿ, ಈಶಾನ್ಯಕ್ಕೆ ಸೆರ್ಬಿಯ, ಪೂರ್ವಕ್ಕೆ ಬೊಸ್ನಿಯ ಮತ್ತು ಹೆರ್ಜೆಗೊವಿನ, ಆಗ್ನೇಯಕ್ಕೆ ಮಾಂಟೆನೆಗ್ರೊ, ಹಾಗು ದಕ್ಷಿಣಕ್ಕೆ ಆಡ್ರಿಯಾಟಿಕ್ ಸಮುದ್ರಗಳಿವೆ.