ಖರಹರಪ್ರಿಯ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೨೨ನೇ ರಾಗ. ಅಸಂಪೂರ್ಣ ಮೇಳ ಪದ್ಧತಿಯ ಪ್ರಕಾರ ಶ್ರೀರಾಗವು ೨೨ನೇ ಮೇಳವಾಗಿತ್ತು. ಈ ಪದ್ಧತಿಯನ್ನು ಅನುಸರಿಸಿ ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಾಶಾಸ್ತ್ರಿಗಳು ಕೃತಿ ರಚಿಸಿರುವ ಕಾರಣ ಖರಹರಪ್ರಿಯ ರಾಗದಲ್ಲಿ ಇವರ ರಚನೆಗಳಿಲ್ಲ. ಈ ರಾಗಕ್ಕೆ ಮೊದಲು ಹರಪ್ರಿಯ ಎಂಬ ಹೆಸರಿತ್ತು. ಕಟಪಯಾದಿ ಸೂತ್ರಕ್ಕೆ ಹೊಂದಿಕೊಳ್ಳುವಂತೆ ಖರ ಎಂಬ ಮುಂಪ್ರತ್ಯಯವನ್ನು ಸೇರಿಸಿ ಖರಹರಪ್ರಿಯ ಎಂಬ ಹೆಸರು ರೂಢಿಯಲ್ಲಿದೆ.ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ ಇದು ಕಾಫಿ ಥಾಟ್‍ಗೆ ಸಮಾನವಾಗಿದೆ. == ರಾಗ ಲಕ್ಷಣ ಮತ್ತು ಸ್ವರೂಪ == ಇದು ನಾಲ್ಕನೆಯ ವೇದ ಚಕ್ರದ ನಾಲ್ಕನೆಯ ರಾಗವಾವಿದೆ.ಈ ರಾಗವನ್ನು ಎಲ್ಲ ಕಾಲದಲ್ಲಿಯೂ ಹಾಡಬಹುದಾಗಿದ್ದು, ರಂಜನಿಯ ರಾಗವಾಗಿದೆ. ಇದರ ಆರೋಹಣ ಮತ್ತು ಅವರೋಹಣದ ಸ್ವರಗಳು ಈ ಕೆಳಗಿನಂತಿವೆ. ಆರೋಹಣ ಸ ರಿ೨ ಗ೨ ಮ೧ ಪ ದ೨ ನಿ೨ ಸ' ಅವರೋಹಣ ಸ' ನಿ೨ ದ೨ ಪ ಮ೧ ಗ೨ ರಿ೨ ಸ == ಜನ್ಯ ರಾಗಗಳು == ಈ ರಾಗದಲ್ಲಿ ಅತ್ಯಂತ ಜನಪ್ರಿಯ ರಾಗಗಳಾದ ಅಭೇರಿ, ಅಭೋಗಿ, ಕಾನಡ, ಕಾಪಿ, ಮಧ್ಯಮಾವತಿ, ರೀತಿಗೌಳ, ಶುದ್ಧ ಧನ್ಯಾಸಿ, ಶ್ರೀರಂಜನಿ ಮತ್ತು ಶಿವರಂಜನಿ ಜನ್ಯವಾಗಿವೆ. == ಜನಪ್ರಿಯ ರಚನೆಗಳು == ಈ ರಾಗದಲ್ಲಿರುವ ಜನಪ್ರಿಯ ರಚನೆಗಳು == ಉಲ್ಲೇಖಗಳು == 1) ಕರ್ನಾಟಕ ಸಂಗೀತ : ಮಾಧ್ಯಮಿಕ ಹಂತ - ಕರ್ನಾಟಕ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ. == ಬಾಹ್ಯ ಸಂಪರ್ಕಗಳು == ಖರಹರಪ್ರಿಯ ರಾಗದಲ್ಲಿ ಜೇಸುದಾಸ್ ಗಾಯನ