ಗಂಧನಹಳ್ಳಿ ಗ್ರಾಮವು ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲ್ಲೂಕಿನ ಅತಿ ದೊಡ್ಡ ಗ್ರಾಮವಾಗಿದೆ. ಕಾವೇರಿ ನದಿಯ ಎಡಭಾಗದಲ್ಲಿರುವ ಈ ಗ್ರಾಮವು ತಾಲ್ಲೂಕು ಕೇಂದ್ರದಿಂದ ಸುಮಾರು ಹದಿಮೂರು ಕಿ.ಮೀ. ದೂರದಲ್ಲಿದೆ. ಬಹುತೇಕ ಕುರುಬ ಜನಾಂಗದವರೇ ಈ ಗ್ರಾಮದಲ್ಲಿ ಅಧಿಕವಾಗಿದ್ದಾರೆ.