ಗಜಕ್ (ಗಚಕ್ ಎಂದೂ ಕರೆಯಲ್ಪಡುತ್ತದೆ) ಉತ್ತರ-ಮಧ್ಯ ಭಾರತದಲ್ಲಿ ಹುಟ್ಟಿಕೊಂಡ ಒಂದು ಸುಪರಿಚಿತ ಸಿಹಿತಿನಿಸು ಅಥವಾ ಮಿಠಾಯಿ. ಇದು ಎಳ್ಳು ಅಥವಾ ಕಡಲೆಕಾಯಿ ಮತ್ತು ಬೆಲ್ಲದಿಂದ ತಯಾರಿಸಲ್ಪಡುವ ಒಂದು ಒಣ ಸಿಹಿತಿನಿಸು. ಎಳ್ಳನ್ನು ಕಚ್ಚಾ ಸಕ್ಕರೆಯ ಪಾಕದಲ್ಲಿ ಬೇಯಿಸಿ ತೆಳುವಾದ ಪದರಗಳಲ್ಲಿ ಹೊಂದಿಸಲಾಗುತ್ತದೆ. ಇದನ್ನು ತಿಂಗಳುಗಟ್ಟಲೆ ಸಂಗ್ರಹಿಸಿಡಬಹುದು. == ತಯಾರಿಕೆ == ಗಜಕ್‍ನ್ನು ಎಳ್ಳು ಮತ್ತು ಬೆಲ್ಲದೊಂದಿಗೆ ತಯಾರಿಸಲಾಗುತ್ತದೆ. ಈ ತಯಾರಿಕಾ ವಿಧಾನವು ಬಹಳ ಸಮಯ ತೆಗೆದುಕೊಳ್ಳುತ್ತದೆ. 5–8 ಕಿಲೋಗ್ರಾಂಗಳಷ್ಟು ಗಜಕ್‌ನ್ನು ತಯಾರಿಸಲು ಸುಮಾರು 10–15 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಎಲ್ಲಾ ಎಳ್ಳುಗಳು ಒಡೆದು ಅವುಗಳ ಎಣ್ಣೆಯು ಹಿಟ್ಟಿನಲ್ಲಿ ಬಿಡುಗಡೆಯಾಗುವವರೆಗೆ ಹಿಟ್ಟನ್ನು ಕುಟ್ಟಲಾಗುತ್ತದೆ. == ವೈವಿಧ್ಯಗಳು == ಬೆಲ್ಲ-ಎಳ್ಳಿನ ಗಜಕ್ ತಿಲ್-ರೇವಾಡಿ ಗಜಕ್ ಖಾಸ್ ಗಜಕ್ == ಉಲ್ಲೇಖಗಳು ==