ಗದ್ದಕಟ್ಟು (ಗದ್ದಬಾವು, ಮಂಗನ ಬಾವು) ಮಂಪ್ಸ್ ವೈರಾಣುವಿನಿಂದ ಉಂಟಾಗುವ ಒಂದು ವೈರಾಣು ರೋಗ. ಆರಂಭಿಕ ಚಿಹ್ನೆಗಳು ಮತ್ತು ಲಕ್ಷಣಗಳು ಹಲವುವೇಳೆ ಜ್ವರ, ಸ್ನಾಯು ನೋವು, ತಲೆನೋವು, ಕಡಿಮೆಯಾದ ಹಸಿವೆ, ಮತ್ತು ಸಾಮಾನ್ಯವಾಗಿ ಅಸ್ವಸ್ಥವೆನಿಸುವುದನ್ನು ಒಳಗೊಂಡಿರುತ್ತವೆ. ಇದರ ನಂತರ ಸಾಮಾನ್ಯವಾಗಿ ಕಿವಿಯ ಹತ್ತಿರದ ಒಂದು ಅಥವಾ ಎರಡೂ ಲಾಲಾಗ್ರಂಥಿಗಳು ಊದಿಕೊಳ್ಳುತ್ತದೆ. ಲಕ್ಷಣಗಳು ಸಾಮಾನ್ಯವಾಗಿ ಒಡ್ಡಿಕೆಯ ೧೬ರಿಂದ ೧೮ ದಿನಗಳ ನಂತರ ಕಾಣಿಸಿಕೊಳ್ಳುತ್ತವೆ ಮತ್ತು ೭ ರಿಂದ ೧೦ ದಿನಗಳ ನಂತರ ಕಡಿಮೆಯಾಗುತ್ತವೆ. ಲಕ್ಷಣಗಳು ಹಲವುವೇಳೆ ಮಕ್ಕಳಿಗಿಂತ ವಯಸ್ಕರಲ್ಲಿ ಹೆಚ್ಚು ಗಂಭೀರವಾಗಿರುತ್ತವೆ. ಸುಮಾರು ಮೂರನೇ ಒಂದು ಭಾಗದಷ್ಟು ಜನರು ಸೌಮ್ಯ ಲಕ್ಷಣಗಳನ್ನು ಹೊಂದಿರುತ್ತಾರೆ ಅಥವಾ ಯಾವುದೇ ಲಕ್ಷಣಗಳನ್ನು ಹೊಂದಿರುವುದಿಲ್ಲ. ಜಟಿಲತೆಗಳಲ್ಲಿ ಮಿದುಳ್ಪೊರೆಯುರಿತ, ಮೇದೋಜೀರಕ ಗ್ರಂಥಿಯ ಉರಿಯೂತ, ಹೃದಯದ ಉರಿಯೂತ, ಶಾಶ್ವತ ಕಿವುಡು, ಮತ್ತು ಅಸಾಮಾನ್ಯವಾಗಿ ಬಂಜೆತನವನ್ನು ಉಂಟುಮಾಡುವ ವೃಷಣಗಳ ಉರಿಯೂತ ಸೇರಿರಬಹುದು. ಮಹಿಳೆಯರಲ್ಲಿ ಅಂಡಾಶಯದ ಊತ ಕಾಣಿಸಿಕೊಳ್ಳಬಹುದು, ಆದರೆ ಇದು ಬಂಜೆತನದ ಅಪಾಯವನ್ನು ಹೆಚ್ಚಿಸುವುದಿಲ್ಲ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == . – – ' : ', () . – ", : ", : " –