ಗಮನಶ್ರಮ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೫೩ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ಗಮಕಕ್ರಿಯ ಎಂದು ಹೆಸರಿಸಿದ್ದಾರೆ. == ರಾಗ ಸ್ವರೂಪ ಮತ್ತು ಲಕ್ಷಣ == ಇದು ಒಂಬತ್ತನೆಯ ಬ್ರಹ್ಮ ಚಕ್ರದ ಐದನೆಯ ರಾಗ.ಇದರ ನೆನೆಪಿನ ಹೆಸರು ಬ್ರಹ್ಮ-ಮಾ ನೆನಪಿನ ನುಡಿಕಟ್ಟು:ಸ ರ ಗು ಮಿ ಪ ಧಿ ನು ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ. ಆರೋಹಣ ಸ ರಿ೧ ಗ೩ ಮ೨ ಪ ದ೨ ನಿ೩ ಸ ಅವರೋಹಣ ಸ ನಿ೩ ದ೨ ಪ ಮ೨ ಗ೩ ರಿ೧ ಸ ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ 'ಷಡ್ಜ, ಶುದ್ಧ ರಿಷಭ,ಅಂತರ ಗಾಂಧಾರ,ಪ್ರತಿಮಧ್ಯಮ,ಪಂಚಮ,ಚತುಶೃತಿ ಧೈವತಮತ್ತು ಕಾಕಲಿ ನಿಷಾಧ. == ಜನ್ಯ ರಾಗಗಳು == ಈ ರಾಗಕ್ಕೆ ಕೆಲವು ಜನ್ಯ ರಾಗಗಳಿದ್ದು, ಹಂಸನಂದಿ ಮತ್ತು ಪೂರ್ವಿ ಕಲ್ಯಾಣಿ ಹೆಚ್ಚು ಜನಪ್ರಿಯವಾಗಿದೆ. == ಜನಪ್ರಿಯ ರಚನೆಗಳು == ಕೆಲವು ಜನಪ್ರಿಯ ಕೃತಿಗಳು ಈ ಕೆಳಗಿನಂತಿವೆ. ಮುತ್ತುಸ್ವಾಮಿ ದೀಕ್ಷಿತರುರಚಿಸಿದ ಮೀನಾಕ್ಷಿ ಮೇಮುದಮ್ ಮತ್ತು "ಏಕಾಮ್ರನಾಥ ಭಜೇಹಮ್" ಎರಡು ವ್ಯಾಪಕವಾಗಿ ಬಳಕೆಯಲ್ಲಿರುವ ರಚನೆಗಳು. ಶ್ರೀ ಚಕ್ರಪುರ ವಾಸಿನಿ- ಮುತ್ತಯ್ಯ ಭಾಗವತರ್ ಇದು ನೀಕು ನ್ಯಾಯಮಾ- ಮೈಸೂರು ವಾಸುದೇವಾಚಾರ್ ಉಭಯ ಕಾವೇರಿ - ವೀಣೆ ಶೇಷಣ್ಣ ಥಾಮೇ ಸುಖಮು - ಕೋಟೀಶ್ವರ ಐಯರ್ ಎನ್ನಿ ಮಾರುಲು ನೆ ವಿನ್ನ- ಎಮ್.ಬಾಲಮುರಳಿಕೃಷ್ಣ == ಸಂಬಂಧಿತ ರಾಗಗಳು == ಗ್ರಹಭೇದಮ್ ಸೂತ್ರವನ್ನು ಗಮನಶ್ರಮ ರಾಗಕ್ಕೆ ಅನ್ವಯಿಸಿದಾಗ ಎರಡು ರಾಗಗಳು ದೊರೆಯುತ್ತದೆ.ಅವುಗಳು ಝಂಕಾರವರ್ಧಿನಿ ಮತ್ತು ರತ್ನಾಂಗಿ == ಉಲ್ಲೇಖಗಳು ==