ಗಲಗಲಿ ಒಂದು ಗ್ರಾಮ ಹಾಗೂ ಪುಣ್ಯಕ್ಷೇತ್ರ.ಇದು ಕರ್ನಾಟಕ ರಾಜ್ಯದ ಬಾಗಲಕೋಟ ಜಿಲ್ಲೆಯ ಬೀಳಗಿ ತಾಲ್ಲೂಕಿನಲ್ಲಿದೆ. ಗಲಗಲಿ ಗ್ರಾಮವು ಮುಧೋಳ - ಬೀಳಗಿ ರಾಜ್ಯ ಹೆದ್ದಾರಿಯಲ್ಲಿ ಇದೆ. ಜಿಲ್ಲಾ ಕೇಂದ್ರ ಬಾಗಲಕೋಟದಿಂದ ಸುಮಾರು ೫೦ ಕಿ. ಮಿ. ದೂರ ಇದೆ. == ಚರಿತ್ರೆ == ಗ್ರಾಮವು ಗಾಲವ ಮಹರ್ಷಿಗಳ ತಪೋಭೂಮಿಯಾಗಿತ್ತು. == ದೇವಾಲಯಗಳು == ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಶ್ರೀ ಚಂದ್ರಗಿರಿ ದೇವಸ್ಥಾನ, ಪಾಂಡುರಂಗ - ವಿಠ್ಠಲ ದೇವಸ್ಥಾನ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ. == ಮಸೀದಿಗಳು == ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ. == ನೀರಾವರಿ == ಗ್ರಾಮದ ಪ್ರತಿಶತ ೯೦ ಭಾಗ ಭೂಮಿ ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ. == ಹಬ್ಬಗಳು == ಪ್ರತಿವರ್ಷ ಶ್ರೀ ಚಂದ್ರಗಿರಿ ಜಾತ್ರಾ ಮಹೋತ್ಸ ವ , ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಬಸವ ಜಯಂತಿ,ಗಣೇಶ ಹಬ್ಬಗಳನ್ನು ಆಚರಿಸುತ್ತಾರೆ. == ಶಿಕ್ಷಣ == ಗ್ರಾಮದಲ್ಲಿ ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಇವೆ.ಅದರಂತೆ ಪ್ರೌಡ ಶಾಲೆ, ಪದವಿಪೂರ್ವ ಕಲಾ ಮಹಾವಿದ್ಯಾಲಯ, ಕೈಗಾರಿಕಾ ತರಬೇತಿ ಕೇಂದ್ರಗಳು ಒಳ್ಳೆಯ ಶಿಕ್ಷಣ ನೀಡುತ್ತಿವೆ. == ಸಾಹಿತ್ಯ == ಗ್ರಾಮದಲ್ಲಿ ಪಂಡರಿನಾಥಾಚಾರ್ಯ ಗಲಗಲಿ,ಸತ್ಯಕಾಮರು ಸಾಹಿತಿಗಳಾಗಿದ್ದಾರೆ. == ಆರೋಗ್ಯ == ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. == ಆರಕ್ಷಕ (ಪೋಲಿಸ್) ಠಾಣೆ == ಗ್ರಾಮವು ಉಪ ಪೋಲಿಸ್ ಠಾಣೆ ಹೊಂದಿದೆ. == ವಿದ್ಯುತ್ ಪರಿವರ್ತನಾ ಕೇಂದ್ರ == ೩೩ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರವು ಗ್ರಾಮದ ಹಾಗೂ ಸುತ್ತಲಿನ ಹಳ್ಳಿಗಳಿಗೆ ವಿದ್ಯುತ್ ಒದಗಿಸುತ್ತದೆ. == ಉಲ್ಲೇಖ == ಗಲಗಲಿಯು ಇತ್ತೀಚಿನ ದಿನಗಳಲ್ಲಿ ಇಲ್ಲಿಯ ಗುಣಮಟ್ಟದ ಮತ್ತು ರುಚಿಕರವಾದ ಸಿಹಿ ಪದಾರ್ಥವಾದ ಪೆಡೆಗೆ ಹೆಸರುವಾಸಿ ಆಗಿದೆ ಅದರಲ್ಲಿ ಪ್ರಮುಖವಾಗಿ ಬನಶಂಕರಿ ಪೆಡೆ ತುಂಬಾ ಜನರು ಇಷ್ಟ ಪಡೂ ಪೆಡೆ ಅಗಿದೆ.....