ಗವಾಂಭೋದಿ (ಎಂದರೆ ಹಸುಗಳ ಶಿಕ್ಷಕ )ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಒಂದು ರಾಗ. ಇದು ೭೨ ಮೇಳಕರ್ತ ರಾಗಗಳ ಸರಣಿಯಲ್ಲಿ ೪೩ನೆಯ ಮೇಳಕರ್ತ ರಾಗ. ಇದನ್ನು ಮುತ್ತುಸ್ವಾಮಿ ದೀಕ್ಷಿತರ ಕರ್ನಾಟಕ ಸಂಗೀತದ ಗ್ರಂಥಗಳಲ್ಲಿ ಗೀರ್ವಾಣಿ ಎಂದು ಕರೆಯಲಾಗುತ್ತದೆ. == ರಚನೆ ಮತ್ತು ಲಕ್ಷಣ == ಇದು ಎಂಟನೆಯ ವಸು ಚಕ್ರದ ಒಂದನೆಯ ರಾಗ.ಇದರ ಆರೋಹಣ ಮತ್ತು ಅವರೋಹಣ ಕೆಳಗಿನಂತಿದೆ. ಆರೋಹಣ ಸ ರಿ೧ ಗ೨ ಮ೨ ಪ ಧ೧ ನಿ೧ ಸ ಅವರೋಹಣ: ಸ ನಿ೧ ಧ೧ ಪ ಮ೨ ಗ೨ ರಿ೧ ಸ (ಇದರ ಸ್ವರಶ್ರೇಣಿಯಲ್ಲಿ ಶುದ್ಧ ರಿಷಭ,ಸಾಧಾರಣ ಗಂಧಾರ,ಪ್ರತಿ ಮಧ್ಯಮ,ಶುದ್ಧ ಧೈವತ ಮತ್ತು ಶುದ್ಧ ನಿಶಾಧವನ್ನು ಬಳಸಲಾಗಿದೆ.) ಇದು ಒಂದು ಮೇಳಕರ್ತ ರಾಗವಾಗಿದ್ದು, ವ್ಯಾಖ್ಯಾನದ ಪ್ರಕಾರ ಇದು ಒಂದು ಸಂಪೂರ್ಣ ರಾಗ (ಎಲ್ಲಾ ಏಳು ಸ್ವರಗಳು ಆರೋಹಣ ಮತ್ತು ಅವರೋಹಣ ಸ್ವರಶ್ರೇಣಿಲ್ಲಿದೆ.). ಇದರ ಪ್ರತಿ ಮಧ್ಯಮವು ಏಳನೇಯ ಮೇಳಕರ್ತ ರಾಗವಾದ ಸೇನಾವತಿಗೆ ಸಮಾನವಾಗಿದೆ. == ಜನ್ಯ ರಾಗಗಳು == ಗವಾಂಭೋದಿ ಕೆಲವೇ ಜನ್ಯ ರಾಗಗಳನ್ನು ಹೊಂದಿದೆ. == ರಚನೆಗಳು == ಗವಾಂಭೋದಿ ರಾಗದ ಕೆಲವು ರಚನೆಗಳು: ವೀರ ರಾಘವ - ಕೋಟೇಶ್ವರ ಅಯ್ಯರ್ ವಿನತಿ ಚಕೊನವಯ್ಯ- ಡಾ. ಎಂ. ಬಾಲಮುರಳಿಕೃಷ್ಣ ನಮೋಮಸ್ತಿ ಗೀರ್ವಾಣಿ- ಮುತ್ತುಸ್ವಾಮಿ ದೀಕ್ಷಿತರು . == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು ==