ಗಾಂಠಿಯಾ ಎಣ್ಣೆಯಲ್ಲಿ ಕರಿದ ಒಂದು ಭಾರತೀಯ ಖಾದ್ಯ. ಇದನ್ನು ಕಡಲೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದು ಗುಜರಾತ್‍ನಲ್ಲಿ ಒಂದು ಜನಪ್ರಿಯ ಚಹಾ ಸಮಯದ ಲಘು ಆಹಾರವಾಗಿದೆ. ಇವು ಬಹುತೇಕ ಇತರ ಭಾರತೀಯ ಲಘು ಆಹಾರಗಳಂತೆ ಗರಿಗರಿಯಾಗಿರದೇ ಮೃದುವಾಗಿರುತ್ತವೆ. ಇದರ ಸಿಹಿ ರೂಪವನ್ನು ಮೀಠಾ ಗಾಂಠಿಯಾ ಎಂದು ಕರೆಯಲಾಗುತ್ತದೆ. ಗಾಂಠಿಯಾ ಗುಜರಾತ್‍ನಲ್ಲಿ ಎಷ್ಟು ಜನಪ್ರಿಯವಾಗಿದೆಯೆಂದರೆ, ಗುಜರಾತ್‍ನ ಅತಿ ದೊಡ್ಡ ಪಕ್ಷಿಧಾಮವಾದ ನಳ್ ಸರೋವರ್‌ಗೆ ವಲಸೆ ಬರುವ ಪಕ್ಷಿಗಳು ಬಹಳ ಬೇಗನೇ ಪ್ರವಾಸಿಗರು ನೀಡುವ ಗಾಂಠಿಯಾ ತಿಂಡಿಯನ್ನು ತಿನ್ನಲು ಕಲಿಯುತ್ತವೆ. ಇದು ಪಕ್ಷಿಗಳಿಗೆ ಅಪಾಯಕಾರಿ ಆಗಬಹುದು ಎಂದು ತಜ್ಞರು ಹೇಳುತ್ತಾರೆ. == ಉಲ್ಲೇಖಗಳು ==