ಗಾಜನೂರು ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ೧೨ ಕಿ.ಮೀ. ದೂರದಲ್ಲಿ ತೀರ್ಥಹಳ್ಳಿಯ ಮಾರ್ಗದಲ್ಲಿದೆ. ಇಲ್ಲಿ ತುಂಗಾ ನದಿಗೆ ಅಣೇಕಟ್ಟು ಕಟ್ಟಿಲಾಗದೆ. ಗಾಜನೂರಿನ ಹತ್ತಿರ ಜವಾಹರ್ ನವೋದಯ ವಿದ್ಯಾಲಯ- ವಸತಿ ಶಾಲೆ ಇದೆ. ಗಾಜನೂರು ಚೆನ್ನಾಗಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಅಣೆಕಟ್ಟುನಿಂದ ಹೆಸರುವಾಸಿಯಾಗಿದೆ. ಗಾಜನೂರಿನಿಂದ 1 ಕಿಲೊಮೀಟರ್ ದೂರ 'ಸಕ್ಕರೆ ಬೈಲು' ಇದೆ, ಇದು ಭಾರತ ಸರ್ಕಾರ ನಡೆಸುತ್ತಿರುವ ಆನೆ ತರಬೇತಿ ಶಿಬಿರದ ಕೇಂದ್ರ. ಈ ಹಳ್ಳಿಯು ತುಂಗಾ ನದಿಯ ದಡದಲ್ಲಿದೆ. ಈ ಹಳ್ಳಿಯಿಂದ 'ಮಂಡಗದ್ದೆ' ಪಕ್ಷಿ ಜೀವನ ಅಭಯಾರಣ್ಯವು ೧೫ ಕಿಲೊಮೀಟರ್ ದೂರದಲ್ಲಿದೆ.