ಗಾಣಪತ್ಯ ಸಗುಣ ಬ್ರಹ್ಮನ್ ಆಗಿ ಗಣೇಶನನ್ನು ಪೂಜಿಸುವ ಹಿಂದೂ ಧರ್ಮದ ಒಂದು ಪಂಥ. ಗಣೇಶನ ಪೂಜೆಯನ್ನು ಇತರ ದೇವತೆಗಳ ಪೂಜೆಯ ಜೊತೆಗೆ ಪೂರಕವೆಂದು ಪರಿಗಣಿಸಲಾಗುತ್ತದೆ. ಎಲ್ಲ ಪಂಥಗಳ ಹಿಂದೂಗಳು ಪ್ರಾರ್ಥನೆಗಳು, ಪ್ರಮುಖ ಕಾರ್ಯಗಳು, ಮತ್ತು ಧಾರ್ಮಿಕ ಸಮಾರಂಭಗಳನ್ನು ಗಣೇಶನ ಆವಾಹನೆಯೊಂದಿಗೆ ಪ್ರಾರಂಭಿಸುತ್ತಾರೆ.