ಗಾನಮೂರ್ತಿ ಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ಮೂರನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಗಾನಸಾಮವರಾಳಿ ಎಂದು ಹೆಸರಿಸಿದ್ದಾರೆ. == ರಾಗ ಲಕ್ಷಣ ಮತ್ತು ಸ್ವರೂಪ == ಇದು ಪ್ರಥಮ ಇಂದು ಚಕ್ರದ ತೃತೀಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ. ಆರೋಹಣ ಸ ರಿ೧ ಗ೧ ಮ೦ ಪ ದ೧ ನಿ೩ ಸ' ಅವರೋಹಣ ಸ' ನಿ೩ ದ೧ ಪ ಮ೧ ಗ೧ ರಿ೧ ಸ ಇದು ಒಂದು ಸಂಪೂರ್ಣ ರಾಗವಾಗಿದೆ. == ಜನ್ಯ ರಾಗಗಳು == ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ. ಸಾಮವರಾಳಿ,ನಾದರಂಜನಿ ಇವುಗಳಲ್ಲಿ ಪ್ರಮುಖವಾದುದು. 1 ಗಾನಸಾಮವರಾಳಿ. ರಿ೧ ಮ೧ ಪ ದ೧ ನಿ೩ ಸ ಸ ನಿ೩ ದ೧ ಪ ಮ೧ ಗ೧ ರಿ೧ ಸ 2 ಭಿನ್ನಪಂಚಮ. ಸ ರಿ೧ ಗ೧ ಮ೧ ಪ ದ೧ ನಿ೩ ಸ ಸ ನಿ೩ ದ೧ ಪ ಮ೧ ಗ೧ ರಿ೧ ಸ 3 ನಾದರಂಜನಿ. ಸ ರಿ೧ ಮ೧ ದ೧ ನಿ೩ ಸ ಸ ನಿ೩ ದ೧ ಮ೧ ಗ೧ ರಿ೧ ಸ 4 ಪೂರ್ವವರಾಳಿ. ಸ ರಿ೧ ಮ೧ ಪ ದ೧ ಸ ಸ ನಿ೩ ದ೧ ಪ ಮ೧ ಗ೧ ರಿ೧ ಸ 5 ಸಾಮವರಾಳಿ ಸ ರಿ೧ ಮ೧ ಪ ದ೧ ನಿ೩ ಸ ಸ ನಿ೩ ದ೧ ಪ ಮ೧ ಗ೧ ರಿ೧ ಗ೧ ಸ == ಜನಪ್ರಿಯ ರಚನೆಗಳು == ಗಾನಮೂರ್ತಿ ಶ್ರೀಕೃಷ್ಣ- ತ್ಯಾಗರಾಜರು, ಪಾಹಿ ಜಗದೀಶ್ವರ - ಬಾಲಮುರಳಿ ಕೃಷ್ಣ ಹೆಚ್ಚಾಗಿ ಕಛೇರಿಗಳಲ್ಲಿ ಹಾಡಲ್ಪಡುತ್ತವೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಯು.ಶ್ರೀನಿವಾಸ್ ಗಾನಮೂರ್ತಿ ರಾಗ