ಗುಂಟೂರು ಆಂಧ್ರ ಪ್ರದೇಶದ ಒಂದು ಜಿಲ್ಲೆ. ಮತ್ತು ಆ ಜಿಲ್ಲೆಯ ಮುಖ್ಯಪಟ್ಟಣ. ಉ. ಅ. 16° 18' ಮತ್ತು ಪು.ರೇ. 80° 28' ಮೇಲೆ. ಹೈದರಾಬಾದ್ ನಗರದ ಆಗ್ನೇಯಕ್ಕೆ 400 ಕಿ.ಮೀ. ದೂರದಲ್ಲಿದೆ. ಇದು ದಕ್ಷಿಣ ರೈಲ್ವೆಯ ವಿಜಯವಾಡ-ಗುಂಟಕಲ್ ಮಾರ್ಗದ ಒಂದು ಮುಖ್ಯ ರೈಲು ನಿಲ್ದಾಣ. ಜಂಕ್ಷನ್, ವಿಶಾಖಪಟ್ಟಣ-ಮದ್ರಾಸ್ ರಸ್ತೆಯಲ್ಲಿದೆ. == ಹವಾಮಾನ == ಬೇಸಗೆಯಲ್ಲಿ ಉಷ್ಣತೆಯ ಸರಾಸರಿ 32° ಸೆಂ., ಚಳಿಗಾಲದಲ್ಲಿ 20° ಸೆಂ. == ಶೈಕ್ಷಣಿಕ == ಇಲ್ಲಿ ಆಂಧ್ರ ವಿಶ್ವವಿದ್ಯಾಲಯದ ಮನ್ನಣೆ ಪಡೆದ ಕಾಲೇಜುಗಳಿವೆ. == ವ್ಯವಹಾರ == ಸೆಣಬು, ಎಣ್ಣೆ, ಮತ್ತು ಅಕ್ಕಿ ಗಿರಣಿಗಳು, ಹೊಗೆಸೊಪ್ಪು, ಪರಿಷ್ಕರಣ, ಎಂಜಿನಿಯರಿಂಗ್-ಇವು ಇಲ್ಲಿಯ ಕೈಗಾರಿಕೆಗಳು. ಇತರ ಪಟ್ಟಣಗಳೊಂದಿಗೆ ರೈಲ್ವೆ ಮತ್ತು ರಸ್ತೆ ಸಂಪರ್ಕ ಹೊಂದಿರುವುದರಿಂದ ಇದೊಂದು ಪ್ರಮುಖ ವ್ಯಾಪಾರ ಸ್ಥಳ. == ಇತಿಹಾಸ == 18ನೆಯ ಶತಮಾನದ ಉತ್ತರಾರ್ಧದಲ್ಲಿ ಫ್ರೆಂಚರು ಈ ಪಟ್ಟಣವನ್ನು ಸ್ಥಾಪಿಸಿದರೆಂದು ಕಾಣುತ್ತದೆ. ಗುಂಟೂರು ಸ್ವಲ್ಪ ಕಾಲ ನಿಜಾಮನ ಅಧೀನದಲ್ಲಿತ್ತು. 1788ರಲ್ಲಿ ಇದು ಬ್ರಿಟಿಷರ ಅಧೀನಕ್ಕೆ ಬಂತು. 1866ರಲ್ಲಿ ಇಲ್ಲಿ ಪೌರಸಭೆ ಸ್ಥಾಪಿತವಾಯಿತು. == ಬಾಹ್ಯ ಸಂಪರ್ಕಗಳು == == ಉಲ್ಲೇಖಗಳು ==