ಗುಣದಾಳ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನಲ್ಲಿದೆ. ಗ್ರಾಮವು ಬಬಲೇಶ್ವರ - ಯರಗಟ್ಟಿ ರಾಜ್ಯ ಹೆದ್ದಾರಿ - 55 ಯಲ್ಲಿ ಇದೆ. ಜಿಲ್ಲಾ ಕೇಂದ್ರ ವಿಜಯಪುರ ದಿಂದ ಸುಮಾರು 45 ಕಿ. ಮಿ. ಇದ್ದು ಮಮದಾಪುರ ಹೋಬಳಿ ವ್ಯಾಪ್ತಿಯಲ್ಲಿ ಬರುತ್ತದೆ. == ಚರಿತ್ರೆ == ಗ್ರಾಮವು ಬ್ರಿಟಿಶರ ಕಾಲದಲ್ಲಿ ಕಂದಾಯದ ಸ್ಥಳವಾಗಿತ್ತು.ಇದು ಜತ್ತ ಸರಕಾರದ ಆಡಳಿತದಲ್ಲಿತ್ತು. == ದೇವಾಲಯ - ಮಸೀದಿಗಳು == ಗ್ರಾಮದಲ್ಲಿ ಅಮೋಘ ಸಿದ್ಧೇಶ್ವರ, ಪಾಂಡುರಂಗ, ಮಹಾಲಕ್ಷ್ಮಿ, ದುರ್ಗಾದೇವಿ, ಮಲ್ಲಿಕಾರ್ಜುನ, ಬಸವೇಶ್ವರ, ವೆಂಕಟೇಶ್ವರ, ಕಾಳಿಕಾದೇವಿ ಹಾಗೂ ಹಣಮಂತ ದೇವಾಲಯಗಳಿವೆ. ಯಮನೂರಸಾಬ್ ದರ್ಗಾ ಮತ್ತು ಮಸೀದೆ ಇವೆ. == ಭೌಗೋಳಿಕ ವಿವರ == ಗ್ರಾಮವು ಭೌಗೋಳಿಕವಾಗಿ 16°32'09.0" ಅಕ್ಷಾಂಶ ಮತ್ತು 75°29'47.9" ರೇಖಾಂಶದಲ್ಲಿ ಬರುತ್ತದೆ. == ಹವಾಮಾನ == ಮಳೆಗಾಲ-ಚಳಿಗಾಲ-ಬೇಸಿಗೆಕಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ 43° ವರೆಗೆ(ಮೇನಲ್ಲಿ), ಚಳಿಗಾಲದಲ್ಲಿ ಅತೀ ಕಡಿಮೆ ಅಂದರೆ 8° ವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ. ಬೇಸಿಗೆಕಾಲ - 35°-42° (ಫೆಬ್ರುವರಿ, ಮಾರ್ಚ, ಏಪ್ರೀಲ್ ಮತ್ತು ಮೇ ತಿಂಗಳು) ಚಳಿಗಾಲ - 19°-28° (ಅಕ್ಟೂಬರ್, ನವೆಂಬರ್, ಡಿಶೆಂಬರ್ ಮತ್ತು ಜನೇವರಿ ತಿಂಗಳು) ಮಳೆಗಾಲ - 18°-32° ( ಜೂನ್, ಜೂಲೈ, ಅಗಷ್ಟ್ ಮತ್ತು ಸಪ್ಟೆಂಬರ್ ತಿಂಗಳು) ಮಳೆ - ಪ್ರತಿ ವರ್ಷ ಮಳೆಯು 300 - 600 ಮಿಮಿ ಗಳಷ್ಟು ಸುರಿಯುತ್ತದೆ. ಗಾಳಿ - ಗಾಳಿಯ ವೇಗ 18 ಕಿಮಿ/ಗಂ (ಜೂನ್), 19 ಕಿಮಿ/ಗಂ (ಜೂಲೈ)ಹಾಗೂ 17 ಕಿಮಿ/ಗಂ (ಅಗಸ್ಟ್)ನಲ್ಲಿ ಬೀಸುತ್ತದೆ. == ಜನಸಂಖ್ಯೆ == ಗ್ರಾಮದಲ್ಲಿ ಜನಸಂಖ್ಯೆ(2011) ಸುಮಾರು 2,803 ಇದೆ. ಅದರಲ್ಲಿ 1,470 ಪುರುಷರು ಮತ್ತು 1,333 ಮಹಿಳೆಯರು ಇದ್ದಾರೆ. == ಭಾಷೆ - ಆಹಾರ == ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ ಮತ್ತು ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ. === ಉಡುಪು === ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು (ಪಟಕ) ಧರಿಸುತ್ತಾರೆ. ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. == ಕೃಷಿ - ನೀರಾವರಿ == ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು 95% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ 85% ಭೂಮಿ ಮಳೆಯನ್ನೇ ಅವಲಂಭಿಸಿದೆ ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ (ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆಗಳು ಉಪ ಕಸುಬುಗಳಾಗಿವೆ. === ಏತ ನೀರಾವರಿ === ಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟುಯಿಂದ ಮುಳವಾಡ ಏತ ನೀರಾವರಿ ಕಾಲುವೆ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ. === ಬೆಳೆಗಳು === ಆಹಾರ ಬೆಳೆಗಳು ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ ವಾಣಿಜ್ಯ ಬೆಳೆಗಳು ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ. ತರಕಾರಿ ಬೆಳೆಗಳು ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತ್ತಂಬರಿ ಇತ್ಯಾದಿ. == ಹಬ್ಬಗಳು == ಪ್ರತಿವರ್ಷ ಕಾರ ಹುಣ್ಣಿಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳ ಆಚರಣೆಯಾಗುತ್ತದೆ == ಸಾಕ್ಷರತೆ == ಗ್ರಾಮದ ಸಾಕ್ಷರತೆ (2011)ಯ ಪ್ರಮಾಣ ಸುಮಾರು 65.95 %. ಅದರಲ್ಲಿ 77.43 % ಪುರುಷರು ಹಾಗೂ 53.52 % ಮಹಿಳೆಯರು ಸಾಕ್ಷರತೆ ಹೊಂದಿದ್ದಾರೆ. == ರಾಜಕೀಯ == ಗ್ರಾಮವು ವಿಜಯಪುರ ಲೋಕಸಭಾ ಕ್ಷೇತ್ರ ಮತ್ತು ಬಬಲೇಶ್ವರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ. == ಸಾರಿಗೆ == ಗ್ರಾಮವು ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು 40 ಕಿ.ಮೀ. ದೂರವಿದ್ದು, ರಾಜ್ಯ ಹೆದ್ದಾರಿ 55 ಇಲ್ಲಿ ಹಾದುಹೋಗುತ್ತದೆ. ಗ್ರಾಮದ ರಸ್ತೆಯು ಕಂಬಾಗಿ - ಬಬಲೇಶ್ವರ ಮಾರ್ಗವಾಗಿ ವಿಜಯಪುರ ನಗರವನ್ನು ತಲಪುತ್ತದೆ. == ಉಲ್ಲೇಖಗಳು ==