ಗುನಾ ಮಧ್ಯ ಪ್ರದೇಶರಾಜ್ಯದ ಗುನಾ ಜಿಲ್ಲೆಯ ಮುಖ್ಯ ಪಟ್ಟಣ.ಗುನಾ ಪಟ್ಟಣ (ಉ.ಅ. 24° 39' ಪು.ರೇ. 77° 19') ಆಗ್ರಾ-ಮುಂಬಯಿ ಹೆದ್ದಾರಿಯಲ್ಲಿದೆ. ಮಧ್ಯ ರೈಲ್ವೆಯ ಬೀನಾ-ಬಾರನ್ ಉಪಶಾಖೆಯಲ್ಲಿ ಇದು ಒಂದು ನಿಲ್ದಾಣ. ಮೊದಲು ಇದೊಂದು ಚಿಕ್ಕ ಗ್ರಾಮವಾಗಿತ್ತು. 1844ರಲ್ಲಿ ಗ್ವಾಲಿಯರಿನ ಅಶ್ವಾರೋಹಿ ದಳದವರು ಇಲ್ಲಿ ಬೀಡುಬಿಟ್ಟರು. ಅಂದಿನಿಂದ ಗುನಾದ ಮಹತ್ತ್ವ ಹೆಚ್ಚುತ್ತಿದೆ. 1897ರಲ್ಲಿ ರೈಲುಮಾರ್ಗದ ವಿಸ್ತರಣ ಕಾರ್ಯ ನಡೆದದ್ದರಿಂದ ಇದು ವ್ಯಾಪಾರ ಕೇಂದ್ರವಾಯಿತು. == ಬಾಹ್ಯ ಸಂಪರ್ಕಗಳು == ://../ ://./ 2014-05-17 ವೇಬ್ಯಾಕ್ ಮೆಷಿನ್ ನಲ್ಲಿ. ://..