ಗುಪ್ತಮಂಚಣ್ಣ ೧೨ನೇ ಶತಮಾನದ ಪೂರ್ವಾರ್ಧದಲ್ಲಿದ್ದ ಅಪ್ರಚಲಿತ ವಚನಕಾರ. ಬಸವಣ್ಣನ ಆಜ್ಞಾನುವರ್ತಿಯಾಗಿದ್ದರೂ ಎಲ್ಲಿಯೂ ತನ್ನನ್ನು ಬಹಿರಂಗವಾಗಿ ಗುರ್ತಿಸಿಕೊಂಡಿಲ್ಲ. ಈತನ ವೈಯಕ್ತಿಕ ವಿವರಗಳು ಅಷ್ಟಾಗಿ ಲಭ್ಯವಿಲ್ಲವಾದರೂ ನೇರ, ದಿಟ್ಟ ವಚನಕಾರನೆಂದು ಈತನ ವಚನಗಳಿಂದ ತಿಳಿಯಬಹುದು. ಅಂದಿನ ಸಮಾಜದ ಆಗುಹೋಗುಗಳ ಜ್ವಲಂತ ನಿದರ್ಶನ ಈತನ ವಚನಗಳಲ್ಲಿ ಕಾಣಸಿಗುತ್ತವೆ. ಈತನ ವಚನಗಳ ಅಂಕಿತ ನಾರಾಯಣಪ್ರಿಯ ರಾಮನಾಥ.