ಮಂಗಳೂರು ಮೂಲದ ಗುರುಕಿರಣ್ ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕರುಗಳಲ್ಲೊಬ್ಬರು. ಇವರ ಸಂಗೀತ ನಿರ್ದೇಶನದಲ್ಲಿ ತೆರೆಕಂಡ ಆಪ್ತಮಿತ್ರ(೨೦೦೪) ಮತ್ತು ಜೋಗಿ(೨೦೦೫) ಚಿತ್ರಗಳಲ್ಲಿನ ಸಂಗೀತ ಅತ್ಯಂತ ಜನಪ್ರಿಯತೆಯನ್ನು ಗಳಿಸಿವೆ. ಹಲವಾರು ಚಲನಚಿತ್ರಗಳಲ್ಲಿ ಹಾಡಿರುವ ಗುರುಕಿರಣ್ ಅವರು ಹಿನ್ನೆಲೆ ಗಾಯಕರೂ ಕೂಡ. ಉಪೇಂದ್ರ, ಕುಟುಂಬ, ನಿಷ್ಕರ್ಷ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಓಂಕಾರ, ಆಟೋಶಂಕರ್ ಇತ್ಯಾದಿ ಚಿತ್ರಗಳಲ್ಲಿ ಕೆಲವು ಗೀತೆಗಳನ್ನು ರಚಿಸಿದ್ದಾರೆ. ಇವರ ಸಂಗೀತ ನಿರ್ದೇಶನದ ಮೊದಲ ಕನ್ನಡ ಚಿತ್ರ ಏ. == ಸಂಗೀತ ನಿರ್ದೇಶನದ ಚಿತ್ರಗಳು ==