ಗುರುಪುರವು ಫಾಲ್ಗುಣಿ ಅಥವಾ ಗುರುಪುರ ನದಿಯಲ್ಲಿರುವ ಒಂದು ಸಣ್ಣ ಪಟ್ಟಣ . ಇದು ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಪಶ್ಚಿಮಕ್ಕೆ ಸುಮಾರು ೩೪೫ ಕಿಲೋಮೀಟರ್ (೨೧೪ ಮೈಲು) ಮತ್ತು ಕರ್ನಾಟಕದ ಮುಖ್ಯ ಬಂದರು ನಗರವಾದ ಮಂಗಳೂರಿನಿಂದ ಪೂರ್ವ ದಿಕ್ಕಿಗೆ ಸುಮಾರು ೧೩ ಕಿಲೋಮೀಟರ್ (೮ ಮೈಲು) ದೂರದಲ್ಲಿದೆ .ಅಲ್ಲಿನ ನಿವಾಸಿಗಳು ವಿವಿಧ ಸಾಂಸ್ಕೃತಿಕ ಹಿನ್ನೆಲೆಯುಳ್ಳವರು . ಅದರಲ್ಲಿ ಬಿಲ್ಲವ , ಬಂಟ್ಸ್ , ಗೌಡ , ಮತ್ತು ಸರಸತ್ವ ಬ್ರಾಹ್ಮಣರು ಸೇರಿದ್ದಾರೆ . ಸಾಮಾನ್ಯ ಸಂವಹನಕ್ಕಾಗಿ ತುಳು ಪ್ರಾಥಮಿಕ ಭಾಷೆಯಾಗಿದೆ . ಆದರೆ ಕೊಂಕಣಿ , ಬ್ಯಾರಿ ಮತ್ತು ಕನ್ನಡ ಭಾಷೆ ಗಳಲ್ಲೂ ಜನರು ಮಾತನಾಡುತ್ತಾರೆ . == ಪರಿಚಯ == ಗುರುಪುರ ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನಲ್ಲಿರುವ ಒಂದು ಸಣ್ಣ ಗ್ರಾಮ / ಕುಗ್ರಾಮ . ಇದು ಗುರುಪುರ ಪಂಚಾಯತ್ ಅಡಿಯಲ್ಲಿ ಬರುತ್ತದೆ. ಇದು ಮೈಸೂರು ವಿಭಾಗಕ್ಕೆ ಸೇರಿದೆ ಹಾಗೂ ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರಿನಿಂದ ಉತ್ತರಕ್ಕೆ ೪೧ ಕಿ.ಮೀ ದೂರದಲ್ಲಿದೆ. ತರೀಕೆರೆಯಿಂದ ೧೮ ಕಿ.ಮೀ. ಮತ್ತು ರಾಜ್ಯದ ರಾಜಧಾನಿ ಬೆಂಗಳೂರಿನಿಂದ ೨೫೨ ಕಿ.ಮೀ. ದೂರದಲ್ಲಿದೆ . == ಇತಿಹಾಸ == ಸ್ಥಳೀಯ ದೇವಾಲಯಗಳ ದಾಖಲೆಗಳ ಪ್ರಕಾರ , ಗುರುಪುರ ಪಟ್ಟಣವನ್ನು ಹಿಂದೆ ಗುಲಿಪುರ ಎಂದು ಕರೆಯುತ್ತಿದ್ದರು . ಫಾಲ್ಗುಣಿ ನದಿಯ ದಡದಲ್ಲಿ ನೆಲೆಗೊಂಡಿರುವ ಗುಲಿಪುರ ವಾಣಿಜ್ಯ ಪಟ್ಟಣವಾಗಿದ್ದು , ನದಿಯ ಇತರ ಭಾಗಗಳಿಗೆ ಅದರ ಸಂಪರ್ಕ ಹೊಂದಿದೆ . ಬಂಡಸಾಲೆ ಎಂಬುದು ಅಲ್ಲಿನ ಒಂದು ಸ್ಥಳ , ಅಲ್ಲಿನ ಸಿಗುವ ಸರುಕುಗಳನ್ನು ಸಂಗ್ರಹಿಸಿ ಅನೇಕ ಸ್ಥಳಗಳಿಗೆ ವಿತರಿಸಲಾಗುತ್ತದೆ . ಕುಡಿಯುವ ನೀರಿನ ಸರಬರಾಜು ಗಾಗಿ ನಿರ್ಮಿಸಲಾದ ಅಣೆಕಟ್ಟಿನಂತಹ ರಚನೆಯುಳ್ಳ 'ಬಾಂಗ್ಲಾ ಗುಡ್ಡೆ' ಯನ್ನು ಗುರುಪುರದಲ್ಲಿ ಟಿಪ್ಪು ಸುಲ್ತಾನ್ ರವರು ನಿರ್ಮಿಸಿದ್ದಾರೆ. == ಹತ್ತಿರದ ಸ್ಥಳಗಳು == ಗುರುಪುರವು ಮಂಗಳೂರು ನಗರದಿಂದ - ೧೨ ಕಿ.ಮಿ(೭.೫ ಮೈಲು) . ; ಕೈಕಂಬದಿಂದ - ೦೫ ಕಿ.ಮೀ. (೩.೧ ಮೈಲು) .; ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , ಕರ್ನಾಟಕದಿಂದ - ೨೮ ಕಿ.ಮೀ(೧೭ ಮೈಲು) .; ಸುರತ್ಕಲ್ ನಿಂದ‌ - ೨೯ ಕಿ.ಮೀ(೧೮ ಮೈಲು) .; ಫಾಲ್ಗುಣಿ ನದಿತಿಂದ - ೦೦ ಕಿ.ಮೀ(೦ ಮೈಲು); ಉಡುಪಿಯಿಂದ - ೬೬ ಕಿ.ಮೀ(೪೧ ಮೈಲು) . ದೂರದಲ್ಲಿದೆ . == ಗುರುಪುರ ತಲುಪಲು ದಾರಿ == === ರಸ್ತೆ ಮೂಲಕ === ತರೀಕೆರೆ ಗುರುಪುರಕ್ಕೆ ಹತ್ತಿರದ ಪಟ್ಟಣ. ತರೀಕೆರೆ ಗುರುಪುರದಿಂದ ೨೩ ಕಿ.ಮೀ ದೂರದಲ್ಲಿದೆ. ತರೀಕೆರೆದಿಂದ ಗುರುಪುರದವರೆಗೆ ರಸ್ತೆ ಸಂಪರ್ಕವಿದೆ. === ರೈಲು ದಾರಿ === ಗುರುಪುರ ಬಳಿ ೧೦ ಕಿ.ಮೀ.ಗಿಂತ ಕಡಿಮೆ ದೂರದಲ್ಲಿ ಯಾವುದೇ ರೈಲು ನಿಲ್ದಾಣವಿಲ್ಲ. ಪಟ್ಟಣದ ತರೀಕೆರೆ ಹತ್ತಿರದಲ್ಲಿ ರೈಲ್ವೆ ನಿಲ್ದಾಣಗಳಿವೆ . ಅಲ್ಲಿಂದ ಗುರುಪುರಕ್ಕೆ ತಲುಪಬಹುದು. == ಧಾರ್ಮಿಕ ತಾಣಗಳು == ಗುರುಪುರವು ಧಾರ್ಮಿಕ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ ಮತ್ತು ಈ ಪಟ್ಟಣದ ನಂತರ ಫಾಲ್ಗುಣಿ ನದಿಯನ್ನು ಗುರುಪುರ ಎಂದು ಹೆಸರಿಸಲಾಗಿದೆ . ಇದು ವಾಮಂಜೂರು ಮತ್ತು ಕಾಳಿಕಾಂಬ ಸ್ಥಳಕ್ಕೂ ಹತ್ತಿರದಲ್ಲಿದೆ . ದಕ್ಷಿಣ ಕನ್ನಡ ಜಿಲ್ಲೆಯ ತ್ವರಿತ ನಗರೀಕರಣದೊಂದಿಗೆ ಈ ಗ್ರಾಮವು ಒಂದು ಸಣ್ಣ ಪಟ್ಟಣವಾಗಿ ಮಾರ್ಪಟ್ಟಿದೆ. ಹಿಂದೂ ದೇವತೆಗಳಾದ ವರದ್ರಾಜ , ವೆಂಕಟರಮಣ ಮತ್ತು ಶ್ರೀ ಸತ್ಯದೇವತೆ ಧರ್ಮದೇವತೆ ಯ ದೇವಾಲಯಗಳು ಇಲ್ಲಿ ಕಂಡುಬರುತ್ತವೆ. ಹಬ್ಬಗಳು ವರ್ಷದ ಬಹುಪಾಲು ಇಲ್ಲಿ ನಡೆಯುತ್ತವೆ, ಆದರೆ ಮುಖ್ಯ ಹಬ್ಬವು ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯುತ್ತದೆ . ಭಾರತೀಯ ಕ್ಯಾಲೆಂಡರ್ ತಿಂಗಳಲ್ಲಿ ಗುರುಪುರ ತೆರು , ಓಕುಲ್, ಒಡು ತೆರು ಎಂದು ಹೆಸರಿಸಲಾಗುತ್ತದೆ . ಶ್ರೀ ಸತ್ಯದೇವತಾ ಧರ್ಮದೇವತಾ ದೇವಸ್ಥಾನದ ಸ್ವಲ್ಪ ದೂರದಲ್ಲಿ ದೊಡ್ಡ ಮಸೀದಿ ಇದೆ . == ಉಲ್ಲೇಖಗಳು ==