ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಒಂದು ಹಳ್ಳಿ . ಈ ಊರು ಕೃಷ್ಣ ನದಿಯ ದಂಡೆಯ ಮೇಲಿದೆ, ಅಲ್ಲಮಪ್ರಭು ಅವರ ಒಂದು ಗುಹಾಂತರ ಗುಡಿಯಿದೆ ಇಲ್ಲಿ. ದೊಡ್ಡ ಕಲ್ಲಿನ ಗವಿ ಇದೆ. 'ಗುಹೆಕಲ್ಲು' ಎಂಬ ಪದ ಕಾಲ ಸರಿದಂತೆ 'ಗೂಗಲ್ಲು' ಆಗಿರಬಹುದೆಂಬುದು ಒಂದು ಅನಿಸಿಕೆ. ಹೊಳೆಯ ನೀರು ಕಲ್ಲುಗಳಿಗೆ ಅಪ್ಪಳಿಸಿದಾಗ ಸಂಗೀತದ ಸದ್ದು ಹೊಮ್ಮುತ್ತದೆ. ರಾಯಚೂರಿನಿಂದ ೫೬ ಕಿಮೀ ದೂರದಲ್ಲಿದೆ. ತಾಲೂಕು ಕೇಂದ್ರ ದಿಂದ ೨೫ ಕಿ.ಮೀ . ಇಲ್ಲಿ ಅಲ್ಲಮಪ್ರಭು ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ.