ಗೂನು (ಗೂನುಬೆನ್ನು, ಕೂನು) ಬೆನ್ನೆಲುಬಿನ ಅಪಸಾಮಾನ್ಯ, ವಿಪರೀತ ಪೀನವಾದ ಬಾಗಿರುವಿಕೆ ಮತ್ತು ಇದು ಎದೆಗೂಡು ಹಾಗೂ ತ್ರಿಕಾಸ್ಥಿ ಪ್ರದೇಶಗಳಲ್ಲಿ ಉಂಟಾಗುತ್ತದೆ. ಇದು ಕ್ಷೀಣಗೊಳಿಸುವ ಮೃದ್ವಸ್ಥಿ ತಟ್ಟೆ ರೋಗ; ಬೆಳವಣಿಗೆಯ ಅಸಹಜತೆಗಳು, ಅತ್ಯಂತ ಸಾಮಾನ್ಯವಾಗಿ ಶೋಯರ್ಮನ್‌ನ ರೋಗ; ಕಶೇರು ಖಂಡದ ಸಂಕುಚಿತ ಮುರಿತವಿರುವ ಅಸ್ಥಿರಂಧ್ರತೆ; ಬಹು ಅಸ್ಥಿಮಜ್ಜೆ ದುರ್ಮಾಂಸ; ಅಥವಾ ಗಾಯದಿಂದ ಉಂಟಾಗಬಹುದು. ಸಾಮಾನ್ಯ ಎದೆಗೂಡು ಪ್ರದೇಶದ ಬೆನ್ನೆಲುಬು ೧ ರಿಂದ ೧೨ ನೇ ಕಶೇರುಖಂಡಕ್ಕೆ ವಿಸ್ತರಿಸುತ್ತದೆ ಮತ್ತು 20° ರಿಂದ 45° ವರೆಗಿನ ವ್ಯಾಪ್ತಿಯ ಸ್ವಲ್ಪ ಕೋನವನ್ನು ಹೊಂದಿರಬೇಕು. ಮೇಲ್ಪ್ರದೇಶದ ಬೆನ್ನೆಲುಬಿನ ವರ್ತುಲತೆಯು ೪೫ ಡಿಗ್ರೀಯನ್ನು ಮೀರಿ ಹೆಚ್ಚಿದರೆ ಅದನ್ನು ಗೂನು ಎಂದು ಕರೆಯಲಾಗುತ್ತದೆ. ಹೆಚ್ಚಿನ ಪ್ರಮಾಣದ ಗೂನು ತೀವ್ರ ನೋವು ಹಾಗೂ ಅಸೌಖ್ಯ, ಉಸಿರಾಟ ಹಾಗೂ ಜೀರ್ಣದ ತೊಂದರೆಗಳು, ಹೃದಯ ಹಾಗೂ ರಕ್ತನಾಳಗಳ ಕ್ರಮರಾಹಿತ್ಯತೆ, ನರಶಾಸ್ತ್ರೀಯ ದುರ್ಬಲತೆ, ಮತ್ತು ಹೆಚ್ಚು ತೀವ್ರ ಪ್ರಕರಣಗಳಲ್ಲಿ, ಗಣನೀಯವಾಗಿ ಕಡಿಮೆಯಾದ ಜೀವಿತಾವಧಿಯನ್ನು ಉಂಟುಮಾಡಬಹುದು. == ಉಲ್ಲೇಖಗಳು ==