ನೋಡಿ:ಬ್ರಹ್ಮಾಂಡ=ಗೆಲಾಕ್ಸಿಗಳು ರಾತ್ರಿಯಾಕಾಶದಲ್ಲಿ ನಕ್ಷತ್ರಗಳ ಜೊತೆಗೆ ಹಲವು ಮುಸುಕು ಮೋಡಗಳಂತ ಮಚ್ಚೆಗಳನ್ನು ದೂರದರ್ಶಕಗಳ ಮುಲಕ ನೋಡಬಹುದು.ಇವನ್ನು ನೀಹಾರಿಕೆಗಳು ಎನ್ನುತ್ತಾರೆ.ಈ ನೀಹಾರಿಕೆಗಳು ನಮ್ಮ ಆಕಾಶಗಂಗೆಯಂತೆಯೇ ಗೆಲಾಕ್ಸಿಗಳು ಎಂಬುದನ್ನು ೧೯೨೦ರ ದಶಕದಲ್ಲಿ ವ್ಯಾಪಕ ವೀಕ್ಷಣೆಗಳನ್ನು ನಡೆಸಿದ ಎಡ್ವಿನ್ ಹಬಲ್ ಎಂಬಾತ ತೋರಿಸಿದ. ಆಂಡ್ರೊಮಿಡಾ ನಕ್ಷತ್ರಪುಂಜದಲ್ಲಿ ಅಸ್ಪ‍‍‍ಷ್ಟವಾದ ಸುರುಳಿಯಾಕಾರದ ಕಾಯವನ್ನು ಆತ ೧೯೨೪ರಲ್ಲಿ ಗಮನಿಸಿದ. ಅದು ನಮ್ಮ ಗೆಲಕ್ಸಿಯ ವ್ಯಾಸಕ್ಕಿಂತ ೨೦ಪಟ್ಟೂ ದೂರದಲ್ಲಿ ಅಂದರೆ ೨ ಮಿಲಿಯನ್ ಜ್ಯೋತಿರ್ವರ್ಷಗಳ‍‍‍‍‍‌‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಷ್ಟು ದೂರದಲ್ಲಿದೆ ಎಂಬುದನ್ನು ಇವನು ತೋರಿಸಿದ. ಹೀಗೆಯೇ ಅನೇಕ ಗೆಲಕ್ಸಿಗಳನ್ನು ವೀಕ್ಷಿಸಿ ಅವುಗಳನ್ನು ಸುರುಳಿಯಾಕಾರದವು ಮತ್ತು ಅಂಡಾಕಾರದವು ಎಂದು ಹಬಲ್ ವರ್ಗೀಕರಿಸಿದ. ಇವಲ್ಲದೆ ಅನಿಯತ ಆಕಾರದ ಗೆಲಕ್ಸಿಗಳೂ ಇವೆ. ಈಗ ಲಭ್ಯವಿರುವ ಬೃಹತ್ ದೂರದರ್ಶಕಗಳ ಮುಲಕ ಸುಮಾರು ಹತ್ತರಘಾತ ಹನ್ನೊಂದು ಗೆಲಕ್ಸಿಗಳನ್ನು ವೀಕ್ಷಿಸಬಹುದು.ಗೆಲಕ್ಸಿಗಳ ರಾಶಿಗಳು ಅಗಾಧ. ಕೆಲವು ಕುಬ್ಜ ಗೆಲಕ್ಸಿಗಳ ರಾಶಿ ಕೆಲವೇ ಮಿಲಿಯನ್ ಸೌರರಾಶಿಗಳಷ್ಟಿದೆ. ಎಲ್ಲಾ ಗೆಲಕ್ಸಿಗಳು ನಿರಂತರ ಚಲನೆಯಲ್ಲಿವೆ.ಅವು ನಮ್ಮ ಗೆಲಕ್ಸಿಯಿಂದ ಬಹಳ ದೂರದಲ್ಲಿರುದರಿಂದ ಅವುಗಳ ಚಲನೆಯನ್ನು ಸುಲಭವಾಗಿ ಗುರುತಿಸಲು ಆಗದು. ಅವುಗಳ ಚಲನೆಯನ್ನು ಅಧ್ಯಯನ ಮಾಡಲು ಡಾಪ್ಲರ್ ಪರಿಣಾಮವನ್ನು ಉಪಯೋಗಿಸುತ್ತಾರೆ.ಗೆಲಕ್ಸಿಗಳ ಕೆಂಪುಪಲ್ಲಟ ಅಳತೆಯು ಗೆಲಕ್ಸಿಗಳ ವೇಗಗಳ ಬಗ್ಗೆಮಾಹಿತಿ ಒದಗಿಸುತ್ತದೆ. ಆಧಾರ??