ಗೊರವಿ ಭಾರತದಲ್ಲಿ ಮುಖ್ಯವಾಗಿ ಉತ್ತರ ಭಾರತದಲ್ಲಿ ಬೆಳೆಯುವ ಒಂದು ಜಾತಿಯ ಮರ. == ಸಸ್ಯಶಾಸ್ತ್ರೀಯ ವರ್ಗೀಕರಣ == ಇದು ರೂಬಿಯೇಸೀ ಕುಟುಂಬಕ್ಕೆ ಸೇರಿದ್ದು,ಇಕ್ಸೋರ ಅರ್ಬೋರಿಯ (ಇಕ್ಸೋರ ಪಾವೆಟ್ಟಾ?)ವೈಜ್ಞಾನಿಕ ನಾಮ.ಆಂಗ್ಲ ಭಾಷೆಯಲ್ಲಿ ಟಾರ್ಚ್ ಟ್ರೀ ಎಂದು ಕರೆಯುತ್ತಾರೆ.ಬಂಗಾಳಿಯಲ್ಲಿ ಗಂಧಾಲ್ ರಂಗನ್ ಎಂಬ ಹೆಸರಿದೆ. == ಲಕ್ಷಣಗಳು == ಸಣ್ಣ,ತುಂಬಾ ರೆಂಬೆಗಳಿರುವ ಸದಾ ಹಸಿರಿನ ಚಿಕ್ಕ ಗಾತ್ರದ ಮರ.ಎಲೆಗಳು ೭ ರಿಂದ ೧೫ ಸೆಂಟಿಮೀಟರ್ ಉದ್ದವಿದೆ.ಬಿಳಿ ಬಣ್ಣದ ಗೊಂಚಲು ಹೂವು. == ಔಷಧೀಯ ಗುಣಗಳು == ಹೂ,ಹಣ್ಣು,ತೊಗಟೆ ಮತ್ತು ಬೇರುಗಳಲ್ಲಿ ಔಷಧೀಯ ಗುಣಗುಳುಂಟು.ತೊಗಟೆಯ ಕಷಾಯವನ್ನು ರಕ್ತಹೀನತೆ ಕಾಯಿಲೆಗೆ ಔಷಧವಾಗಿ ಬಳಸುತ್ತಾರೆ. == ಉಪಯೋಗಗಳು == ಇದನ್ನು ಆಯುರ್ವೇದ ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ.ಚೌಬೀನೆಯಾಗಿಯೂ,ಉದ್ಯಾನವನಗಳಲ್ಲಿ ಅಲಂಕಾರಿಕ ಸಸ್ಯವಾಗಿಯೂ ಬಳಸುತ್ತಾರೆ. == ಉಲ್ಲೇಖಗಳು ==