ಗೋಳಿ ಬಜೆ (ಮೂಲ ತುಳು) ಮೈದಾ ಹಾಗೂ ಮೊಸರಿನಿಂದ ಮಾಡಿದಂತಹ ಒಂದು ಕರಿದ ತಿಂಡಿ. ಇದನ್ನು ಮಂಗಳೂರು ಬಜ್ಜಿ ಎಂದೂ ಕರೆಯುತ್ತಾರೆ. ಇದು ಕರ್ನಾಟಕದ ಕರಾವಳಿ ಭಾಗದ ಜನಪ್ರಿಯ ಸಂಜೆ ತಿಂಡಿ. == ಬೇಕಾಗುವ ಸಾಮಾಗ್ರಿಗಳು == ಮೊಸರು- ಅರ್ಧ ಕಪ್ ಹಸಿಮೆಣಸಿನಕಾಯಿ- 1 (ಕಟ್ ಮಾಡಿದ್ದು) ಶುಂಠಿ- 1 ಇಂಚು (ಕಟ್ ಮಾಡಿಕೊಳ್ಳಿ) ಕರಿಬೇವಿನ ಎಲೆ- ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಚಮಚ ಸಣ್ಣಗೆ ಕತ್ತರಿಸಿದ ತೆಂಗಿನಕಾಯಿ ಚೂರು- 1 ಚಮಚ ಸಣ್ಣಗೆ ಕಟ್ ಮಾಡಿದ ಈರುಳ್ಳಿ- ಅರ್ಧ (ನಿಮ್ಮ ಆಯ್ಕೆಗೆ ಬಿಟ್ಟಿದ್ದು) ಉಪ್ಪು- ರುಚಿಗೆ ತಕ್ಕಷ್ಟು ಅಡುಗೆ ಸೋಡಾ – ಅರ್ಧ ಚಮಚ ಮೈದಾಹಿಟ್ಟು- 1 ಕಪ್ ಅಕ್ಕಿ ಹಿಟ್ಟು- 1 ಚಮಚ ಜೀರಿಗೆ – 1/2 ಚಮಚ == ಮಾಡುವ ವಿಧಾನ == ಒಂದು ಕಪ್‍ನಲ್ಲಿ ಮೊಸರು, ಸಣ್ಣಗೆ ಕಟ್ ಮಾಡಿಕೊಂಡ ಹಸಿಮೆಣಸಿನಕಾಯಿ, ಶುಂಠಿ, ಕರಿಬೇವಿನ ಎಲೆ, ತೆಂಗಿನಕಾಯಿ ಚೂರು, ಈರುಳ್ಳಿ, ಜೀರಿಗೆ, ಉಪ್ಪು, ಅಡುಗೆ ಸೋಡಾ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ನಂತ್ರ ಅದರ ಮೇಲೆ 1 ಕಪ್ ಮೈದಾ ಹಿಟ್ಟು ಹಾಗೂ ಅಕ್ಕಿ ಹಿಟ್ಟು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ದೋಸೆಹಿಟ್ಟಿಗಿಂತ ಸ್ವಲ್ಪ ಗಟ್ಟಿಯಿರಬೇಕು. (ಅವಶ್ಯಕತೆ ಇದ್ದಲ್ಲಿ ಸ್ವಲ್ಪ ಮೊಸರು ಸೇರಿಸಿಕೊಳ್ಳಿ). ಹಿಟ್ಟು ಹದವಾದ ಬಳಿಕ 3 ಗಂಟೆ ನೆನೆಯಲು ಬಿಡಿ. 3 ಗಂಟೆಯ ಬಳಿಕ ಮತ್ತೊಮ್ಮೆ ಮಿಕ್ಸ್ ಮಾಡಬೇಕು. ಸ್ಟೌವ್ ಮೇಲೆ ಒಂದು ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ. ಎಣ್ಣೆ ಬಿಸಿಯಾದ ಬಳಿಕ ಸ್ವಲ್ಪ ಸ್ವಲ್ಪವೇ ಹಿಟ್ಟು ತೆಗೆದುಕೊಂಡು ಉಂಡೆಯಂತೆ ಎಣ್ಣೆಗೆ ಬಿಡಿ. ಉಂಡೆಗಳು ಕಂದು ಬಣ್ಣ ಬರುವವರೆಗೆ ಕರಿದು, ಎಣ್ಣೆಯಿಂದ ತೆಗೆದು ಒಂದು ಪ್ಲೇಟ್ ಗೆ ಹಾಕಿ. ತೆಂಗಿನಕಾಯಿ ಚಟ್ನಿ ಜೊತೆ ಬಿಸಿಬಿಸಿ ಗೋಳಿಬಜೆ ಸವಿಯಿರಿ. == ಬಡಿಸುವ ವಿಧಾನ == ಗೋಳಿ ಬಜೆಯನ್ನು ಹೆಚ್ಚಾಗಿ ಕಾಯಿ ಚಟ್ನಿಯೊಂದಿಗೆ ಅಥವಾ ಕೆಚಪ್‍ನೊಂದಿಗೆ ನೀಡಲಾಗುವುದು. == ಉಲ್ಲೇಖಗಳು ==