ಗೌಂಡರ್ ಎಂಬುದು ಭಾರತದ ತಮಿಳುನಾಡಿನ ವಿವಿಧ ಸಮುದಾಯಗಳಿಂದ ಬಳಸಲಾಗುವ ಶೀರ್ಷಿಕೆಯಾಗಿದೆ. ಇದು ಕೊಂಗು ವೆಲ್ಲಲರ್, ಕುರುಂಬ, ಒಕ್ಕಲಿಗ, ವನ್ನಿಯಾರ್, ವೆಟ್ಟುವರ್ಸ್ ಮತ್ತು ಉರಾಲಿಗಳಂತಹ ಸಮುದಾಯಗಳನ್ನು ಉಲ್ಲೇಖಿಸಬಹುದು. ತಮಿಳುನಾಡು ರಾಜ್ಯದ ಕೊಂಗು ನಾಡಿನ ಪ್ರದೇಶದ ಕೊಂಗು ವೆಳ್ಳಲಾರ್ ಸಮುದಾಯ ಜನರು ಈ ಹೆಸರುವಾಚಿಕೆ ಬಳುಸತ್ತಿದ್ದಾರೆ. ತಮಿಳುನಾಡಿನಲ್ಲಿ ವನ್ನಿಯಾರ್', ಉತ್ತರ ಪ್ರದೇಶದಲ್ಲಿ, ತಮಿಳುನಾಡಿನ ವೆಲ್ಲೂರ್, ತಿರುಪತ್ತೂರು, ರಾಣಿ ಪೇಟ್, ವಿಲ್ಲುಪುರಮ್,ಕಲ್ಲಕುರ್ಚಿ, ಸೇಲಂ, ಮತ್ತು ಧರ್ಮಪುರಿ ಜಿಲ್ಲೆಗಳ ನಾಮಕಲ್, ಮತ್ತು ಪಾಶ್ಚಾತ್ಯ ಜಿಲ್ಲೆಗಳ ತಮಿಳುನಾಡು, ಸಮುದಾಯಗಳ ಕೊಂಗು ವೆಳ್ಳಲಾರ್ ಮತ್ತು ವೆಟ್ಟುವರ್ ಈ ಹೆಸರುವಾಚಿಕೆಯನ್ನು ಬಳಸುತ್ತಿದ್ದಾರೆ. == ವ್ಯುತ್ಪತ್ತಿ == ಇದಕ್ಕೆ ಹಲವಾರು ವ್ಯುತ್ಪತ್ತಿಗಳಿವೆ. ಒಂದು ಸಿದ್ಧಾಂತವು ಇದನ್ನು ತಮಿಳು ಪದ ಕಾಮಿಂದನ್‌ನಿಂದ ಪಡೆದಿದೆ, ಇದರರ್ಥ "ದೇಶದ ಉದಾತ್ತ ರಕ್ಷಕ", ನಂತರ ಇದನ್ನು ಕವುಂಡನ್ ಅಥವಾ ಗೌಂಡರ್ ಎಂದು ಮಾರ್ಪಡಿಸಲಾಗಿದೆ ಎಮದು ಹೇಳುತ್ತದೆ. ಎಸ್.ಎನ್ ಸದಾಶಿವಂ ಅವರ ಪ್ರಕಾರ, ತಮಿಳು ಕೌದನ್ಸ್ ಅಥವಾ ಗೌಡನ್ಸ್, ಕವಲೊಡೆಯಿತು ಹಾಗೂ ಒಕ್ಕಲಿಗ ಮತ್ತು ಕುರುಬ ಎರಡೂ ಒಂದು ಸಾಮಾನ್ಯ ಮೂಲವನ್ನು ಹೊಂದಿರಬಹುದು ಎಂಬ ಅಭಿಪ್ರಾಯವಿದೆ. == ಇತಿಹಾಸ == ಬ್ರಿಟಿಷ್ ರಾಜ್ ಯುಗದ ಕೆಲವು ಗೌಂಡರ್ ಜನರು ವಲಸೆ ಹೋಗಿ ಮಲಯನ್ ರಬ್ಬರ್ ತೋಟಗಳ ಕೂಲಿಗಳಾಗಿ ಕಾರ್ಯ ನಿರ್ವಹಿಸಿದರು. == ಉಲ್ಲೇಖಗಳು ==