ಗೌರಾಮಿ ದಕ್ಷಿಣ ಏಷಿಯಾದಲ್ಲಿ ಕಂಡು ಬರುವ ಮೀನು.ಜಾವ,ಮಾರಿಷಸ್, ಭಾರತ,ಪಾಕಿಸ್ತಾನದಿಂದ ಹಿಡಿದು ಕೋರಿಯಾದವರೆಗೂ ಕಂಡುಬರುತ್ತದೆ. == ವೈಜ್ಞಾನಿಕ ಹೆಸರು == ಅನಬ್ಯಾಂಟಿಡೀ ಕುಟುಂಬಕ್ಕೆ ಸೇರಿದ ಮೀನು. ಇದರ ವೈಜ್ಞಾನಿಕ ನಾಮ ಅಸ್‍ಫ್ರೋನೀಮಸ್ ಗೋರಾಮಿ ಎಂದು.ಇದರಲ್ಲಿ ಸುಮಾರು ೧೩೩ ಪ್ರಬೇಧಗಳನ್ನು ಗುರುತಿಲಾಗಿದೆ. == ಲಕ್ಷಣಗಳು == ಪಕ್ಕದಿಂದ ಪಕ್ಕಕ್ಕೆ ಚಪ್ಪಡೆಯಾದ ದೇಹ,ಈಜು ರೆಕ್ಕೆಯ ಬುಡದಲ್ಲಿ ಕಪ್ಪು ಮಚ್ಚೆ ಇದರ ಪ್ರಧಾನ ಲಕ್ಷಣ.ಕಿವಿರುಗೂಡಿನಲ್ಲಿ ಇರುವ ಸಹಾಯಕ ಶ್ವಸನ ಇಂದ್ರಿಯದಿಂದ ನೇರವಾಗಿ ಹೊರಗಿನ ವಾಯುವನ್ನು ಬಳಸಿಕೊಳ್ಳಬಲ್ಲದು. == ಸಾಕಣೆ == ಇವುಗಳು ಸಿಹಿನೀರು ಮತ್ತು ಉಪ್ಪುನೀರು ಎರಡರಲ್ಲೂ ಜೀವಿಸಬಹುದಾದುದರಿಂದ ಸಾಕಣೆ ಮೀನಾಗಿ ಉಪಯುಕ್ತ. == ಉಪಯೋಗ == ಇದನ್ನು ಅಲಂಕಾರಿಕ ಸಾಕಣೆಗೆ ಮೀನು ಪೆಟ್ಟಿಗೆಗಳಲ್ಲಿ ಉಪಯೋಗಿಸುತ್ತಾರೆ. ಆಹಾರ ಪದಾರ್ಥವಾಗಿ ಇಂಡೋನೇಷ್ಯಾ ಮುಂತಾದ ದೇಶಗಳಲ್ಲಿ ಉಪಯೋಗಿಸುತ್ತಾರೆ. == ಛಾಯಾಂಕಣ == == ಉಲ್ಲೇಖಗಳು ==