ದಿ ಗ್ಯಾಂಬಿಯ ( ಅಧಿಕೃತ ಹೆಸರು - ದಿ ಗ್ಯಾಂಬಿಯ ಗಣರಾಜ್ಯ) ಅಥವಾ ಗ್ಯಾಂಬಿಯ ಪಶ್ಚಿಮ ಆಫ್ರಿಕಾದಲ್ಲಿನ ಒಂದು ರಾಷ್ಟ್ರ. ಇದು ಆಫ್ರಿಕಾ ಭೂಖಂಡದಲ್ಲಿ ಅತಿ ಚಿಕ್ಕ ರಾಷ್ಟ್ರವಾಗಿದೆ. ಗ್ಯಾಂಬಿಯವು ಉತ್ತರ,ಪೂರ್ವ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಸೆನೆಗಾಲ್ ದೇಶದಿಂದ ಸುತ್ತುವರೆಯಲ್ಪಟ್ಟಿದೆ. ಪಶ್ಚಿಮಕ್ಕೆ ಅಟ್ಲಾಂಟಿಕ್ ಮಹಾಸಾಗರವಿದೆ. ನಾಡಿನ ಸರಿಸುಮಾರು ಮಧ್ಯಭಾಗದಲ್ಲಿ ಗ್ಯಾಂಬಿಯ ನದಿ ಹರಿಯುತ್ತದೆ. ೧೯೬೫ರಲ್ಲಿ ಗ್ಯಾಂಬಿಯ ಬ್ರಿಟಿಷರ ಆಡಳಿತದಿಂದ ಮುಕ್ತವಾಗಿ ಸ್ವತಂತ್ರವಾಯಿತು.