ಚಲಗೇರಾ ಗ್ರಾಮವು ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿದೆ. == ಭೌಗೋಳಿಕ == ಗ್ರಾಮವು ಭೌಗೋಳಿಕವಾಗಿ 16*°30'8" ಉತ್ತರ ಅಕ್ಷಾಂಶ ಮತ್ತು 75*27'51"ಪೂರ್ವ ರೇಖಾಂಶದಲ್ಲಿ ಬರುತ್ತದೆ. == ಜನಸಂಖ್ಯೆ == ಗ್ರಾಮದಲ್ಲಿ ಜನಸಂಖ್ಯೆ ಸುಮಾರು 10,000 ಮಾತ್ರ ಇದೆ. ಅದರಲ್ಲಿ 6,000 ಪುರುಷರು ಮತ್ತು 4,000 ಮಹಿಳೆಯರಿದ್ದಾರೆ. == ಹವಾಮಾನ == •ಬೇಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದಲ್ಲಿ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತೀ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ ಏಪ್ರಿಲನಲ್ಲಿ, ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ ಡಿಸೆಂಬರನಲ್ಲಿ ಉಷ್ಣತೆ ದಾಖಲಾಗಿದೆ. •ಬೇಸಿಗೆಕಾಲ:೩೫°-೪೨° •ಚಳಿಗಾಲ/ಮಳೆಗಾಲ:೪೮°-೨೮° •ಮಳೆ: ಪ್ರತೀ ವರ್ಷ ಮಳೆಯು ೩೦೦ -0 ೬೦೦ಮಿ.ಮಿ ಗಳಷ್ಟು ಆಗಿರುತ್ತದೆ.(ಬರಗಾಲ ಬಂದಾಗ ಇಲ್ಲ) •ಗಾಳಿ : ಗಾಳಿವೇಗ ೧೮.೨ ಕಿಮಿ/ ಗಂ (ಜೂನ),೧೯.೬ ಕಿಮಿ/ಗಂ (ಆಗಸ್ಟ) ಇರತ್ತದೆ. == ಸಾಂಸ್ಕೃತಿಕ == ಮುಖ್ಯ ಭಾಷೆ: ಕನ್ನಡ ಇದರ ಜೊತೆಗೆ ಕೆಲವರು ಇಂಗ್ಲೀಷ, ಹಿಂದಿ ಮಿಶ್ರಿತ ಕನ್ನಡ ಮಾತನಾಡುತ್ತಾರೆ. ಆಹಾರ ಧಾನ್ಯಗಳು: ಜೋಳ ಇದರ ಜೊತೆಗೆ ಗೋದಿ,ಅಕ್ಕಿ , ಮೆಕ್ಕೆಜೋಳ ಹಾಗೂ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ , ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ , ಶೇಂಗಾ ಚಟ್ನಿ , ಎಣ್ಣಿ ಬದನೆಯಕಾಯಿ ಪಲ್ಯ , ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ. == ಕಲೆ ಮತ್ತು ಸಂಸ್ಕೃತಿ == ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ , ನೆಹರು ಅಂಗಿ , ಮತ್ತು ರೇಷ್ಮೆ ರುಮಾಲು ಧರಿಸುತ್ತಾರೆ. ಮಹಿಳೆಯರು ಇಳಕಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. == ಧರ್ಮ == ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ. == ದೇವಾಲಯಗಳು == ಗ್ರಾಮದಲ್ಲಿ ಐದು ದೇವಾಲಯಗಳಿವೆ. ಹನುಮಾನ ದೇವಾಲಯ ಅಂಬಾ ಭವಾನಿ ದೇವಾಲಯ ಚೌಡೇಶ್ವರಿ ದೇವಾಲಯ ಲಕ್ಷ್ಮೀ ದೇವಾಲಯ ಪಾಂಡುರಂಗ ವಿಠಲ ದೇವಾಲಯ == ಆಶ್ರಮಗಳು == ಓಂ ಶ್ರೀ ದೇವಿಲಿಂಗ ಹವಾಮಲ್ಲಿನಾಥ ಮಹಾರಾಜ ಆಶ್ರಮ. ಓಂ ಶ್ರೀ ಶಾಂತೇಶ್ವರ ಆಶ್ರಮ. == ಮಸೀದಿ == ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ. == ಆರ್ಥಿಕತೆ == ಗ್ರಾಮದಲ್ಲಿ ಆರ್ಥಿಕತೆ ಮಾಧ್ಯಮ ತರಗತಿಯಲ್ಲಿದೆ. == ರಾಜಕೀಯ == ಗ್ರಾಮವು ಬೀದರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇದೆ. ನಿಂಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತದೆ.ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿದೆ.ಗ್ರಾಮದಲ್ಲಿ 4 ಗ್ರಾಮ ಪಂಚಾಯಿತಿ ವಲಯಗಳಿವೆ. == ಅಂಚೆ ಕಚೇರಿ == ಉಪ ಅಂಚೆ ಕಚೇರಿ, ಚಲಗೇರಾ == ಶಾಲೆ == ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಲಗೇರಾ == ಉಲ್ಲೇಖ == ಚಲಗೇರಾ ಗ್ರಾಮವು ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿದೆ. ಪಿನಕೋಡ : 585236 ಗ್ರಾಮವು ನಿಂಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದೆ. ಹಾಗೂ ಮಾದನ ಹಿಪ್ಪರಗಾ ಹೋಬಳಿ ವ್ಯಾಪ್ತಿಯಲ್ಲಿ ಇದೆ. ಆಳಂದ - ಅಫಲಪುರ ರಾಜ್ಯ ಹೆದ್ದಾರಿಯಲ್ಲಿ ಈ ಗ್ರಾಮವಿದೆ. ಮುಖ್ಯ ದೇವಾಲಯ- ಹನುಮಾನ ದೇವಾಲಯ