== ಚಾಕ್, ಪ್ರೀತಿಯ-ಮಕ್ಕಳ ಮನೆ == ಅಮೆರಿಕಾ ದೇಶದ, ಇಲಿನಾಯ್ ರಾಜ್ಯದ ನಾರ್ಮಲ್-ಬ್ಲೂಮಿಂಗ್ಟನ್ ನಗರದ ಮಧ್ಯದಲ್ಲಿರುವ ಚಾಕ್ ಮಕ್ಕಳ-ಮನೆ, ಒಂದು ಅನುಕರಣೀಯ ಶಿಶು-ಕಲ್ಯಾಣ ಕೇಂದ್ರಗಳಲ್ಲೊಂದು. ಚಾಕ್ ಶಿಶು ಕಲ್ಯಾಣಕೇಂದ್ರ ನಿರ್ವಹಿಸುತ್ತಿರುವ ಕಾರ್ಯ-ರೀತಿ ಬೇರೆ ಎಲ್ಲಾ ಸಂಸ್ಥೆಗಳಿಗೂ, ಅನುಕರಣೀಯವಾದದ್ದು. ವೈಜ್ಞಾನಿಕ ಪದ್ಧತಿಗಳನ್ನು ತಮ್ಮ ಕಾರ್ಯ-ವೈಖರಿಯಲ್ಲಿ ಅಳವಡಿಸಿಕೊಂಡು, ಶಿಶುಗಳ ಸೇವೆಯನ್ನು ದೇವರಕಾರ್ಯವೆಂದು ಭಾವಿಸಿ ಅದೇ-ಮಾನಸಿಕತೆಯನ್ನು ಹೊಂದಿದ ಜವಾಬ್ದಾರಿಯುತ ಸಿಬ್ಬಂದಿಗಳ ನೆರವಿನಿಂದ ಶ್ರಮಿಸುತ್ತಿರುವ ಈ ಶಿಶು ಕಲ್ಯಾಣಕೇಂದ್ರ ಒಂದು ಮಾದರಿಸಂಸ್ಥೆಯಾಗಿ ಬೆಳೆದಿದೆ. ೨ ರಿಂದ ೬ ವರ್ಷಗಳ ಒಳಗಿನ ಚಿಣ್ಣರ ಕಲ್ಯಾಣಕೇಂದ್ರಕ್ಕೆ ನಾವು ಭೇಟಿ ಕೊಟ್ಟಾಗ, ಯಾವುದೋ ಒಂದು ವಿಸ್ಮಯಜಗತ್ತನ್ನು ಪ್ರವೇಶಿಸಿದ ಭಾವನೆ ಬರುತ್ತದೆ. == ಚಾಕ್, ಒಂದು ಹೊಸ-ಆಲೋಚನಾಕ್ರಮದ ಮಕ್ಕಳ-ಶಾಲೆ == ಎಲ್ಲಾ ಊರುಗಳಲ್ಲಿರುವಂತಹ ಇದೂ ಒಂದು ಕ್ರೆಷ್ ಇರಬಹುದೇನೋ ಅಂದುಕೊಂಡು ಪಾದಾರ್ಪಣೆಮಾಡಿದಾಗ, ನಮಗಾಗುವ ಅನುಭವಗಳು ಅನನ್ಯವಾದದ್ದು. ನಮ್ಮದೇಶದಲ್ಲೂ ಮುಂಬಯಿ, ಪುಣೆ, ಪಂಚಗಣಿ, ದೆಹಲಿ, ಚೆನ್ನೈ, ಕೊಲ್ಕತ್ತ, ಬೆಂಗಳೂರು, ಮುಂತಾದ ನಗರಗಳಲ್ಲಿ ಇಂತಹ ಕೇಂದ್ರಗಳು ಸರ್ವೇ-ಸಾಮಾನ್ಯವಾಗಿವೆ. ಶ್ರೀಮಂತರು ತಮ್ಮ ಪ್ರೀತಿಪಾತ್ರರಾದ ಮಕ್ಕಳನ್ನು ಕ್ರೆಷ್ ಗಳಲ್ಲಿ ಬಿಡುತ್ತಾರೆ. ದಿನವಿಡೀ ಕಾಡುವ ಮಕ್ಕಳಿಂದ ದೂರವಿರಬಹುದೆಂದು. ಕೆಲಸಕ್ಕೆ ಹೋಗುವ ತಾಯಿತಂದೆಯರು, ಹಾಗೆತಾನೇ ಭಾವಿಸುವುದು ? ಆದರೆ ಅದರೊಳಗೆ ಹೋದಾಗ ಅನ್ನಿಸಿದ್ದು, ಅಲ್ಲ- ಅದು ಮಕ್ಕಳಿಗಾಗಿಯೇ ಅತಿಜಾಗರೂಕತೆಯಿಂದ ಹಲವಾರು ವರ್ಷಗಳಕಾಲ ಅತ್ಯಂತ, ಶ್ರದ್ಧೆ, ತಾಳ್ಮೆ ಹಾಗೂ ಸಂಯಮಗಳಿಂದ, ಮಕ್ಕಳಲ್ಲಿ ಸುಶುಪ್ತವಾಗಿ ಅಡಗಿರುವ, ಸಂವೇದನೆಗಳು, ಜಾಣ್ಮೆ, ಕುಶಲತೆಗಳನ್ನು ಅವರಿಗೆ ಖಾತ್ರಿಮಾಡಿಸಿ ಅವರಲ್ಲಡಗಿರುವ ಎಲ್ಲಾ ಜಾಣತನದ ಖಜಾನೆಯ ಸಂಪತ್ತನ್ನೂ ಹೊರತರುವ ಅವರ ಪ್ರೀತಿಯ ಮಕ್ಕಳ-ಮನೆ ಮತ್ತು ಶಿಕ್ಷಣಕೇಂದ್ರ. == ಚಾಕ್ ಶಿಶು ಕೇಂದ್ರ == ೨೪೩೨, ಮಾಲೋನಿ ರಸ್ತೆಯಲ್ಲಿರುವ ಈ ಪುಟ್ಟಶಾಲೆ, ಇಲಿನಾಯ್ ನ, ಬ್ಲೂಮಿಂಗ್ಟನ್ ನಗರದ ಬಳಿಯಿರುವ ೧೦,೦೦೦ ಚದರಡಿ ಜಾಗವಿರುವ ಕಟ್ಟಡದಲ್ಲಿ, ೭ ಕ್ಲಾಸ್ ರೂಮ್ ಗಳಿವೆ. ೨೦೦೦ ಚದರಡಿ ಸ್ಥಳವಿರುವ ( ) ವಿಶಾಲ ಪರಿಸರದ ಶಾಲೆ, ಅತ್ಯಂತ ಮುದಕೊಡುವ ಜಾಗ. ಇಲ್ಲಿ ಮಕ್ಕಳ ಮನರಂಜನೆ, ಅವರ ಸ್ವಂತ-ಕಲಿಕೆ, ಹಾಗೂ ಸಮಸ್ಯೆಗಳನ್ನು ಎದುರಿಸಿ ಮುಂದುವರೆಯುವ ಪ್ರತಿಯೊಂದು ಹೊಸ-ವಿಧಾನಗಳನ್ನೂ ಅತ್ಯಂತ ಎಚ್ಚರಿಕೆಯಿಂದ ಹೆಣೆದು ಅಳವಡಿಸಿದ್ದಾರೆ. ಶಾಲೆಯ ಒಳಭಾಗದ ಆಕ್ಟಿವಿಟಿ-ವಲಯಗಳು ಒಟ್ಟು ೩. ೧. ೨. ೩. ಒಳಗೆ ಪ್ರವೇಶಮಾಡಿದಾಗ ನಮಗೆ ಗೋಚರಿಸುವ ದೃಷ್ಯಗಳು, ಅಷ್ಟು ಪುಟಾಣಿ ವಯಸ್ಸಿನ ಮಕ್ಕಳೆಲ್ಲಾ ಮಕ್ಕಳಮನೆಗೆ ಹೋಗಲು ಅದೆಷ್ಟು ಇಷ್ಟಪಡುತ್ತಾರೆ ಎನ್ನುವ ವಿಷಯ. ಪೋಷಕರು, ಶಿಕ್ಷಕರು ಜೊತೆಗೂಡಿ ಅವರಿಗೆ ಕೊಡುವ ಪ್ರೀತಿ, ಸ್ವಾತಂತ್ರ್ಯ, ಹಾಗೂ ಪ್ರೋತ್ಸಾಹಗಳಲ್ಲಿ ಏನೆಲ್ಲಾ ಪ್ರಭಾವೀ-ಶಕ್ತಿಗಳು ಅಡಗಿವೆ ಹಾಗೂ ಅವುಗಳನ್ನು ಹೊರತರಲು, ಸರಳ ಸಾಧ್ಯತೆಗಳಿವೆ ಎನ್ನುವ ವಿಷಯ, ಅರಿವಾಗುತ್ತದೆ. == ನುರಿತ-ಅನುಭವೀ ಶಿಕ್ಷಕಿಯರ ತಂಡ == ಚಾಕ್ ನಲ್ಲಿ ದುಡಿಯುವ ಶಿಕ್ಷಕರು, ವಿಶೇಷ ತರಪೇತಿಪಡೆದ, ಸೇವಾನಿರತ-ಮಕ್ಕಳನ್ನು ಪ್ರೀತಿಸುವ ಹೆಣ್ಣುಮಕ್ಕಳು. ಕೇವಲ ಹಣಕ್ಕಾಗಿ ಕೆಲಸಮಾಡುವವರಲ್ಲ. ಪ್ರತಿಮಗುವನ್ನೂ ಸರಿಯಾಗಿ ಗಮನಿಸಿ ಅದರ ಮನೋಭಾವವನ್ನು ಅರ್ಥಮಾಡಿಕೊಂಡು ಅದಕ್ಕಾಗಿಯೇ ಬೇಕಾದ ಮೂಲದ್ರವ್ಯಗಳನ್ನು ರೂಪಿಸಿ, ಮಕ್ಕಳಮನಸ್ಸನ್ನು ಗೆಲ್ಲುವ ಕಲೆ, ಅವರಿಗೆ ಕರಗತ. ಕ್ರಿಶ್ಚಿಯನ್ ಮತಸಂಸ್ಥೆಗಳು, ನಿರ್ವಹಿಸುವ ಸೇವಾ-ಕಾರ್ಯಗಳು ಸಾಮಾನ್ಯವಾಗಿ ಅನುಕರಣೀಯವಾಗಿರುತ್ತವೆ. ನಮ್ಮ ದೇಶದ ಕೆಲವು ಆಸ್ಪತ್ರೆಗಳಲ್ಲಿ ಅವರು ಮಾಡುವ ರೋಗಿಗಳ-ಸೇವೆ, ಎಲ್ಲರನ್ನೂ ದಿಗ್ಭ್ರಮೆಗೊಳಿಸುತ್ತದೆ. == - == ಮಕ್ಕಳ ಮನಸ್ಸಿನಲ್ಲಿ ಚಿಕ್ಕವಯಸ್ಸಿನಲ್ಲಿಯೇ ಯಶಸ್ಸನ್ನು ಕಾಣುವ ಭರವಸೆ ಮೂಡಿಸುವುದು ಅತಿಮುಖ್ಯ. ಅವರೇ ತಮ್ಮ ಕೈಗಳಿಂದ ಸ್ವಂತವಾಗಿ ಕೆಲಸಮಾಡುವ ಸೌಕರ್ಯಗಳನ್ನು ಒದಗಿಸುತ್ತಾರೆ. ಗೆಲುವಿನ ಹಾದಿಯಲ್ಲಿ ಮುಂದುವರೆಯುವ ಗುಣವನ್ನು ಬೆಳೆಸಿ, ನೀರೆರೆಯುತ್ತಾರೆ. ಪ್ರತಿ ತಿಂಗಳಿಗೆ ೭೦೦ ಡಾಲರ್ ಫೀ ಕೊಡಬೇಕಾಗುತ್ತದೆ. ಅಂತಹ ಹಣವನ್ನು ತುಂಬಲು ಸಮರ್ಥರಾದ ತಂದೆತಾಯಂದಿರೇ ಅಲ್ಲಿಗೆ ಹೆಚ್ಚಾಗಿ ಬರುವುದು. ಅಲ್ಲಿನ ಪರಿಸರದಲ್ಲಿ ಕಲಿಯುವ ಸಾಧ್ಯತೆಗಳು ಅತಿ-ಹೆಚ್ಚು. ಹೊಸಭಾಷೆಗಳು, ಕರ-ಕೌಶಲ್ಯಗಳು, ನಯವಾದ ಮಾತು-ಕತೆ, ಎಲ್ಲರಲ್ಲೂ ಬೆರೆಯುವ ಮನೋಭಾವ, ಸದ್ಗುಣಗಳ ಕಲಿಕೆ, ದೇಶಪ್ರೇಮ, ದೇಶಭಾಷಾಪ್ರೇಮ, ಹೊಂದಾಣಿಕೆ, ಸಾಮಾನ್ಯ ಜ್ಞಾನ, ಇತ್ಯಾದಿಗಳು. ಧೈರ್ಯ, ಆತ್ಮವಿಶ್ವಾಸಗಳನ್ನು ಅನೇಕ ಸುಲಭಮಾರ್ಗಗಳಲ್ಲಿ ಮಕ್ಕಳಮನಸ್ಸಿನಲ್ಲಿ ಭದ್ರವಾಗಿ ಮುದ್ರಿಸಿಬಿಡುತ್ತಾರೆ. == ಸೇವಾಮನೋಭಾವದ ಭದ್ರ-ಬುನಾದಿ == ಸೇವಾಮನೋಭಾವ, ನಿಜವಾಗಿಯೂ ಹೇಳಿಕೊಡಲಾಗದ ಭಾಗ. ಅವನ್ನು ಮಕ್ಕಳೇ ತಮ್ಮ ಜೀವನದಲ್ಲಿ ವಾಸ್ತವವಾಗಿ ಅನುಭವಿಸಿ ಕಂಡುಕೊಳ್ಳಬೇಕು. ಬಲಹೀನರ-ಸೇವೆ, ಭಯಂಕರ-ರೋಗಗಳಿಂದ ನರಳುವವರ ಸೇವೆ, ವಯಸ್ಸಾದವರ ಸೇವೆ, ಅಂಗವಿಕಲರ ಸೇವೆ, ಇತ್ಯಾದಿಗಳ ಬಗ್ಗೆ ನಮ್ಮ ತಿಳಿವಳಿಕೆಬಹಳ ಕಡಿಮೆಯೆನ್ನುವ ವಿಷಯದ ಗಮನ ನಮಗೆ ಬರುತ್ತದೆ. ಅದೆಷ್ಟೋ ವಿಷಯಗಳಲ್ಲಿ ಪಾಲಕರು, ಹಾಗೂ ನಮ್ಮ ಮಕ್ಕಳು ಪರಿಣತಿ ಪಡೆಯಬೇಕಾಗುತ್ತದೆ. ನಮ್ಮ ಕಾಲದ ಜೀವನಕ್ಕೂ ಇಂದಿನ-ಮುಂದಿನ ಸ್ಪರ್ಧಾತ್ಮಕ ಜೀವನದ ಆವಶ್ಯಕತೆಗಳಿಗೂ ಅಜ-ಗಜಾಂತರ ಅಂತರವಿರುತ್ತದೆ. ಪ್ರಗತಿಶೀಲ ರಾಷ್ಟಗಳಲ್ಲಿ ಅವುಗಳ ಆವಶ್ಯಕತೆಗಳು ಹಾಗೂ ಕಾಳಜಿ ಇನ್ನೂ-ಮತ್ತಷ್ಟು-ಹೆಚ್ಚು. ://..//. 2009-05-27 ವೇಬ್ಯಾಕ್ ಮೆಷಿನ್ ನಲ್ಲಿ.