ಚಾರುಕೇಶಿಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ಇಪ್ಪತ್ತೈದನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ತರಂಗಿಣಿ ಎಂದು ಹೆಸರಿಸಿದ್ದಾರೆ. ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿಯೂ ಇದೇ ಹೆಸರಿನ ರಾಗವಿದೆ. == ರಾಗ ಲಕ್ಷಣ ಮತ್ತು ಸ್ವರೂಪ == ಇದು ಐದನೆಯ "ಬನ" ಚಕ್ರದ ಎರಡನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ. ಆರೋಹಣ ಸ ರಿ೨ ಗ೩ ಮ೦ ಪ ದ೧ ನಿ೨ ಸ' ಅವರೋಹಣ ಸ' ನಿ೨ ದ೧ ಪ ಮ೧ ಗ೩ ರಿ೨ ಸ ಇದು ಒಂದು ಸಂಪೂರ್ಣ ರಾಗವಾಗಿದೆ.ಇದು ಕೇಳುಗರಲ್ಲಿ ಭಕ್ತಿ ಮತ್ತು ಕಾರುಣ್ಯ ರಸವನ್ನು ಸ್ಪುರಿಸುವಂತಹ ರಾಗವಾಗಿದೆ. == ಜನ್ಯ ರಾಗಗಳು == ಈ ರಾಗಕ್ಕೆ ಕೆಲವು ಜನ್ಯ ರಾಗಗಳಿದ್ದು,ಪೂರ್ವಧನ್ಯಾಸಿ ತಕ್ಕಮಟ್ಟಿಗೆ ಬಳಕೆಯಲ್ಲಿದೆ. == ಜನಪ್ರಿಯ ರಚನೆಗಳು == ಈ ರಾಗದಲ್ಲಿ ಜನಪ್ರಿಯ ರಚನೆಗಳು ಈ ರಾಗವು ಬಹಳ ಜನಪ್ರಿಯವಾಗಿದ್ದು, ಇನ್ನೂ ಹಲವಾರು ರಚನೆಗಳು ಜನಪ್ರಿಯವಾಗಿವೆ. ಹಲವಾರು ಭಾಷೆಗಳಲ್ಲಿ ನೂರಾರು ಚಿತ್ರಗೀತೆಗಳು ರಚನೆಯಾಗಿದ್ದು ಭಕ್ತಿಗೀತೆಗಳೂ ಸಾಕಷ್ಟು ಇವೆ.ಗಝಲ್ ಗಾಯನದಲ್ಲೂ ಬಳಕೆಯಲ್ಲಿದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಯೂ ಟ್ಯೂಬ್‍ನಲ್ಲಿ ಚಾರುಕೇಶಿ ರಾಗ, ಪಿಟೀಲು ವಾದನ,ಟಿ.ಚೌಡಯ್ಯನವರಿಂದ * ()