ಚಿಂಚೋಳಿಯು ಕರ್ನಾಟಕ ರಾಜ್ಯದ,ಕಲಬುರಗಿ ಜಿಲ್ಲೆಯ ಪಟ್ಟಣ ಪಂಚಾಯತಿ ಮತ್ತು ತಾಲ್ಲೂಕು ಕೇಂದ್ರವಾಗಿದೆ. ಇದು ಜಿಲ್ಲಾ ಕೇಂದ್ರದಿಂದ ೮೫ ಕಿ.ಮೀ ದೂರದಲ್ಲಿದೆ. ಚಿಂಚೋಳಿಯು ಸೇಡಮ್,ಚಿತ್ತಾಪುರ,ಬೀದರ್ ಜಿಲ್ಲೆಯ ಹುಮ್ನಾಬಾದ್,ತೆಲಂಗಾಣ ರಾಜ್ಯದ ಮೆಡಕ್ ಜಿಲ್ಲೆಯ ಜಹೀರಬಾದ್, ರಂಗಾರೆಡ್ಡಿ ಜಿಲ್ಲೆಯ ತಾಂಡೂರ ಗಡಿಯನ್ನು ಹಂಚಿಕೊಂಡಿದೆ. == ಜನ ಸಂಖ್ಯಾಶಾಸ್ತ್ರ == ೨೦೧೧ ರ ಭಾರತದ ಜನಗಣತಿಯ ಪ್ರಕಾರ ಚಿಂಚೋಳಿಯು ೨೦೮೯೭ ಜನಸಂಖ್ಯೆಯನ್ನು ಹೊಂದಿದ್ದು, ೧೦೮೫೨ ಪುರುಷರು ಮತ್ತು ೧೦೦೪೫ ಮಹಿಳೆಯರು ಇದ್ದಾರೆ. == ಜಲಾಶಯ ಮತ್ತು ಅರಣ್ಯ ಪ್ರದೇಶ ಮತ್ತು ಪ್ರೇಕ್ಷಣಿಯ ಸ್ಥಳಗಳು == ಮುಲ್ಲಾಮಾರಿ ಕೆಳದಂಡೆ ಜಲಾಶಯ/ನಾಗರಾಳ ಜಲಾಶಯ . ಕುಂಚವರಂ ಅರಣ್ಯಪ್ರದೇಶ ಚಂದ್ರಂಪಳ್ಳಿ ಜಲಾಶಯ ಸುಕ್ಷೇತ್ರ ಬುಗ್ಗಿ ಎತ್ತಿ ಪೋತಾ ಜಲಪಾತ == ಸಾರಿಗೆ/ಸಂಪರ್ಕ == ಬಸ್ಸು : ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಇಲ್ಲಿಂದ ಸಂಚರಿಸುತ್ತವೆ . ರೈಲು : ಹತ್ತಿರದ ರೈಲು ನಿಲ್ದಾಣ ತಾಂಡೂರ್ ಮತ್ತು ಸೆಡಮ್.ರೈಲು ನಿಲ್ದಾಣ ೩೦ ಕಿ.ಮೀ . ವಿಮಾನ: ಹತ್ತಿರದ ವಿಮಾನ ನಿಲ್ದಾಣ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೈದ್ರಾಬಾದ್ ೧೫೫ ಕಿ.ಮೀ . ಮತ್ತು ಕಲಬುರಗಿ ವಿಮಾನ ನಿಲ್ದಾಣ 80 ಕಿ. ಮೀ == ಪ್ರಮುಖ ವ್ಯಕ್ತಿಗಳು == ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ವೈಜನಾಥ್ ಪಾಟೀಲ್-ಹೈದ್ರಾಬಾದ್ ಕರ್ನಾಟಕ ಹೋರಾಟಗಾರರು ಹಾಗು ಮಾಜಿ ಶಾಸಕರು. == ಚಿತ್ರಗಳು == == ಉಲ್ಲೇಖನಗಳು ==