== ಚಿತ್ಪಾವನ == ಚಿತ್ಪಾವನರು ಅಥವಾ ಕೋಕಣಸ್ಥರು ಎನ್ನುವುದು ಸ್ಮಾರ್ತ ಬ್ರಾಹ್ಮಣರ ಒಂದು ಸಮುದಾಯ. ಇವರು ಹೆಚ್ಚಾಗಿ ಪಶ್ಚಿಮ ಭಾರತದ ಕರಾವಳಿ ಪ್ರದೇಶದಲ್ಲಿ ವಾಸಿಸುತ್ತಾರೆ. ಚಿತ್ಪಾವನ ಸಮುದಾಯದ ಪೌರಾಣಿಕ ಮೂಲವನ್ನು ಸ್ಕಂದ ಪುರಾಣದ ಸಹ್ಯಾದ್ರಿಕಾ೦ಡದಲ್ಲಿ ಪರಶುರಾಮರ ಕಥೆಯನ್ನು ಉಲ್ಲೇಖಿಸುತ್ತಾ ವಿವರಿಸಲಾಗಿದೆ. ಇವರು ಶಾತವಾಹನರ ಕಾಲದಲ್ಲಿ ರೂಪಗೊ೦ಡ ಪ೦ಗಡವೆ೦ದೂ ಹೇಳಲಾಗುತ್ತದೆ. ಅಲ್ಲದೆ, ಪ್ರಾಕೃತ ಮರಾಠಿಯಲ್ಲಿ ಬರೆಯಲಾದ ಚಿತ್ಪಾವನರ ಉಪನಾಮವಾದ ಘೈಸಾಸ್ ನ ಉಲ್ಲೆಖ ಕೋಕಣದ (ಮಹಾರಾಷ್ಟ್ರ) ದಿವೆಯಾಗರ್ ನಲ್ಲಿ ಸಿಕ್ಕ ತಾಮ್ರಪತ್ರವೊ೦ದರಲ್ಲಿ ಇದೆ. ಈ ತಾಮ್ರಪತ್ರವು ೧೦೬೦ ನೇ ವರ್ಷದಲ್ಲಿ ರಾಜ್ಯವಾಳಿದ್ದ ಶಿಲಾಹರ ರಾಜ್ಯದ ರಾಜ ಮುರುನಿಯ ಕಾಲದ್ದು. ಆದಾಗ್ಯೂ , ಚಿತ್ಪಾವನರ ದಾಖಲಿತ ಇತಿಹಾಸವು 18 ನೇ ಶತಮಾನದಲ್ಲಿ ಆರಂಭವಾಗುತ್ತದೆ. ಛತ್ರಪತಿ ಶಾಹು ತನ್ನ ಐದನೇ ಮುಖ್ಯಮಂತ್ರಿಯಾಗಿ (ಪೇಶ್ವೆ) ಚಿತ್ಪಾವನರಲ್ಲಿ ಒಬ್ಬನಾದ ಬಾಲಾಜಿ ವಿಶ್ವನಾಥ ಭಟ್ ನನ್ನು ನೇಮಕ ಮಾಡಿದ ನಂತರ ಚಿತ್ಪಾವನರು ಮರಾಠಿ ಮಾತನಾಡುವ ಪ್ರದೇಶಗಳಲ್ಲಿ ತಮ್ಮ ಪ್ರಾಮುಖ್ಯತೆಯನ್ನು ಪಡೆದುಕೊ೦ಡರು. ತಮ್ಮ ಸತತ ಆಳ್ವಿಕೆಯ ಕಾಲದಲ್ಲಿ ಇವರಲ್ಲಿ ಕೆಲವರು ಉತ್ತಮ ಪ್ರಮುಖ ಪದವಿಗಳನ್ನು ಗಳಿಸಿದರು. ಪೇಶ್ವೆಯವರ ಆಳ್ವಿಕೆಯ ಕಾಲದಲ್ಲಿ ಇವರು ಬೇರೆ ಬೇರೆ ಪ್ರಾ೦ತ್ಯಗಳಲ್ಲಿ ನೆಲೆಗೊಂಡರು. ಚಿತ್ಪಾವನರು ಮಹಾರಾಷ್ಟ್ರ ಮೂಲದವರಾದರೂ ಭಾರತದಾದ್ಯ೦ತ ಹಾಗೂ ಅಮೆರಿಕ. ಯೂರೋಪ್ ಗಳಲ್ಲಿ ಕೂಡ ಹರಡಿಕೊ೦ಡಿದ್ದಾರೆ. ಮಹಾರಾಷ್ತ್ರದ ಕೊಂಕಣ ತೀರದ ಊರುಗಳು ಮತ್ತು ಗೋವಾದ ಊರುಗಳಿಂದ ಸುಮಾರು ೫೦೦ ವರ್ಷಗಳ ಹಿಂದೆ (ಅಂದಾಜು) ವಲಸೆ ಬಂದು ಕರ್ನಾಟಕದ ಕರಾವಳಿಯ ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರಿನ ಕಳಸ,ಶೃಂಗೇರಿಯಂತಹಾ ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳಲ್ಲಿ ನಿಂತ ಚಿತ್ಪಾವನ ಕೋಕಣಸ್ಥ ಬ್ರಾಹ್ಮಣರು ಒಂದು ವಿಶಿಷ್ಟವಾದ ಭಾಷೆಯನ್ನು ಮಾತಾನಾಡುತ್ತಾರೆ. ಅದರ ಹೆಸರು "ಆಮ್ಚಿ ಭಾಸ" ಅಥವಾ "ಚಿತ್ಪಾವನೀ ಕೊಂಕಣಿ" ಮಹಾರಾಷ್ಟ್ರದಲ್ಲಿ ಅವರು ಅನುಸರಿಸುತ್ತಿದ್ದ ಸಂಸ್ಕೃತಿ, ಸಂಪ್ರದಾಯ, ಆಚರಿಸುತ್ತಿದ್ದ ಹಬ್ಬ ಹರಿದಿನ, ಬೊಡ್ಡಣ, ಮದುವೆ, ಉಪನಯನಗಳು ಇಂದಿಗೂ ಇಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ ಎಂಬುದು ಒಂದು ಆಶ್ಚರ್ಯದ, ಹೆಮ್ಮೆಯ ವಿಚಾರ. ಕರ್ನಾಟಕದಲ್ಲಿ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧರ್ಮಸ್ಥಳ, ಕಾರ್ಕಳ ಈ ಊರುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ವಾಸಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿರುವಂತಹ ದ.ರಾ.ಬೇಂದ್ರೆ ಯವರು ಸಹ ಚಿತ್ಪಾವನ ಕುಲದವರು. ಚಿತ್ವಾವನರು ಭಾರತದ ಸ್ವಾತಂತ್ಯ ಸ೦ಗ್ರಾಮದಲ್ಲಿಯೂ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಇವುಗಳಲ್ಲಿ ಪ್ರಮುಖರಾದವರು ವಾಸುದೇವ ಬಲವಂತ ಫಡ್ಕೆ, ವಿನಾಯಕ ದಾಮೋದರ ಸಾವರ್ಕರ್, ಗೋಪಾಲಕೃಷ್ಣ ಗೋಖಲೆ ಹಾಗೂ ಬಾಲ ಗಂಗಾಧರ ತಿಲಕ್. == ಅನನ್ಯವಾದ ಚಿತ್ಪಾವನೀ ಭಾಷಾ ಪದ ಪರಿಚಯ (ಕರ್ನಾಟಕ ಶೈಲಿ) == == ಚಿತ್ಪಾವನೀ ಕ್ರಿಯಾಪದಗಳು == ಉದಾಹರಣೆಗಾಗಿ ಕೆಲವು ಕ್ರಿಯಾ ಪದಗಳು ಮತ್ತು ಅವುಗಳ ಕನ್ನಡ, ಇಂಗ್ಲಿಷ್ ಮತ್ತು ಮರಾಠೀ ಭಾಷೆಗಳ ಸಮಾನ ಅರ್ಥಗಳು: == ಚಿತ್ಪಾವನೀ ವಾಕ್ಯಗಳ ಪರಿಚಯ == ಉದಾಹರಣೆಗಾಗಿ ಕೆಲವು ವಾಕ್ಯಗಳು ಮತ್ತು ಅವುಗಳ ಕನ್ನಡ, ಇಂಗ್ಲಿಷ್ ಮತ್ತು ಮರಾಠೀ ಅನುವಾದ: (ಅನುನಾಸಿಕದಲ್ಲಿ ಹೇಳಬೇಕಾದಲ್ಲಿ, ಈ ^ ಚಿಹ್ನೆಯಿದೆ | ^ - अनुनासिकांत उच्चार करा) == ಚಿತ್ಪಾವನೀ ಪದ ಪರಿಚಯ (ಗೋವಾ ಮತ್ತು ಮಹಾರಾಷ್ಟ್ರದ ಕೊಂಕಣ ಶೈಲಿ) == ===== ಗಮನಿಸಿ: ===== ಇಲ್ಲಿ ಮೇಲ್ಕಾಣುವ ಚಿತ್ಪಾವನೀ ವಾಕ್ಯಗಳನ್ನು ://../chitpavani_bhashe/4/ [4] ಎಂಬ ಜಾಲತಾಣದ ಚಿತ್ಪಾವನೀ ಭಾಷೆಯ ಪುಟದಿಂದ ಎರವಲು ಪಡೆದು ಉಲ್ಲೇಖಿಸಲಾಗಿದೆ. ದಯವಿಟ್ಟು ಶ್ರೀಯುತ ಎಂ. ದಿವಾಕರ ಡೋಂಗ್ರೆಯವರು ಪ್ರಾರಂಭಿಸಿ ಮುನ್ನಡೆಸುತ್ತಿರುವ ".ಕರ್ನಾಟಕಚಿತ್ಪಾವನ್ಸ್.ಓಆರ್ಜಿ" ಜಾಲತಾಣವಕ್ಕೆ ಭೇಟಿ ಕೊಟ್ಟು ಚಿತ್ಪಾವನರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆದುಕೊಳ್ಳಬೇಕಾಗಿ ವಿನಂತಿ. ಈ ವಿಕೀ ಕನ್ನಡ ಪುಟವನ್ನು ಮರುಪರಿಶೀಲಿಸಿ, ಹೆಚ್ಚಿನ ಮಾಹಿತಿಗಳನ್ನು ಸೇರಿಸಿದವರು ಅಮರನಾಥ್ ಸುಬ್ರಮಣ್ಯ ದೇವಧರ್, ಬೆಂಗಳೂರು, ಇವರು. ನಿಮ್ಮ ಅನಿಸಿಕೆ ಅಭಿಪ್ರಾಯಗಳಿದ್ದಲ್ಲಿ ಅವುಗಳನ್ನು ದೇವಧರಸ್@ಜೀಮೈಲ್. ಕಾಂ ಗೆ ಕಳುಹಿಸಿರಿ. ==== ಉಲ್ಲೇಖಗಳು: ==== Hammarström, ; , ; , , . (2017). " ". 3.0. , : . Hammarström, ; , ; , , . (2017). " ". 3.0. , : . - , 1880 ://../chitpavani_bhashe ====== : ====== . . . , , / . ====== : ====== ://../ ://..//20120327201033/://../ ://../ :