ಚಿತ್ರಾಂಬರಿ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೬೬ ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ಚತುರಾಂಗಿಣಿ ಎಂದು ಹೆಸರಿಸಿದ್ದಾರೆ. . == ಲಕ್ಷಣಗಳು == ಇದು ಹನ್ನೊಂದನೆಯ ರುದ್ರ ಚಕ್ರದ ಆರನೆಯ ರಾಗ.ಇದರ ನೆನೆಪಿನ ಹೆಸರು ರುದ್ರ-ಶಾ ನೆನಪಿನ ನುಡಿಕಟ್ಟು:ಸ ರ ಗು ಮಿ ಪ ಧು ನು ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ. ಆರೋಹಣ ಸ ರಿ೨ ಗ೩ ಮ೨ ಪ ದ೩ ನಿ೩ ಸ ಅವರೋಹಣ ಸ ನಿ೩ ದ೩ ಪ ಮ೨ ಗ೩ ರಿ೨ ಸ ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ. 'ಷಡ್ಜ, ಚತುಶ್ರುತಿ ರಿಷಭ,ಅಂತರ ಗಾಂಧಾರ,ಪ್ರತಿಮಧ್ಯಮ,ಪಂಚಮ,ಚತುಶೃತಿ ಧೈವತಮತ್ತು ಕಾಕಲಿ ನಿಷಾಧ.ಇದು ೩೦ ನೆಯ ಮೇಳಕರ್ತ ರಾಗವಾದ ನಾಗನಂದಿನಿಗೆ ಸಮಾನವಾದ ಪ್ರತಿಮಧ್ಯಮವನ್ನು ಹೊಂದಿದೆ. == ಜನ್ಯ ರಾಗಗಳು == ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ.ಇದರಲ್ಲಿ ಅಮೃತವರ್ಷಿಣಿ ಜನಪ್ರಿಯ ರಾಗವಾಗಿದೆ. == ಜನಪ್ರಿಯ ರಚನೆಗಳು == ಚಿತ್ರಾಂಬರಿ ರಾಗದಲ್ಲಿ ಹಲವಾರು ಜನಪ್ರಿಯ ರಚನೆಗಳಿದ್ದು, ಕೆಲವು ಶ್ರೀ ರಾಮ ನೆಲಮಿ-ಎಂ. ಬಾಲಮುರಳಿ ಕೃಷ್ಣ ಸಾಮಗಾನಲೋಲ- ಕೋಟೀಶ್ವರ ಐಯ್ಯರ್ == ಸಂಬಂಧಿತ ರಾಗಗಳು == ಗ್ರಹಭೇದಮ್ ಸೂತ್ರವನ್ನು ಚಿತ್ರಾಂಬರಿ ರಾಗಕ್ಕೆ ಅನ್ವಯಿಸಿದಾಗ ಮೂರು ರಾಗಗಳು ದೊರೆಯುತ್ತದೆ.ಷಣ್ಮುಖಪ್ರಿಯ,ಶೂಲಿನಿ ಮತ್ತು ಧೇನುಕ. == ಉಲ್ಲೇಖಗಳು ==