ಚೆಲ್ವಾಂಬೆ ಮೈಸೂರುದೊರೆ ಕೃಷ್ಣರಾಜ ಒಡೆಯರ (೧೭೧೩-೧೭೩೨) ಪಟ್ಟಮಹಿಷಿ. ಇವಳು ಬರೆದ ವರನಂದಿ ಕಲ್ಯಾಣದಲ್ಲಿ ೭ ಸಂಧಿಗಳು ಹಾಗು ೮೮೧ ಪದ್ಯಗಳಿವೆ. ದಿಲ್ಲಿಯ ಬಾದಶಹನ ಮಗಳಾದ ವರನಂದಿ ಹಾಗು ಮೇಲುಕೋಟೆಯ ದೈವ ಚೆಲುವರಾಯಸ್ವಾಮಿಯ ವಿವಾಹವು ಈ ಕಾವ್ಯದ ವಸ್ತು. ಇವಳ ಇತರ ಕೃತಿಗಳು: ವೆಂಕಟಾಚಲ ಮಹಾತ್ಮ್ಯ ಲಾಲಿ ಪದ ಅಲಮೇಲು ಮುಂಗೈ ಲಾಲಿಪದ ತಲಕಾವೇರಿ ಮಹಾತ್ಮ್ಯ ಟೀಕೆ. 'ಕೃಷ್ಣಕರ್ಣಾಮೃತ ಟೀಕೆ'ಯನ್ನೂ ಈಕೆ ಬರೆದಿದ್ದಳೆನ್ನಲಾಗಿದೆ.